Advertisement

CID SIT Chargesheet; ಜಾತಿನಿಂದನೆ ಧ್ವನಿ ಮುನಿರತ್ನರದೇ: ಸಂಕಷ್ಟ

12:16 AM Dec 01, 2024 | Team Udayavani |

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಎಸ್‌ಐಟಿ ಅಧಿಕಾರಿಗಳು 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 590 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಮೂಲಕ ಮುನಿರತ್ನ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

Advertisement

ಗುತ್ತಿಗೆದಾರ ಚೆಲುವರಾಜು ಜತೆ ಮಾತನಾಡಿರುವ ಆಡಿಯೋದಲ್ಲಿರುವುದು ಶಾಸಕ ಮುನಿರತ್ನ ಅವರದೇ ಧ್ವನಿ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮುನಿರತ್ನ ಸಾರ್ವ ಜನಿಕವಾಗಿ ಜಾತಿನಿಂದನೆ ಮಾಡಿರುವುದು, ಸಾಕ್ಷಿದಾರರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವುದು ಮತ್ತು ಜಾತಿ ಜಾತಿಗಳ ನಡುವೆ ವೈಷಮ್ಯ ಉಂಟು ಮಾಡಿರುವುದು ಸಾಬೀತಾಗಿದೆ ಎಂದು ಆರೋಪಪಟ್ಟಿಯಲ್ಲಿದೆ.

590 ಪುಟ, 53 ಸಾಕ್ಷಿಗಳ ಹೇಳಿಕೆ
ಗುತ್ತಿಗೆದಾರ ಚೆಲುವರಾಜು ಜತೆ ಮುನಿರತ್ನ ಮಾತನಾಡು ವಾಗ ಮತ್ತೂಬ್ಬ ಗುತ್ತಿಗೆದಾರ ವೇಲುನಾಯ್ಕರ್‌ ಅವರ ಜಾತಿಯ ಬಗ್ಗೆ ಕೀಳಾಗಿ ಮಾತನಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯಕ್ಷ ಸಾಕ್ಷಿ ಚೆಲುವರಾಜು ಸೇರಿ ಮೂವರು ನ್ಯಾಯಾಧೀಶರ ಮುಂದೆಯೇ 164 ಅಡಿ ನೀಡಿರುವ ಹೇಳಿಕೆ, 53 ಮಂದಿಯ ಸಾಕ್ಷಿಗಳ ಹೇಳಿಕೆ ಹಾಗೂ ತಾಂತ್ರಿಕ ಸಾಕ್ಷ್ಯ ಸೇರಿ 157 ದಾಖಲೆಗಳು ಸೇರಿ 590 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಏನಿದು ಪ್ರಕರಣ?
ಚೆಲುವರಾಜು ಜತೆ ಮಾತನಾಡುವ ವೇಳೆ ಶಾಸಕ ಮುನಿರತ್ನ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ವೇಲು ನಾಯ್ಕರ್‌ ಸೆ. 13ರಂದು ವೈಯಾಲಿಕಾವಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಮುನಿರತ್ನ ನಿಂದನೆ ಮಾಡಿದ್ದ ಆಡಿಯೋವನ್ನು ಪೊಲೀಸರಿಗೆ ನೀಡಿದ್ದರು. ಪ್ರಕರಣದ ಸಂಬಂಧ ಸೆ. 14ರಂದು ಪೊಲೀಸರು ಕೋಲಾರ ಸಮೀಪದಲ್ಲಿ ಮುನಿರತ್ನ ಅವರನ್ನು ಬಂಧಿಸಿದ್ದರು.

ಚಾರ್ಜ್‌ಶೀಟ್‌ನಲ್ಲೇನಿದೆ?
ಗುತ್ತಿಗೆದಾರನ ಜತೆ ಮಾತನಾಡಿದ್ದ ಆಡಿಯೋದಲ್ಲಿ ಇರುವುದು ಮುನಿರತ್ನ ಧ್ವನಿ ಎಂಬುದು ಸಾಬೀತು
ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಇದು ದೃಢಪಟ್ಟ ಬಗ್ಗೆ ಉಲ್ಲೇಖ
ಮುನಿರತ್ನ ಸಾರ್ವಜನಿಕವಾಗಿ ಜಾತಿನಿಂದನೆ ಮಾಡಿದ್ದು ಸಾಬೀತು
ಸಾಕ್ಷಿದಾರರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವ ಬಗ್ಗೆ ವರದಿ
ಜಾತಿ ಜಾತಿಗಳ ನಡುವೆ ವೈಷಮ್ಯ ಉಂಟು ಮಾಡಿರುವುದು ಸಾಬೀತು: ತನಿಖಾಧಿಕಾರಿಗಳು
ಮತ್ತೊಬ್ಬ ಗುತ್ತಿಗೆದಾರ ವೇಲುನಾಯ್ಕರ್‌ ಅವರ ಜಾತಿ ಬಗ್ಗೆ ಕೀಳಾಗಿ ಮಾತನಾಡಿರುವುದು ಸಾಬೀತು

Advertisement
Advertisement

Udayavani is now on Telegram. Click here to join our channel and stay updated with the latest news.

Next