Advertisement

ಬರಲಿದೆ ಭಾರತದ ಪ್ರಸಿದ್ಧ ಉದ್ಯಮಿ ರತನ್‌ ಟಾಟಾ ಆತ್ಮಕಥೆ!

09:00 PM Jan 09, 2022 | Team Udayavani |

ನವದೆಹಲಿ: ಭಾರತದ ಪ್ರಸಿದ್ಧ ಉದ್ಯಮಿ ರತ ನ್‌ ಟಾಟಾ ಅವರ ಆತ್ಮಕಥೆ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.

Advertisement

ನಿವೃತ್ತ ಐಎಎಸ್‌ ಅಧಿಕಾರಿ ಥಾಮಸ್‌ ಮ್ಯಾಥ್ಯೂ ಅವರು ಪುಸ್ತಕ ಬರೆಯಲಿದ್ದು, ಹಾರ್ಪರ್‌ ಕೊಲಿನ್ಸ್‌ ಸಂಸ್ಥೆ ಅದನ್ನು ಪ್ರಕಟಿಸಲಿದೆ. ಹಾರ್ಪರ್‌ ಕೊಲಿನ್ಸ್‌ ಸಂಸ್ಥೆ ಬರೋಬ್ಬರಿ 2 ಕೋಟಿ ರೂ.ಗೆ ಪುಸ್ತಕದ ಜಾಗತಿಕ ಹಕ್ಕನ್ನು ಖರೀದಿಸಿದೆ.

ವೀಮಗಡ್‌ ವಂಡರ್ನಂತಹ ಪ್ರಸಿದ್ಧ ಪುಸ್ತಕಗಳನ್ನು ಬರೆದಿರುವ ಥಾಮಸ್‌ ಅವರಿಗೆ ತಮ್ಮ ಆತ್ಮಕಥೆ ಬರೆಯುವುದಕ್ಕೆ ರತನ್‌ ಟಾಟಾ ಅವರು ಈ ಹಿಂದೆಯೇ ಅನುಮತಿ ಕೊಟ್ಟಿದ್ದರು. ಅದರಂತೆ ಟಾಟಾ ಅವರ ಬಾಲ್ಯದ ಬದುಕು, ಯೌವನ, ಉದ್ಯಮಕ್ಕೆ ಸೇರಿದಂತೆ ಅನೇಕ ದಾಖಲೆಗಳನ್ನು, ಫೋಟೋಗಳನ್ನು ಥಾಮಸ್‌ ಪರಿಶೀಲಿಸಿದ್ದು, ಕಥೆ ಬರೆಯುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಕುಷ್ಟಗಿ ನಿಡಶೇಸಿ ಕೆರೆಗೆ ಚಳಿಗಾಲದ ಅತಿಥಿ : ಪಟ್ಟೆ ತಲೆಯ ಹೆಬ್ಬಾತುಗಳ ಆಗಮನ

ಮೊದಲಿಗೆ ಪುಸ್ತಕದ ಕಾಪಿರೈಟ್‌ನ ಮುಂಗಡ ಹಣವನ್ನು ಮಾತ್ರ ಥಾಮಸ್‌ ಹಾರ್ಪರ್‌ ಕೊಲಿನ್ಸ್‌ ಸಂಸ್ಥೆಯಿಂದ ಪಡೆಯಲಿದ್ದಾರೆ. ಪುಸ್ತಕ ಮಾರಾಟವಾದ ನಂತರ ಶೇಕಡಾವಾರು ಲೆಕ್ಕದಲ್ಲಿ ಲಾಭಾಂಶ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next