Advertisement

ಬ್ರಿಟನ್‌ನಲ್ಲಿ ಶೀಘ್ರ ಗಾಂಧಿ ಭಾವಚಿತ್ರವುಳ್ಳ ನಾಣ್ಯ ಬಿಡುಗಡೆ?

08:03 AM Aug 03, 2020 | mahesh |

ಲಂಡನ್‌: ಬ್ರಿಟನ್‌ ಕಟ್ಟಲು ನೆರವಾದ ಕಪ್ಪು ವರ್ಣೀಯ ವ್ಯಕ್ತಿಗಳನ್ನು ಸ್ಮರಿಸುವ ಅಭಿಯಾನವೊಂದು ಶುರುವಾಗಿರುವ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಚಿತ್ರವುಳ್ಳ ನಾಣ್ಯವೊಂದನ್ನು ಬ್ರಿಟಿಷ್‌ ಸರಕಾರ ಹೊರತರಬೇಕೆಂದು ಅಲ್ಲಿನ ಆರ್ಥಿಕ ಸಚಿವ ಹಾಗೂ ಭಾರತದ ಇನ್ಫೋಸಿಸ್‌ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಾಕ್‌ ಅವರು ಬ್ರಿಟನ್‌ ಸರಕಾರವನ್ನು ಆಗ್ರಹಿಸಿದ್ದಾರೆ.

Advertisement

ಈ ಕುರಿತಂತೆ ಬ್ರಿಟನ್‌ ರಾಯಲ್‌ ಮಿಂಟ್‌ ಅಡ್ವೆ„ಸರಿ ಕಮಿಟಿ ಪತ್ರ ಬರೆದಿರುವ ರಿಷಿ ಸುನಾಕ್‌ ಅವರು ಗಾಂಧೀಜಿಯವರ ಚಿತ್ರವುಳ್ಳ ನಾಣ್ಯಗಳನ್ನು ಬಿಡುಗಡೆ ಮಾಡಲು ಇದು ಸುಸಮಯ ಎಂದಿದ್ದಾರೆ. ಇದಕ್ಕೆ ಸ್ಪಂದಿಸಿರುವ ಯು.ಕೆ. ಖಜಾನೆ ಇಲಾಖೆ, ಸುನಾಕ್‌ ಅವರ ಮನವಿಯನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.

ಅಸಲಿಗೆ ಬ್ರಿಟನ್‌ನ ಮತ್ತೂಬ್ಬ ಸಂಸದರಾದ ಜಾವಿದ್‌ ಅವರು 2019 ಅಕ್ಟೋಬ ರ್‌ನಲ್ಲಿ ಗಾಂಧೀಜಿಯವರ ಚಿತ್ರಗಳ ನಾಣ್ಯಗಳನ್ನು ಬಿಡುಗಡೆ ಮಾಡುವಂತೆ ಸರಕಾರವನ್ನು ಆಗ್ರಹಿಸಿದ್ದರು. ಇತ್ತೀಚೆಗೆ, ಬ್ರಿಟನ್‌ನಲ್ಲಿ ವೀ ಟೂ ಬಿಲ್ಟ್ ಬ್ರಿಟನ್‌ ಎಂಬ ಅಭಿಯಾನ ಆರಂಭವಾಗಿದ್ದು ಅದರಲ್ಲಿ ಬ್ರಿಟನ್‌ ನಿರ್ಮಾಣಕ್ಕೆ ಉದಾತ್ತ ದೇಣಿಗೆ ನೀಡಿರುವ ಭಾರತ ಮೂಲದ ಬ್ರಿಟನ್‌ ಪ್ರಜೆ ನೂರ್‌ ಇನಾಯತ್‌ ಖಾನ್‌ ಹಾಗೂ ಜಮೈಕಾ ಮೂಲದ ಶುಶ್ರೂಷಕಿ ಮೇರಿ ಸೀಕೊಲ್‌ ಅವರನ್ನು ಸ್ಮರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಗಾಂಧೀಜಿಯವರ ಚಿತ್ರವುಳ್ಳ ನಾಣ್ಯದ ಬಿಡುಗಡೆಗೆ ರಿಷಿ ಅವರಿಂದ ಆಗ್ರಹ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next