ದೇವನಹಳ್ಳಿ: ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಮಲೇಷ್ಯಾದ ಕೌಲಾಲಂಪುರ್‌ನಿಂದ ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 5ನೇ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 94 ಮಂದಿ ಅನಿವಾಸಿ ಭಾರತೀಯರು ಬಂದಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಟ್ಟು 94 ಮಂದಿ ಪ್ರಯಾಣಿಕರಲ್ಲಿ 4 ಗರ್ಭಿಣಿಯರು, 10 ವರ್ಷದೊಳಗಿನ 5 ಮಕ್ಕಳು ಸೇರಿದಂತೆ 60 ಪುರುಷರು ಮತ್ತು 34 ಮಹಿಳೆಯರು ಇದ್ದಾರೆ. ಬಳಿಕ ಏರ್‌ಇಂಡಿಯಾ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಂತರ ಗುಜರಾತ್‌ನ ಅಹಮ ದಾಬಾದ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯಿಂದ ಪ್ರಯಾಣಿಸಿ ಬಂದ 94 ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿಸಲಾಗಿ ದೆ. ಯಾವುದೇ ಪ್ರಯಾಣಿ ಕರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿರುವುದಿಲ್ಲ.
ಆರೋಗ್ಯ ತಪಾಸಣೆಯ ಬಳಿಕ, 94 ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‌ಗಾಗಿ ಹೋಟೆಲ್‌ಗಳಿಗೆ ಬಿಎಂಟಿಸಿ ಬಸ್‌ಗಳಿಂದ ಕಳುಹಿಸಿ ಕೊಡಲಾಗಿದೆ. ಕ್ವಾರಂಟೈನ್ ವೆಚ್ಚವನ್ನು ಪ್ರಯಾಣಿಕರೇ ಭರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ. ತಾಪಂ ಇಒ ವಸಂತಕುಮಾರ್, ತಾಲೂಕು ಆರೋಗ್ಯಾ ಧಿಕಾರಿ ಡಾ.ಸಂಜಯ್, ಪುರಸಭೆ ಮುಖ್ಯಾಧಿ ಕಾರಿ ಹನುಮಂತೇಗೌಡ ಇದ್ದರು.
ಬಸ್ ಸಂಚಾರಕ್ಕೆ ಪ್ರಯಾಣಿಕರ ಕೊರತೆ: ಲಾಕ್‌ಡೌನ್ ಸಡಿಲಿಕೆಗೊಳಿಸಿದರೂ ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿವೆ. ವ್ಯಾಪಾರಗಳಲ್ಲಿ ಬಿರುಸಿರಲಿಲ್ಲ. ಹೋಟೆಲ್‌ಗಳಲ್ಲಿ ಪಾರ್ಸೆಲ್ ಗಳಿಗೆ ಮಾತ್ರ ಅನುಮತಿಯಿದ್ದು, ಕೆಲವು ಗ್ರಾಹಕರು ಸ್ಥಳದಲೇ ಉಪಾಹಾರ, ಕಾಫಿ, ಟೀ ಸೇವನೆ ಮಾಡುತ್ತಿದ್ದಾರೆ.
ಪ್ರಯಾಣಿಕರ ಕೊರತೆ: ನಗರದ ಬಸ್ ನಿಲ್ದಾಣದಲ್ಲಿ ವಿವಿಧ ಊರುಗಳಿಗೆ ತೆರಳುವ ಬಸ್ ಗಳನ್ನು ಸಾರಿಗೆ ಸಂಸ್ಥೆ ವ್ಯವಸ್ಥೆ ಮಾಡಿದ್ದರೂ ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಿಗೆ ಮಾತ್ರ ಬೆಳಗ್ಗೆಯಿಂದ ಹೆಚ್ಚಿನ ಪ್ರಯಾಣಿಕರು ಬಂದಿದ್ದು ಬಿಟ್ಟರೆ ಉಳಿದ ಸ್ಥಳಗಳಿಗೆ ಪ್ರಯಾಣಿಕರ ಕೊರತೆಯಾಗಿತ್ತು. ಈ ನಡುವೆ ತುಮಕೂರು, ಕೋಲಾರ ಮೊದಲಾದ ಮಾರ್ಗಗಳಿಗೆ ಕನಿಷ್ಠ ಬಸ್‌ಗೆ ಬೇಕಾದ 25 ಮಂದಿ ಪ್ರಯಾಣಿಕರಿಲ್ಲದೇ ಬಸ್ ಬರು ವ ಹಾಗಿಲ್ಲ.
ಬಸ್ ಬಂದರೆ ಪ್ರಯಾಣಿಕ ರಿಲ್ಲ ಎಂಬಂತಾಗಿತ್ತು. ಹೆಸರು, ವಿಳಾಸ ಮೊಬೈಲ್ ಸಂಖ್ಯೆ ವಿವರ ಪಡೆಯ ಲಾಗುತ್ತಿದ್ದು, ಬಸ್ ಹತ್ತುವಾಗ ಕೈಗೆ ಸ್ಯಾನಿಟೈ ಸರ್ ಹಾಕಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಬಸ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ಪ್ರಯಾಣಿ ಕರಿಗೆ ತ್ರಾಸವಾಗಿದೆ. 60 ವರ್ಷ ಮೇಲ್ಪಟ್ಟ ವರಿಗೆ ತೀರಾ ವೈದ್ಯಕೀಯ ತುರ್ತು ಅಗತ್ಯವಿ ದ್ದರೆ ಮಾತ್ರ ಅವಕಾಶ ಮಾಡಿಕೊಡುತ್ತಿದ್ದು, ಉಳಿದವರನ್ನು ವಾಪಸ್ ಕಳುಹಿಸಲಾಯಿತು.