Advertisement

ಜಿಲ್ಲೆಯಲ್ಲಿ 4 ತಿಂಗಳಲ್ಲಿ 73 ಶಿಶು ಸಾವು

12:06 PM Aug 26, 2017 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ತೀವ್ರ ತಲ್ಲಣ ಮೂಡಿಸಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿನ ನವಜಾತು ಶಿಶುಗಳ ಸಾವಿನ ಸರಣಿ ಪ್ರಕರಣಗಳು ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಬೆಳಕಿಗೆ ಬಂದಿದು,ª ಈ ವರ್ಷ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ 73 ಶಿಶು ಮರಣ ಪ್ರಕರಣಗಳು ದಾಖಲಾಗಿದೆ. ನಾಲ್ಕು ತಿಂಗಳಲ್ಲಿ 73 ಸಾವು: ಏಪ್ರಿಲ್‌ನಲ್ಲಿ ಎಂಟು ಶಿಶುಗಳು ಸಾವನ್ನಪ್ಪಿವೆ. ಮೇ ತಿಂಗಳಿನಲ್ಲಿ 26, ಜೂನ್‌ನಲ್ಲಿ 12 ಹಾಗೂ ಜುಲೈನಲ್ಲಿ 27 ನವಜಾತ ಶಿಶುಗಳು ಮೃತಪಟ್ಟಿವೆ. ಈ ಮೂಲಕ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 73 ಮಕ್ಕಳು ಅಸುನೀಗಿವೆ. 2016ರಲ್ಲಿ 270 ಶಿಶು ಸಾವು: ಕಳೆದ 2016 ರಲ್ಲಿ ಜಿಲ್ಲೆಯಲ್ಲಿ ಒಟ್ಟು 270ಕ್ಕೂ ಹೆಚ್ಚು ನವಜಾತು ಶಿಶುಗಳ ಮರಣ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸುವಂತಿದೆ. ಆ ಪೈಕಿ ನ್ಯೋಮೋನಿಯಾದಿಂದ 23, ಅತಿ ಕಡಿಮೆ ತೂಕದಿಂದ 23, ಅವಧಿಗೆ ಮುಂಚೆ ಹುಟ್ಟಿನಿಂದ 36, ಉಸಿರುಗಟ್ಟಿ 15, ನವಜಾತು ನಂಜುನಿಂದ 15 ಸೇರಿ ಇತರೆ ಕಾರಣಗಳಿಂದ ಒಟ್ಟು 175ಕ್ಕೂ ಹೆಚ್ಚು ಮಕ್ಕಳು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಗಡಿ ಭಾಗದಲ್ಲಿ ಶಿಶು ಮರಣ ಹೆಚ್ಚು: ಹಿಂದುಳಿದ ಜಿಲ್ಲೆಯ ಜೊತೆಗೆ ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ ಹಾಗೂ ಗೌರಿಬಿದನೂರು ತಾಲೂಕುಗಳಲ್ಲಿ ಹೆಚ್ಚು ಶಿಶು ಮರಣಗಳು ಸಂಭವಿಸಿವೆ ಎಂಬ ಮಾಹಿತಿ ತಿಳಿದು ಬಂದಿದೆ. ಅದರಲ್ಲೂ ಬಾಗೇಪಲ್ಲಿ, ಗೌರಿಬಿದನೂರು ತಾಲೂಕಿನಲ್ಲಿ ಅಪ್ರಾಪ್ತ ವಯಸ್ಸಿಗೆ ಬಾಲ್ಯ ವಿವಾಹಗಳು ನಡೆಯುತ್ತಿರುವುದರಿಂದ ಜನಿಸುವ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರತೊಡಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿರುವ ಸಮೀಕ್ಷೆಯಿಂದ ತಿಳಿದು ಬಂದಿದೆ. ಉಳಿದಂತೆ ಹದಿಹರೆಯದಲ್ಲಿಯೆ ಗರ್ಭಿಣಿಯಾಗುವುದು, ಮಹಿಳೆಯರಲ್ಲಿನ ರಕ್ತಹೀನತೆ, ಅಪೌಷ್ಟಿಕತೆ ಶಿಶು ಮರಣಕ್ಕೆ ಮುಖ್ಯ ಕಾರಣ ಎಂದು ಗುರುತಿಸಲಾಗಿದೆ. ಶಿಶು ಮರಣ ಪ್ರಮಾಣ ಕಡಿಮೆ: ಕಳೆದ 10 ವರ್ಷಗಳಿಗೆ ಹೋಲಿಸಿಕೊಂಡರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನವಜಾತು ಶಿಶುಗಳ ಮರಣ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ರವಿಶಂಕರ್‌. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸುತ್ತಿರುವ ಕುಟುಂಬ ಕಲ್ಯಾಣ ಹಾಗೂ ಗರ್ಭಿಣಿಯರಿಗೆ ಆರೋಗ್ಯ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ ವೈದ್ಯರ ನಿರ್ಲಕ್ಷ್ಯ ಅಥವಾ ಚಿಕಿತ್ಸೆ ಲಭ್ಯತೆ ಇಲ್ಲದೇ ಶಿಶು ಮರಣ ಸಂಭವಿಸಿಲ್ಲ ಎಂದು ತಿಳಿಸಿದರು 

Advertisement

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next