Advertisement

ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲು

08:01 PM Dec 11, 2022 | Team Udayavani |

ಶ್ರೀರಂಗಪಟ್ಟಣ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಹಿಂದೂ ಕಾರ್ಯಕರ್ತನಿಗೆ ಪೊಲೀಸರು ಬೆದರಿಕೆ ಹಾಕಿದ ಆರೋಪದಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ  7 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

ಕಳೆದ ಭಾನುವಾರ ಸಾವಿರಾರು ಹಿಂದೂ ಕಾರ್ಯಕರ್ತರು ಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ಮೆರವಣಿಗೆ ನಡೆಸಿದ್ದರು. ಮೆರವಣಿಗೆಯ ವೇಳೆ ಗಂಜಾಂ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತನೋರ್ವ ಬಾಳೆದಿಂಡನ್ನು ಅನ್ಯಕೋಮಿನವರ ಮನೆಯ ಮೇಲೆ ಎಸೆದಿದ್ದ. ಪಾಂಡವಪುರ ಮೂಲದ ಶಶಾಂಕ್‌ ಎಂಬಾತ ಬಾಳೆದಿಂಡನ್ನು ಎಸೆದಿದ್ದು  ಸಿಸಿಟಿವಿಯಲ್ಲಿ ಸೆರೆಯಾಗಿತ್ತು, ಇದನ್ನು  ಆಧರಿಸಿ ಶ್ರೀರಂಗಪಟ್ಟಣ ಪೊಲೀಸರು ಶಶಾಂಕ್‌ನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದ  ವೇಳೆ,  ಪೊಲೀಸರು ಶಶಾಂಕ್‌ಗೆ 53 ಮುಸ್ಲಿಂ ರಾಷ್ಟ್ರಗಳಿವೆ. ನಿನ್ನ ರುಂಡ-ಮುಂಡ ಕತ್ತರಿಸುತ್ತಾರೆ ಎಂದು ಬೆದರಿಸಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಆರೋಪಿಸಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಬೆದರಿಕೆ ಹಾಕಿರುವವರನ್ನು  ಸಸ್ಪೆಂಡ್‌ ಮಾಡಿ,  ಎಫ್ಐಆರ್‌ ದಾಖಲು ಮಾಡಬೇಕೆಂದು ಪಟ್ಟು ಹಿಡಿದಿದ್ದರು.  ಸ್ಥಳಕ್ಕಾಗಮಿಸಿದ  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಯತೀಶ್‌ ರವರ ಸಂಧಾನ ಮಾತುಕತೆ ವಿಫ‌ಲಗೊಂಡಿತು.

ನಂತರ ಕಾರ್ಯಕರ್ತರು  ಜಾಮಿಯಾ ಮಸೀದಿ ಮುಂಭಾಗ ಪೆಂಡಾಲ್‌ ಹಾಕಿ ಆಹೋರಾತ್ರಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಮಣಿದ ಪೊಲೀಸ್‌ ಅಧಿಕಾರಿಗಳು  ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ 7 ಮಂದಿ ವಿರುದ್ಧ ಎಫ್ಐಆರ್‌ ದಾಖಲಿಸಿದ್ದು, ಎಫ್ಐಆರ್‌ ದಾಖಲು ಮಾಡಲಾಗಿದೆ. ಈ ಹಿನ್ನೆಲೆ ಹಿಂದೂ ಸಂಘಟನೆಗಳು ಪ್ರತಿಭಟನೆ ಕೈ ಬಿಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next