Advertisement

ಅಂತಿಮ ಕಣದಲ್ಲಿ 8 ಸಾವಿರ ಅಭ್ಯರ್ಥಿಗಳು

06:15 AM Aug 25, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಪಾಲಿನ “ಲೋಕಲ್‌ ಟೆಸ್ಟ್‌’ ಆಗಿರುವ 102 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆ.31ರಂದು ಮತದಾನ ನಡೆಯಲಿದ್ದು, ಅಂತಿಮವಾಗಿ ಒಟ್ಟು 8,340 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

Advertisement

ನಾಮಪತ್ರ ಸಲ್ಲಿಕೆಗೆ ಆ.18 ಕೊನೆ ದಿನವಾಗಿತ್ತು. ಅದರಂತೆ ಒಟ್ಟು 11,888 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ವಾಪಸ್‌ ಪಡೆಯಲು ಆ.23 ಕೊನೆ ದಿನವಾಗಿತ್ತು, 3,548 ನಾಮಪತ್ರ ವಾಪಸ್‌ ಪಡೆದುಕೊಳ್ಳಲಾಗಿದ್ದು, ಈಗ ಕಣದಲ್ಲಿ ಅಂತಿಮವಾಗಿ 8,340 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಅಂತಿಮ ಕಣದಲ್ಲಿದ್ದವರಲ್ಲಿ ಕಾಂಗ್ರೆಸ್‌ನ 2,306, ಬಿಜೆಪಿಯ 2,203, ಜೆಡಿಎಸ್‌ನ 1,397, ಪಕ್ಷೇತರರು 2,134 ಇದ್ದಾರೆ. 21 ಜಿಲ್ಲೆಗಳ 81 ತಾಲೂಕುಗಳಲ್ಲಿ 29 ನಗರಸಭೆಗಳು, 53 ಪುರಸಭೆಗಳು, 20 ಪಟ್ಟಣ ಪಂಚಾಯಿತಿಗಳಿಗೆ ಆ.31ರಂದು ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next