ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಸ್ತಾಪಕ್ಕೆ
ಉತ್ತರಿಸಿದ ಅವರು, ಪ್ರಾರಂಭದಲ್ಲಿ ಪಠ್ಯಪುಸ್ತಕ ಮುದ್ರಣ ಸ್ವಲ್ವ ವಿಳಂಬವಾಗಿದ್ದು ನಿಜ.
Advertisement
ಆದರೆ, ಈಗ ಯಾವುದೇ ಸಮಸ್ಯೆಯಿಲ್ಲ. ಶಾಸಕರ ಅಧ್ಯಕ್ಷತೆಯ ಸಮಿತಿ ಜತೆ ಚರ್ಚಿಸಿ ಅಗತ್ಯ ಇರುವಷ್ಟುಪಠ್ಯಪುಸ್ತಕ ಪೂರೈಸಲಾಗಿದೆ. ಇದೇ ಮೊದಲ ಬಾರಿಗೆ ಶಾಲೆ ಪ್ರಾರಂಭವಾದ ತಕ್ಷಣ ಪಠ್ಯಪುಸ್ತಕ, ಸಮವಸ್ತ್ರ, ಶೂ ಹಾಗೂ ಸೈಕಲ್ ವಿತರಿಸಲಾಗಿದೆ ಎಂದು ತಿಳಿಸಿದರು. ಈ ಉತ್ತರಕ್ಕೆ ತೃಪ್ತರಾಗದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಶೇ.50 ಮಾತ್ರ ಪಠ್ಯಪುಸ್ತಕ ಪೂರೈಕೆಯಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ಮತ್ತಿತರ ಕಾರಣದಿಂದ ವಿಳಂಬ ಮಾಡಿಕೊಂಡು ಮಕ್ಕಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದರಿಂದ ಸಿಟ್ಟಾದ ಸಚಿವರು, ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು ಹೌದು. ಆದರೆ, ಅದರಿಂದ ವಿಳಂಬ ಆಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಸೀಟು ಪಡೆದ ನಂತರ ವಿದ್ಯಾರ್ಥಿ ಶಾಲೆ ಬದಲಿಸಲು ಬಯಸಿದರೆ ಅಥವಾ ಶಾಲೆಯೇ ಮುಚ್ಚಲ್ಪಟ್ಟರೆ ಅಲ್ಲಿನ ವಿದ್ಯಾರ್ಥಿಗಳಿಗೆ ಸಮೀಪದ ಅನುದಾನಿತ ಶಾಲೆಗಳಲ್ಲಿ ಉಚಿತವಾಗಿ ಪ್ರವೇಶಾವಕಾಶ ಮಾಡಿಕೊಡಲಾಗುವುದು. ಒಂದು ವೇಳೆ ಶಾಲೆ ಮುಚ್ಚಲ್ಪಟ್ಟರೆ ಸಾಮಾನ್ಯ ಕೋಟಾ ಸೀಟು ಪಡೆದ ಮಕ್ಕಳಿಗೂ ಅನುದಾನಿತ ಶಾಲೆಗಳಲ್ಲಿ
ಬದಲಿ ವ್ಯವಸ್ಥೆ ಮಾಡಲಾಗುವುದು. ಆದರೆ, ಅವರು ಸರ್ಕಾರ ನಿಗದಿಪಡಿಸಿರುವ ಶುಲ್ಕ ಮಾತ್ರ ಪಾವತಿಸದರೆ
ಸಾಕು. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದರು.