Advertisement

ಕಿಸಾನ್‌ ಸಮ್ಮಾನ್‌ ಯೋಜನೆಗೆ 85 ಸಾವಿರ ಅರ್ಜಿ

10:07 PM Jul 19, 2019 | Lakshmi GovindaRaj |

ನೆಲಮಂಗಲ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ಯೋಜನೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಗಲಿರುಳು ಶ್ರಮಿಸಿದ ಅಧಿಕಾರಿಗಳು 85 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುವಂತೆ ಮಾಡಿದ್ದಾರೆ. ಇನ್ನೂ ಒಂದು ಲಕ್ಷ ಅರ್ಜಿ ಸ್ವೀಕರಿಸುವ ಗುರಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆರಂಭದಲ್ಲಿ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಅಧಿಕಾರಿಗಳಿ ಬೇಜವಾಬ್ದಾರಿ ವಹಿಸಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಒಂದೇ ತಿಂಗಳಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ವೇಗಗೊಳಿಸಿದರು. ಈಗಾಗಲೇ 56 ಸಾವಿರ ಅರ್ಜಿಗಳು ಅಪ್‌ಲೋಡ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಒಂದು ಲಕ್ಷ ಅರ್ಜಿ ಸ್ವೀಕಾರದ ಗುರಿ: ಪಿಎಂ ಕಿಸಾನ್‌ಯೋಜನೆಯು ವೇಗ ಪಡೆದುಕೊಳ್ಳಲು ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಶ್ರಮ ವಹಿಸಿದ್ದು, ಒಂದು ಲಕ್ಷ ಅರ್ಜಿ ಸ್ವೀಕಾರದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೆಲಮಂಗಲ ತಾಲೂಕಿನಲ್ಲಿ 17,598 ಅರ್ಜಿಗಳು ಸ್ವೀಕಾರವಾಗಿದ್ದು, 10674 ಅರ್ಜಿಗಳನ್ನು ಅಂತರ್‌ಜಾಲದಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು 6924ಅರ್ಜಿಗಳು ಕ್ರಮವಹಿಸಬೇಕಾಗಿದೆ.

ದೇವನಹಳ್ಳಿ ತಾಲೂಕಿನಲ್ಲಿ 19183 ಸ್ವೀಕಾರವಾಗಿದ್ದು 14361 ಅರ್ಜಿಗಳನ್ನು ಅಂತರ್‌ಜಾಲದಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು 4,822 ಕ್ರಮ ವಹಿಸಬೇಕಾಗಿದೆ. ಹೊಸಕೋಟೆ ತಾಲೂಕಿನಲ್ಲಿ 21387 ಸ್ವೀಕರಿಸಲಾಗಿದ್ದು 13,075 ಅರ್ಜಿಗಳನ್ನು ಅಂತರ್‌ಜಾಲದಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, 7,026 ಬಾಕಿ ಉಳಿದಿವೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ 26,844 ಸ್ವೀಕಾರವಾಗಿದ್ದು 3,075 ಅರ್ಜಿಗಳನ್ನು ಅಂತರ್‌ಜಾಲದಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು 8,930 ಅರ್ಜಿಗಳನ್ನು ಅಪ್‌ಲೋಡ್‌ ಮಾಡಬೇಕಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ 85,031 ರ್ಜಿಗಳು ಸ್ವೀಕಾರವಾಗಿದ್ದರೆ 56,043 ಅರ್ಜಿಗಳನ್ನು ಅಂತರ್‌ಜಾಲದಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು 28,988ಅರ್ಜಿಗಳು ಅಪ್‌ಲೋಡ್‌ಆಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

ರೈತರ ಖಾತೆಗೆ ನೇರ ವರ್ಗಾವಣೆ: ರೈತರ ಖಾತೆಗೆ ನೇರವಾಗಿ 6 ಸಾವಿರ ಹಣ ವರ್ಗಾವಣೆ ಮಾಡುವ ಕೇಂದ್ರ ಸರ್ಕಾರದ ಮಹತ್ವ ಪೂರ್ಣ ಯೋಜನೆ ವೇಗ ಪಡೆದುಕೊಂಡಿದ್ದು, ರೈತರು ಮೊದಲ ಕಂತಿನ ಹಣ ಪಡೆಯುವ ಉತ್ಸಾಹದಲ್ಲಿದ್ದಾರೆ.

ಕೃಷಿ ಇಲಾಖೆ ವಿಳಂಬ: ರೈತರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕಾದ ಕೃಷಿ ಇಲಾಖೆ ಪಿಎಂ ಕಿಸಾನ್‌ಅರ್ಜಿ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಅದಕ್ಕೆ ಸಾಕ್ಷಿಯಾಗಿ ಜಿಲ್ಲೆಯಲ್ಲಿ 28,988 ಅರ್ಜಿಗಳು ಆನ್‌ಲೈನ್‌ ಅಪ್‌ಲೋಡ್‌ ಮಾಡದಿರುವುದು ತಿಳಿದು ಬಂದಿದೆ. ಇನ್ನಾದರು ಅಧಿಕಾರಿಗಳು ವೇಗವಾಗಿ ಕೆಲಸ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರು ಆರೋಪಿಸಿದ್ದಾರೆ.

ಪಿಎಂ ಕಿಸಾನ್‌ ಸಮ್ಮಾನ್‌ ಅರ್ಜಿ ಕೊಡಿ: ಕೇಂದ್ರ ಸರ್ಕಾರ 6 ಸಾವಿರ ನೀಡುವ ಪಿಎಂ ಕಿಸಾನ್‌ ಯೋಜನೆಗೆ ರೈತರು ಅರ್ಜಿ ಸಲ್ಲಿಸಲು ಅವಕಾಶವಿವೆ. ಅರ್ಜಿ ಸಲ್ಲಿಸದವರು ತಕ್ಷಣ ತಾಲೂಕು ಕಚೇರಿ, ತಾಪಂ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಅರ್ಜಿ ನೀಡುವಂತೆ ನೆಲಮಂಗಲ ತಹಸೀಲ್ದಾರ್‌ ಕೆ.ಎನ್‌ರಾಜಶೇಖರ್‌ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡರು ಪ್ರತಿಕ್ರಿಯಿಸಿ ಜಿಲ್ಲೆಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪರಿಶ್ರಮದಿಂದ 85 ಸಾವಿರ ಅರ್ಜಿಗಳನ್ನು ರೈತರಿಂದ ಪಡೆದು ಯೋಜನೆಯ ಅನುಕೂಲ ಪಡೆಯುವ ಅವಕಾಶ ಮಾಡಿಕೊಡಲಾಗುತ್ತಿದೆ, ಕೆಲವು ದಿನಗಳಲ್ಲಿ ಮೊದಲ ಕಂತಿನ ಹಣರೈತರ ಖಾತೆಗಳಿಗೆ ವರ್ಗಾವಣೆಯಾಗಲಿದೆ ಎಂದರು.

ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನೆಲಮಂಗಲ ತಾಲೂಕಿನ 17,598 ರೈತರಿಂದಅರ್ಜಿ ಪಡೆದಿದ್ದಾರೆ. ಹಗಲಿರುಳು ಕೆಲಸ ಮಾಡಿ ಯೋಜನೆಯ ಪ್ರಯೋಜನ ವೇಗವಾಗಿ ಕಾರ್ಯರೂಪಕ್ಕೆ ಬರಲು ಶ್ರಮಿಸಿದ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು.
-ಹನುಮಂತರಾಯಪ್ಪ, ತಾಪಂ ಇಒ

Advertisement

Udayavani is now on Telegram. Click here to join our channel and stay updated with the latest news.

Next