ಕುಷ್ಟಗಿ: ಹರಿಯಾಣದ ರೋಟಕ್ ನ ಎಂ.ಡಿ. ಯುನಿವರ್ಸಿಟಿ ಯಲ್ಲಿ ನಡೆದ 2021ನೇ ರಾಷ್ಟ್ರೀಯ ಚಾಂಪಿಯನ್ (ಬಾಲಕ ಹಾಗೂ ಬಾಲಕಿಯರ) ಪೆನ್ಕಾಕ-ಸಿಲತ್ ಸ್ಪರ್ಧೆಯ ವಿವಿಧ ವಿಭಾಗದಲ್ಲಿ 9 ವರ್ಷ, 14 ವರ್ಷ ಹಾಗೂ 18 ವರ್ಷ ಒಳಗಿನ pre-teen, sub junior ವಿಭಾಗದ ರಾಜ್ಯದ 68 ಮಕ್ಕಳು ಹಾಗೂ 5 ಜನ ರೆಫ್ರಿ ಗಳು ಆಯ್ಕೆಯಾಗಿದ್ದಾರೆ.
ರಾಜ್ಯದ ಕೊಪ್ಪಳ ಜಿಲ್ಲೆಯ ಹನುಮಸಾಗರ, ಗಂಗಾವತಿ, ಮೈಸೂರು, ಬೆಳಗಾವಿ, ಚಿಕಮಗಳೂರು, ರಾಯಚೂರಿನ 68 ಮಕ್ಕಳು, ಪೆನ್ಕಾಕ್- ಸಿಲತ್ ನಲ್ಲಿ ಗಮನಾರ್ಹ ಸಾಧನೆಯೊಂದಿಗೆ ಮಿಂಚಿದ್ದಾರೆ.
ಮ್ಯಾಚ್ ರೆಫ್ರಿ ಗಳಾಗಿ ರಾಯಚೂರಿನ ಲಕ್ಷ್ಮಿ, ಕೊಪ್ಪಳ ಜಿಲ್ಲೆಯ ವಿಜಯಕುಮಾರ ಹಂಚಿನಾಳ, ಹನುಮಸಾಗರದ ಈರಣ್ಣ ಬದಾಮಿ, ಬೆಳಗಾವಿಯ ಅಮೂಲ್, ಬೆಂಗಳೂರಿನ ಜಗದೀಶ ಎಸ್.ಪಿ. ಆಯ್ಕೆಯಾಗಿದ್ದಾರೆ.
ಕಳೆದ ಅಕ್ಟೋಬರ್ 28 ಹಾಗೂ 29 ರಂದು ರಂದು ಗಂಗಾವತಿ ಯಲ್ಲಿ ನಡೆದ ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಡಿ.24 ರಿಂದ 27 ರವರೆಗೆ ಹರಿಯಾಣದ ರೋಟಕ್ ನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 18 ರಾಜ್ಯದ ಮಕ್ಕಳು ಭಾಗವಹಿಸಿದ್ದಾರು. ಪೆನ್ಕಾಕ್ ಸಿಲತ್ ಇದೊಂದು ಕರಾಟೆ ಮಾದರಿಯಲ್ಲಿ ಮಾರ್ಷಲ್ ಆರ್ಟ್ ಆಗಿದ್ದು, ಇದು ಅತ್ಮರಕ್ಷಣೆ ಕ್ರೀಡೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮಾನ್ಯತೆ ನೀಡಿದ್ದು ಈ ಕ್ರೀಡೆಯ ರಾಜ್ಯದ ಕೇಂದ್ರ ಸ್ಥಾನ ಕೊಪ್ಪಳ ಜಿಲ್ಲೆಯಾಗಿದೆ ಎಂದು ರಾಷ್ಟ್ರೀಯ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಟೇಲರ್ ತಿಳಿಸಿದ್ದಾರೆ.