Advertisement
ಸಾಲು ಮರದ ತಿಮ್ಮಕ್ಕ ಸೇರಿ ಹಿರಿಯ ಸಾಹಿತಿಗಳಾದ ಡಾ.ಚೆನ್ನವೀರ ಕಣವಿ, ದೇವನೂರ ಮಹಾದೇವ, ಡಾ.ಎಸ್.ಎಲ್.ಭೈರಪ್ಪ, ಕಲಬುರಗಿ ಮ.ಗು. ಬಿರಾದಾರ, ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರ ಸಾಧನೆ ವಿವರಣೆಯೊಳಗೊಂಡ ಶಿಫಾರಸು ಪಟ್ಟಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಗೆ ಸಲ್ಲಿಸಲಾಗಿದೆ. ಮಾರ್ಚ್‌ನಲ್ಲಿ ನಡೆಯುವ ವಿವಿ ಐದನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಉದ್ದೇಶಿಸಲಾಗಿದೆ. ಘಟಿಕೋತ್ಸವಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಆಗಮಿಸಿ ಭಾಷಣ ಮಾಡುವ ಸಾಧ್ಯತೆಗಳಿವೆ.
Related Articles
Advertisement
ಗೌರವ ಡಾಕ್ಟರೇಟ್‌ಗೆ ಭಾಜನರಾದವರು: ಇದುವರೆಗೆ ನಡೆದಿರುವ ನಾಲ್ಕು ಘಟಿಕೋತ್ಸವಗಳ ಪೈಕಿ 2 ಘಟಿಕೋತ್ಸವಗಳಲ್ಲಿ ಗೌರವ ಡಾಕ್ಟರೇಟ್ ನೀಡಿದರೆ ಉಳಿದೆರಡು ಅಂದರೆ ಮೊದಲ ಸಲ 3 ಹಾಗೂ ತದನಂತರ ಐವರು ಸೇರಿ ಒಟ್ಟಾರೆ 8 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. 2012ರಲ್ಲಿ ನಡೆದಿದ್ದ ಪ್ರಥಮ ಘಟಿಕೋತ್ಸವದಲ್ಲಿ ಡಾ.ಯು.ಆರ್.ಅನಂತಮೂರ್ತಿ, ನಂದನ ನಿಲೇಕಣಿ ಹಾಗೂ ಗೋವರ್ಧನ ಮೇಹ್ತಾ ಅವರಿಗೆ ನೀಡಲಾಗಿತ್ತು.
2018ರ ಜುಲೈನಲ್ಲಿ ನಡೆದ 2ನೇ ಘಟಿಕೋತ್ಸವದಲ್ಲಿ ನಾಡೋಜ, ಖ್ಯಾತ ಕಲಾವಿದ ಡಾ.ಜೆ.ಎಸ್. ಖಂಡೇರಾವ್, ಚಿಂತಕ ಡಾ.ಸಿದ್ಧಲಿಂಗಯ್ಯ, ಕ್ಷಿಪಣಿ ಮಹಿಳೆ ಡಾ.ಟೆಸ್ಟಿ ಥಾಮಸ್, ಪ್ರಸಿದ್ಧ ಭೌತ ವಿಜ್ಞಾನಿ ಡಾ.ಬಾಲಸುಬ್ರಹ್ಮಣ್ಯಂ ಅಯ್ಯರ್, ವಿಮರ್ಶಕ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. 3ನೇ ಹಾಗೂ ಕಳೆದ ವರ್ಷ ನಡೆದ 4ನೇ ಘಟಿಕೋತ್ಸವದಲ್ಲಿ ಯಾರೊಬ್ಬರಿಗೂ ಗೌರವ ಡಾಕ್ಟರೇಟ್ ನೀಡಿರಲಿಲ್ಲ.
* ಹಣಮಂತರಾವ ಭೈರಾಮಡಗಿ