ಒಂದೇ ನಕಾಶೆ ಹಾಗೂ ಅಂದಾಜು ಪಟ್ಟಿಯಂತೆ ಶೌಚಾಲಯ ನಿರ್ಮಾಣದ ಕಾಮಗಾರಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಕಾಮಗಾರಿ ವೆಚ್ಚ ನಿಗದಿತ ಹಣಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಮತ್ತು ಶೌಚಾಲಯ ನಿರ್ಮಾಣ ಹೊರತುಪಡಿಸಿ ಬೇರ್ಯಾವ ಕಾಮಗಾರಿಗೂ ಈ ಹಣವನ್ನು ಬಳಸುವಂತಿಲ್ಲ. ಕಾಮಗಾರಿಯ ವರದಿಯನ್ನು ಆದಷ್ಟು ಶೀಘ್ರ ಇಲಾಖೆಗೆ ಕಳುಹಿಸಬೇಕೆಂದು ಪಿಯು ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
Advertisement
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ 6, ಮೈಸೂರಿನ 4, ಯಾದಗಿರಿ, ಧಾರವಾಡ, ತುಮಕೂರು, ಉಡುಪಿಯ ತಲಾ 3, ರಾಮನಗರ,ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಬೀದರ್, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕೊಪ್ಪಳ, ರಾಯಚೂರು, ಮಂಡ್ಯ, ಗದಗ, ಹಾವೇರಿ, ಹಾಸನ,ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಕಲಬುರಗಿ, ಕೊಡಗಿನ ತಲಾ 2 ಹಾಗೂ ಬೆಳಗಾವಿ, ಶಿರಸಿ, ಕಾರವಾರ, ಮಂಗಳೂರು, ಶಿವಮೊಗ್ಗದ ತಲಾ ಒಂದು ಕಾಲೇಜಿನಲ್ಲಿ ಈ ಯೋಜನೆಯಡಿ ಶೌಚಾಲಯ ನಿರ್ಮಿಸಲಾಗುವುದು.