Advertisement

ಜಾತಿ ಸಿಂಧುತ್ವ ಸಮಸ್ಯೆಗೆ ಶೀಘ್ರ ಪರಿಹಾರ

08:51 PM Dec 28, 2021 | Team Udayavani |

ಹುಮನಾಬಾದ: ಟೋಕರಿ ಕೋಳಿ ಜಾತಿ ಸಿಂಧುತ್ವ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜನೆವರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

Advertisement

ಚಿಟಗುಪ್ಪ ತಾಲೂಕಿನ ಶಮತಾಬಾದ ಗ್ರಾಮದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಮಹಾರಾಜರ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮಂದಿರದ ಕಳಸಾರೋಹಣ ಕಾರ್ಯಕ್ರಮದಲ್ಲಿ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಿಂಧುತ್ವ ಪ್ರಮಾಣ ಪತ್ರಕ್ಕೆ ಸಮಸ್ಯೆ ಉಂಟಾಗುತ್ತಿರುವ ಕುರಿತು ಇಲ್ಲಿನ ಮುಖಂಡರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ತರೆಸಿಕೊಂಡು ಬೆಂಗಳೂರಿನಲ್ಲಿ ಅ ಧಿಕಾರಿಗಳ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ವಾಲ್ಮೀಕಿ ಸಮುದಾಯ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿ ಭವನ ನಿರ್ಮಾಣ ಮಾಡಲಾಗುತ್ತಿದೆ. ಸಮುದಾಯದ ಜನರಿಗೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.

ಸ್ವಯಂ ಉದ್ಯೋಗ ಮಾಡಲು ಮುಂದೆ ಬರುವ ಜನರಿಗೆ ಅನುದಾನ ಕಲ್ಪಿಸುವುದು. ವಾಹನ ಖರೀದಿ ಮಾಡಿ ಉದ್ಯೋಗ ಮಾಡುವ ಜನರಿಗೂ ಸಹಾಯಧನ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ವಾಲ್ಮೀಕಿ ಅವರ ಕೊಡುಗೆ ಅಪಾರವಾಗಿದೆ. ವಾಲ್ಮೀಕಿ ಮಹಾರಾಜರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಾಸಕ ರಾಜಶೇಖರ ಪಾಟೀಲ ಭಾಗವಹಿಸಿ ಮಾತನಾಡಿದರು. ಸೊಂತ ಮುಲ್ಲಾಮುರಿ ಕ್ಷೇತ್ರದ ಶರಣ ಶಂಕರಲಿಂಗ ಮಹಾರಾಜ, ಹಳ್ಳಿಖೇಡ (ಕೆ) ಆಶ್ರಮದ ದತ್ತಾತ್ರಿ ಗುರುಜಿ, ವಿಠಲಪೂರ ಆಶ್ರಮದ ಶಾಂತಿಬಾಬಾ ಮಹಾರಾಜ, ಅರ್ಜುನ ಗುರುಜಿ ತಾಳಮಡಗಿ, ಪಾಂಡುರಂಗ ಗೂರುಜಿ, ಬಿಎಸ್‌ಎಸ್‌ ಕೆ ಅಧ್ಯಕ್ಷ ಸುಭಾಷ ಕಲ್ಲೂರ, ವಿಶ್ವನಾಥ ಪಾಟೀಲ ಮಾಡಗೂಳ, ಜಗನಾಥ ಜಮಾದಾರ, ಸುನೀಲ ಭಾವಿಕಟ್ಟಿ, ಡಾ| ಸಿದ್ದಲಿಂಗಪ್ಪ ಪಾಟೀಲ, ಬ್ಯಾಂಕ್‌ ರೆಡ್ಡಿ, ಗುಂಡಾರೆಡಿ, ಗ್ರಾಪಂ ಅಧ್ಯಕ್ಷ ಮಾಣಿಕ ಹಿಪರಗಿ, ಪಾವರ್ತಿ ಪ್ರಭು, ದಯಾನಂದ ಮೇತ್ರಿ, ಸೂರ್ಯಕಾಂತ, ಚನಬಸಪ್ಪ ಪಾಟೀಲ, ಸೋಮನಾಥ ಪಾಟೀಲ, ಹಣಮಂತರಾವ ಪಾಟೀಲ, ರೇಣುಕಾ, ಝರೆಪ್ಪಾ, ಶರಣಬಪ್ಪ ಕಂದಗೂಳ, ಅಸದ ಪಟೇಲ, ನವಲಿಂಗ ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next