Advertisement
1966ರಲ್ಲಿ ನ್ಯೂಯಾರ್ಕ್‌ನ ಒಂದು ಹೊಟೇಲ್‌ನಲ್ಲಿ ಏರ್ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಡಾಲಿ ಇದ್ದಾಗ ಮಾತುಕತೆ ಕೊನೆಗೆ ಒಂದು ಆರ್ಟ್‌ವರ್ಕ್ ಮಾಡಿ ಕೊಟ್ಟರೆ ಚೆನ್ನಾಗಿರುತ್ತೆ ಎಂದು ಮಾತುಕತೆ ಆಗುತ್ತೆ. ಆ ಮಾತುಕತೆಯಿಂದ ರೂಪ ತಾಳಿದ್ದೇ ಈ ಆ್ಯಶ್ ಟ್ರೇ.
Related Articles
ಜಾಟ್‌ಸಿಂಗ್- ಏರ್‌ಇಂಡಿಯಾ ಅವರು ಯುರೋಪ್‌ನಲ್ಲಿ ಡಾಲಿ ಅವರಿಗೆ ಇದನ್ನು ಪುನಃ ಕ್ರಿಯೆಟ್ ಮಾಡಲು ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಡಾಲಿ ಅವರು ದುಬಾರಿ ಫೀಸ್ ಅನ್ನು ಕೇಳುತ್ತಾರೆ. ಕಲಾಕೃತಿಯ ಮರುರಚನೆಗೆ ಅವರು ಕೇಳಿದ್ದು ನಿಜವಾದ ಆನೆ ಬೇಕೆಂದು!. ಮೊದಲಿಗೆ ತಮಾಷೆಗೆ ಹೇಳಿರಬೇಕು ಎಂದುಕೊಂಡರೆ ಕೊನೆಗೆ ಸೀರಿಯಸ್ ಆಗಿ ಕೇಳಿರುತ್ತಾರೆ.
Advertisement
ಆಕೃತಿ ಹೇಗಿದೆ ?ಈ ಆ್ಯಶ್ ಟ್ರೇ ಶೆಲ್ ಅಂದರೆ ಒಂಥರಾ ಶಂಖದ ಆಕಾರದಲ್ಲಿದೆ. ಇದರ ಸುತ್ತಲೂ ಹಾವಿನ ರೀತಿಯಾಗಿ ಹೆಣೆದಿರುವ ವಿನ್ಯಾಸವಿದೆ. ಅಲ್ಲದೇ ಬದಿಗಳಲ್ಲಿ ಆನೆಯ ತಲೆಗಳು ಹಾಗೂ ಹಂಸದ ಆಕೃತಿಯಿಂದ ಕೂಡಿದೆ. ಮಾಸ್ಟರ್ ವಿವರಿಸುತ್ತಾರೆ: “ಆನೆಯ ತಲೆಯ ಪ್ರತಿಬಿಂಬವು ಹಂಸದಂತೆ ಕಾಣುತ್ತದೆ ಮತ್ತು ಹಂಸದ ಪ್ರತಿಬಿಂಬವು ಆನೆಯಂತೆ ಕಾಣುತ್ತದೆ. ನಾನು ಮಾಡಿದ್ದು ಇದನ್ನೇ. ಹಂಸವು ತಲೆಕೆಳಗಾಗಿ ಆನೆಯ ತಲೆಯಾಗುತ್ತದೆ ಮತ್ತು ಆನೆ ತಲೆಕೆಳಗಾದ ಹಂಸ.’ ಅಂತಹ ವಿಶ್ವ ಮಟ್ಟದ ಕಲಾವಿದರೊಬ್ಬರು ವಿಮಾನಯಾನ ಸಂಸ್ಥೆಗಾಗಿ ಇದನ್ನು ವಿನ್ಯಾಸಗೊಳಿಸಿದ್ದು ಇದೇ ಮೊದಲು ಮತ್ತು ಏರ್ ಇಂಡಿಯಾದಲ್ಲಿ ನಾವು ಈ ಅತ್ಯಂತ ಅಸಾಮಾನ್ಯ ಆ್ಯಶ್ ಟ್ರೇಯನ್ನು ನಿಮಗೆ ಪ್ರಸ್ತುತಪಡಿಸಲು ಸಾಧ್ಯವಾಗಿದ್ದಕ್ಕಾಗಿ ಸಂತೋಷಪಡುತ್ತೇವೆ.
ಈ ಆ್ಯಶ್‌ಟ್ರೇಯನ್ನು ಮರುರಚಿಸಲು ಇಟ್ಟ ಆನೆಯ ಬೇಡಿಕೆಯನ್ನು ಪೂರೈಸಲು ಏರ್ ಇಂಡಿಯಾವು ಬೆಂಗಳೂರಿನಿಂದ 2 ವರ್ಷದ ಆನೆ ಮರಿಯನ್ನು ಮಾವುತನೊಂದಿಗೆ ಜಿನೇವಾಕ್ಕೆ ಕರೆಸಿಕೊಳ್ಳುತ್ತದೆ. ಆನೆ ಮರಿಯನ್ನು ಕ್ಯಾಡಕ್ವೆಸ್‌ಗೆ ಕಳುಹಿಸಲಾಯಿತು. ಅಲ್ಲಿ ಮಾವುತ ಆನೆಯನ್ನು ಡಾಲಿಯ ಮನೆಗೆ ಕರೆದೊಯ್ಯುತ್ತಾನೆ. ಆನೆಯ ಆಗಮನದ ಸಂಭ್ರಮಕ್ಕೆ ಕ್ಯಾಡಕ್ವೆಸ್‌ನ ಮೇಯರ್ ಮೂರು ದಿನಗಳ ರಜೆಯನ್ನು ಘೋಷಿಸಿ, ಭಾರತೀಯ ಖಾದ್ಯಗಳನ್ನು ಒಳಗೊಂಡಂತೆ ಪಾರ್ಟಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಇದಕ್ಕೆಂದೆ ಭಾರತದಿಂದ ಪುರೋಹಿತರನ್ನು ಕರೆಸಿಕೊಳ್ಳಲಾಗುತ್ತದೆ. ಡಾಲಿಯು ಈ ಆನೆಯ ಬಗ್ಗೆ ಹಲವಾರು ಯೋಜನೆಗಳನ್ನು ಹೊಂದಿದ್ದನಂತೆ ಆದರೆ ಅವು ಫಲಿಸದೇ ಆನೆಯನ್ನು ಮೃಗಾಲಯಕ್ಕೆ ಕಳುಹಿಸಲಾಯಿತು ಎನ್ನಲಾಗುತ್ತದೆ. ಇನ್ನು ಆ್ಯಶ್ ಟ್ರೇ ಪ್ರಪಂಚದ ವಿವಿಧ ಭಾಗಗಳಲ್ಲಿ ಹರಡಿದ್ದು, ಉನ್ನತ ವ್ಯಕ್ತಿಗಳಿಗೆ ಅದನ್ನು ಉಡುಗೊರೆಯಾಗಿಯೂ ನೀಡಲಾಗಿದೆ. ಮೂರು ವರ್ಷದಿಂದ ಹುಡುತ್ತಿದ್ದ ವಸ್ತು ನನಗೆ ಸಿಕ್ಕ ಖುಷಿ ಇತ್ತು ಜತೆಗೆ ಇದು ಸ್ಪೇನ್‌ನ ರಾಜನ ಬಳಿಯೂ ಇದೆ ಎಂದು ಕೇಳಿ ನನ್ನ ಖುಷಿ ದುಪ್ಪಟ್ಟಾಯಿತು. ಬಾಲಾಜಿಗೆ ಇನ್ನೊಂದು ಸಿಕ್ಕಿದಾಗ ಕೊಡುತ್ತೀನಿ ಅಂದಿದ್ದೆ. ಈಗ ಇದು ನನ್ನ ಕಲೆಕ್ಷನ್‌ನಲ್ಲಿ ಇರುವ ಅತ್ಯಂತ ಅದ್ಭುತ ವಸ್ತು. * ಶಶಿ, ಯುಕೆ