Advertisement
ಈ ದೂರಿನೊಂದಿಗೆ 8.4 ನಿಮಿಷ ಅವಧಿಯ ಆಡಿಯೋದ ಪೆನ್‌ಡ್ರೈವ್ ದಾಖಲೆಯಾಗಿ ನೀಡಿದ್ದಾನೆ. ಜತೆಗೆ ಈ ಆಡಿಯೋವನ್ನು “ಆರ್.ಡಿ. ಪಾಟೀಲ ಯುವ ಬ್ರಿಗೇಡ್’ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲೂ ಅಪ್‌ಲೋಡ್ ಮಾಡಿದ್ದಾನೆ.
Related Articles
Advertisement
ಆರೋಪ ನಿರಾಕರಣೆಈ ಎಲ್ಲ ಆರೋಪಗಳನ್ನು ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಅಲ್ಲಗಳೆದಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಪಾಟೀಲನೊಂದಿಗೆ ನಾನು ಮಾತನಾಡಿರುವುದು ಎನ್ನಲಾದ ಘಟನೆ ನಡೆದಿದ್ದು ಕಳೆದ ಜುಲೈನಲ್ಲಿ. ಈ ಆರೋಪದ ಬಗ್ಗೆ ಎಸಿಬಿಯವರೂ ಈಗಾಗಲೇ ತನಿಖೆ ನಡೆಸಿ ಇದರಲ್ಲಿ ಏನೂ ಹುರುಳಿಲ್ಲ ಎಂದು ಕೈಬಿಟ್ಟಿದ್ದಾರೆ. ತನಿಖಾ ಧಿಕಾರಿಗಳ ನೈತಿಕತೆ ಕುಗ್ಗಿಸಲು ಹಾಗೂ ಜನರಲ್ಲಿ ಸುಖಾಸುಮ್ಮನೆ ತನಿಖೆ ಕುರಿತು ಅನುಮಾನ ಹುಟ್ಟಿಸಲು ಹೂಡಿರುವ ತಂತ್ರ ಇದು. ನನಗೆ ಹಲವು ಬಾರಿ ತನ್ನ ಹಿಂಬಾಲಕರನ್ನು ಛೂಬಿಟ್ಟು ಹಲ್ಲೆ ಮಾಡಲೂ ಯತ್ನಿಸಿದ್ದ. ಇದೆಲ್ಲವನ್ನೂ ಎದುರಿಸಿ ಪ್ರಕರಣವನ್ನು ಒಂದು ಹಂತಕ್ಕೆ ತಂದಿರುವ ತೃಪ್ತಿ ನಮಗಿದೆ ಎಂದಿದ್ದಾರೆ. ತನಿಖೆ ಬಳಿಕ ಕ್ರಮ:ಸಿಎಂ
ಆರ್.ಡಿ.ಪಾಟೀಲ ವಿಚಾರದಲ್ಲಿ, ಆತನೇ ಬಿಡುಗಡೆ ಮಾಡಿರುವ ಹಣ ಬೇಡಿಕೆಯ ವಿಚಾರದ ವಿಡಿಯೋ ಕುರಿತು ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಅಧಿಕಾರಿಯದ್ದು ತಪ್ಪು ಎಂದು ತಿಳಿದುಬಂದರೆ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಿಎಸ್‌ಐ ಹಗರಣದ ತನಿಖೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಡೆಯುತ್ತಿದೆ. ನಾವು ಏನು ಹೇಳಲಿಕ್ಕೆ ಆಗುವುದಿಲ್ಲ. ಆದರೆ, ಮೊದಲು ನಾವು ವಿಡಿಯೋ ನೋಡೋಣ., ಆಡಿಯೋ ಕೇಳ್ಳೋಣ. ಬಳಿಕ ಸತ್ಯಾಸತ್ಯತೆ ತಿಳಿದು ಕ್ರಮದ ಬಗ್ಗೆ ವಿಚಾರ ಮಾಡೋಣ ಎಂದರು.