Advertisement
ಹಾಗೆ ನನಗೂ ನಮ್ಮೂರು ಶಿರಸಿ ಜಾತ್ರೆ ಸದ್ಯದಲ್ಲೇ ಎಂದು ಕೇಳಿದಾಗಲೆಲ್ಲಾ ನನ್ನಲ್ಲುಂಟಾಗುವ ಸಡಗರ ಹೇಳ ತೀರದು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿದೆ. ರಾಜ್ಯದ ಪ್ರಸಿದ್ಧ ಬೃಹತ್ ಜಾತ್ರೆಗಳ ಪೈಕಿ ಇದೂ ಒಂದಾಗಿದೆ.
Related Articles
Advertisement
ಹೀಗಾಗಿಯೇ ಹಲವು ತಿಂಗಳುಗಳ ಮುಂಚೆಯೇ ರಾಜ್ಯ, ಹೊರ ರಾಜ್ಯದ ಮಾರಾಟಗಾರರು ಜಾತ್ರೆಯಲ್ಲಿ ತಮ್ಮ ಉತ್ಪನ್ನ ಮಾರಲು ಲಕ್ಷಾಂತರ ಹಣವನ್ನು ನೀಡಿ ಜಾಗವನ್ನು ನಿಗದಿಪಡಿಸಿಕೊಳ್ಳುತ್ತಾರೆ. ಪ್ರತೀ ವರ್ಷವೂ ಇದೊಂದು ಪ್ರಕ್ರಿಯೆ ಸಹಜ. ಇಲ್ಲಿಯವರೆಗೂ ಎಂದಿಗೂ ದೇವಿ ಬಂದ ಈ ಜನರ, ಭಕ್ತರ ಆಶಯವನ್ನು ನಿರಾಸೆಗೊಳಿಸಿಲ್ಲ. ಮುಂದೆಯೂ ಕೈಬಿಡುವುದಿಲ್ಲ.
ಎರಡು ವರ್ಷಗಳಿಗೊಮ್ಮೆ ಬರುವ ಶಿರಸಿಯ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಹೀಗೆ ವಿವಿಧ ದೃಷ್ಟಿಕೋನಗಳಲ್ಲಿ ನೋಡಿದಾಗ ಒಂದೊಂದು ಕಥೆಯನ್ನು ಹೇಳುತ್ತದೆ. ಪ್ರತಿ ಊರಿನ ಜಾತ್ರೆಯಲ್ಲೂ ಬೇರೆ ಬೇರೆ ಕಥೆಗಳು ಖಂಡಿತ ಇರುತ್ತವೆ. ನೋಡುವ ನೋಟ ಮತ್ತು ಸಹನೆ ನಮ್ಮಲ್ಲಿರಬೇಕು. ಆದರೂ ನಮ್ಮ ಊರು ಎಂದಾಗ ನಮ್ಮ ಗಮನ ಅಧಿಕವಾಗಿರುವುದರಿಂದ ಹೆಚ್ಚು ಚರಿತ್ರೆಗಳು ಗೋಚರಿಸಬಹುದು ಅಷ್ಟೇ.
ಪ್ರತೀ ಜಾತ್ರೆಯನ್ನೂ ಒಳ ಕಣ್ಣು ತೆರೆದು ನೋಡಿದಾಗ ಅದೆಷ್ಟೋ ಸಜೀವ ಕಥೆಗಳು ಖಂಡಿತ ಕಾಣಬಹುದು.
ಪೂಜಾ ಹಂದ್ರಾಳ
ಶಿರಸಿ