Advertisement
ದೇಶದ ಅತೀ ಎತ್ತರದ ಧ್ವಜಸ್ತಂಭ ಹೊಸಪೇಟೆ: ಜಗತ್ತಿನ 9ನೇ ಹಾಗೂ ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ನಿರ್ಮಿಸುವುದು ಮಾತ್ರವಲ್ಲದೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರಲ್ಲಿ ಧ್ವಜಾರೋಹಣ ಮಾಡಿ ವಿಜಯನಗರ ಜಿಲ್ಲೆ ಸೋಮವಾರ ಹೊಸ ದಾಖಲೆ ಬರೆಯಿತು.
Related Articles
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಳಗಾವಿ ಯಲ್ಲಿ 361 ಅಡಿ ಎತ್ತರದ ಧ್ವಜಸ್ತಂಭ ದೇಶದಲ್ಲೇ ಅತಿ ಎತ್ತರದ್ದು ಎಂಬ ಹೆಗ್ಗಳಿಕೆ ಹೊಂದಿತ್ತು. ಈಗ ಆ ಕೀರ್ತಿ ವಿಜಯನಗರದ ಪಾಲಾಗಿದೆ. 405 ಅಡಿ ಎತ್ತರದ ಧ್ವಜಸ್ತಂಭ ಇದುವರೆಗೆ ದೇಶದಲ್ಲಿ ಎಲ್ಲೂ ಅಳವಡಿಸಿಲ್ಲ. ಜಗತ್ತಿ ನಲ್ಲೇ ಅತಿ ಎತ್ತರದ ಧ್ವಜಸ್ತಂಭಗಳಲ್ಲಿ ಇದು 9ನೆಯದು ಎಂದು ವಿವರಿಸಿದರು.
Advertisement
ಪಿತೃ ವಿಯೋಗದ ನಡುವೆಯೂ ಭಾಗಿಯಾದ ಸಚಿವ ಬೈರತಿ
ದಾವಣಗೆರೆ: ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರು ತಂದೆಯ ನಿಧನದ ನೋವಿನಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ದೇಶಭಕ್ತಿ ಮೆರೆದರು. ಸಚಿವರ ತಂದೆ ರವಿವಾರ ನಿಧನ ಹೊಂದಿದ್ದು, ಧ್ವಜಾರೋಹಣ ಕಾರ್ಯಕ್ರಮಕ್ಕೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಆದರೆ ರವಿವಾರ ರಾತ್ರಿಯೇ ಬೆಂಗಳೂರಿನಿಂದ ದಾವಣಗೆರೆಗೆ ಆಗಮಿಸಿದ ಸಚಿವರು, ಬೆಳಗ್ಗೆ ಸಾರ್ವಜನಿಕ ಧ್ವಜಾರೋಹಣದಲ್ಲಿ ಭಾಗಿಯಾದರು. ಚಾಮರಾಜಪೇಟೆ ಮೈದಾನ: ಸ್ವಾತಂತ್ರ್ಯೋತ್ಸವ
ಬೆಂಗಳೂರು: ಮಾಲಕತ್ವ ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆ ಆಟದ ಮೈದಾನದಲ್ಲಿ ಸೋಮವಾರ ಖಾಕಿ ಸರ್ಪಗಾವಲಿನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸ ಲಾಯಿತು.
ಎರಡು ಸಮುದಾಯಗಳ ನಡುವಿನ ತಿಕ್ಕಾಟಕ್ಕೆ ಕಾರಣ ವಾಗಿದ್ದ ಈ ಮೈದಾನದಲ್ಲಿ ಕಂದಾಯ ಇಲಾಖೆ ವತಿಯಿಂದ ಸ್ವಾತಂತ್ರ್ಯ ದಿನದ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 8 ಗಂಟೆಗೆ ಉಪವಿಭಾಗಾಧಿಕಾರಿ ಶಿವಣ್ಣ ಧ್ವಜಾರೋಹಣ ನೆರವೇರಿಸಿದರು. ಸಂಸದ ಪಿ.ಸಿ.ಮೋಹನ್, ಶಾಸಕ ಜಮೀರ್ ಅಹಮದ್‌ಖಾನ್, ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಉಪಸ್ಥಿತರಿದ್ದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಬಿಗಿ ಬಂದೋಬಸ್ತ್
ಇಲ್ಲಿ ಧ್ವಜಾರೋಹಣ ನೆರವೇರಿಸಲು ಸರಕಾರ ನಿರ್ಧರಿಸಿದ ಬೆನ್ನಿಗೇ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರವಿವಾರ ಮತ್ತು ಸೋಮವಾರ ಮೈದಾನದ ಬಳಿ ಓಡಾಟ ನಿರ್ಬಂಧಿಸಲಾಗಿತ್ತು. ಮೈದಾನದ ಸುತ್ತ ಬ್ಯಾರಿಕೇಡ್ ಅಳವಡಿಸಿ ಮೈದಾನದೊಳಗೆ ಸಾರ್ವಜನಿಕರು ಬರದಂತೆ ಮಾಡಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ, ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿತ್ತು. ಒಕ್ಕೂಟದ ಸದಸ್ಯರು ಪೊಲೀಸ್ ವಶಕ್ಕೆ
ಧ್ವಜಾರೋಹಣ ಸಂದರ್ಭದಲ್ಲಿ ವಿಐಪಿ ದ್ವಾರದಲ್ಲಿ ತಮ್ಮನ್ನು ಬಿಡುವಂತೆ ಚಾಮರಾಜಪೇಟೆ ನಾಗರಿಕ ಒಕ್ಕೂಟದ ಸದಸ್ಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು.