Advertisement

Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!

08:36 AM Jan 08, 2025 | Team Udayavani |

ಬೆಳಗಾವಿ: ಇಲ್ಲಿಯ ಯಮನಾಪುರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಹಿಳೆ ಸ್ವ-ಸಹಾಯ ಸಂಘದ ಹೆಸರಿನಲ್ಲಿ 7 ಸಾವಿರ ಮಹಿಳೆಯರಿಂದ ಸಾಲ ಮಾಡಿಸಿ ಕಂತು ತುಂಬದೇ 19.35 ಕೋಟಿ ರೂ. ವಂಚನೆ ಮಾಡಿರುವ ಆರೋಪದ ಮೇಲೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

Advertisement

ಯಮನಾಪುರ ಗ್ರಾಮದ ಅಶ್ವಿನಿ ಹೊಳೆಪ್ಪ ದಡ್ಡಿ, ಈಕೆಯ ಪತಿ ಹೊಳೆಪ್ಪ ಫಕೀರಪ್ಪ ದಡ್ಡಿ, ಮಕ್ಕಳಾದ ಸೇವಂತಾ ಹೊಳೆಪ್ಪ ದಡ್ಡಿ ಹಾಗೂ ಪ್ರಿಯಾಂಕಾ ಹೊಳೆಪ್ಪ ದಡ್ಡಿ ಎಂಬವರ ವಿರುದ್ಧ ದೂರು ದಾಖಲಾಗಿದೆ. ತಾಲೂಕಿನ ಸೋನಟ್ಟಿ ಗ್ರಾಮದ ಶೇಖಾ ಕನ್ನಪ್ಪ ಹಂಚಿಮನಿ ಎಂಬ ಮಹಿಳೆ ದೂರು ನೀಡಿದ್ದಾರೆ.

ಯಮನಾಪುರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಫೈನಾನ್ಸ್ ಗಳಿಂದ ಮಹಿಳೆಯರಿಗೆ ‘ಸಾಲ ತೆಗೆದುಕೊಡಿ ಸಬ್ಸಿಡಿ ಮಾಡಿಸಿ ನಿಮ್ಮ ಸಾಲದ ಎಲ್ಲ ಕಂತುಗಳನ್ನು ನಾವೇ ತುಂಬುತ್ತೇವೆ’ ಎಂದು 7,707 ಮಹಿಳೆಯರಿಂದ ಹಣ ಪಡೆದುಕೊಂಡಿದ್ದಾರೆ. ಹೀಗೆ ಒಟ್ಟಾರೆ 19,35,35,636 ರೂ. ವಂಚನೆ ಮಾಡಿದ್ದಾರೆ. ಅನೇಕ ವರ್ಷಗಳಿಂದ ಮಹಿಳೆಯರ ಕಡೆಯಿಂದ ಸಾಲ ಮಾಡಿಸಿ ಕಂತು ತುಂಬುವುದಾಗಿ ಹೇಳಿ ಯಾವುದೇ ಕಂತು ತುಂಬಿಲ್ಲ. ಈಗ ವಂಚನೆಗೆ ಒಳಗಾದ ಮಹಿಳೆಯರಿಗೆ ಫೈನಾನ್ಸ್ ನವರು ಕಿರುಕುಳ ನೀಡುತ್ತಿದ್ದಾರೆ. ನಮ್ಮ ಕಡೆಯಿಂದ ಹಣ ಪಡೆದಿರುವ ಹೊಳೆಪ್ಪ ದಡ್ಡಿ, ಈತನ ಪತ್ನಿ, ಮಕ್ಕಳು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next