Advertisement
ಮೊದಲು ಬ್ಯಾಟಿಂಗ್ ನಡೆಸಿದ ಭಾರತ “ಎ’ 35 ಓವರ್‌ಗಳಲ್ಲಿ 121 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟಾದರೂ ಬೌಲಿಂಗ್ ಮೂಲಕ ತಿರುಗೇಟು ನೀಡಿತು. 114ಕ್ಕೆ 9 ವಿಕೆಟ್ ಉರುಳಿದಾಗ ಭಾರತಕ್ಕೂ ಗೆಲ್ಲುವ ಉಜ್ವಲ ಅವಕಾಶವಿತ್ತು. ಆದರೆ ಒಂದೆಡೆ ಕ್ರೀಸಿಗೆ ಅಂಟಿಕೊಂಡು ನಿಂತಿದ್ದ ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಬೆನ್ ಡಕೆಟ್ ಗೆಲುವನ್ನು ಕಸಿಯುವಲ್ಲಿ ಯಶಸ್ವಿಯಾದರು. ಲಯನ್ಸ್ 30.3 ಓವರ್‌ಗಳಲ್ಲಿ 9 ವಿಕೆಟಿಗೆ 125 ಬಾರಿಸಿ ಗೆಲುವಿನ ನಗು ಹೊಮ್ಮಿಸಿತು.ಲಯನ್ಸ್ ಗೆಲುವಿನ ವೇಳೆ ಡಕೆಟ್ 70 ರನ್ ಮಾಡಿ ಅಜೇಯರಾಗಿದ್ದರು (86 ಎಸೆತ, 10 ಬೌಂಡರಿ, 1 ಸಿಕ್ಸರ್). ಇವರನ್ನು ಹೊರತುಪಡಿಸಿ ಎರಡಂಕೆಯ ಸ್ಕೋರ್ ದಾಖಲಿಸಿದ ಮತ್ತೂಬ್ಬ ಆಟಗಾರನೆಂದರೆ ಹೇನ್ (12).
ಆರಂಭಕಾರ ಕೆ.ಎಲ್. ರಾಹುಲ್ ಪಂದ್ಯದ ಮೊದಲ ಎಸೆತದಲ್ಲೇ ಗ್ರೆಗರಿಗೆ ಬೌಲ್ಡ್ ಆಗಿ ನಿರಾಶೆ ಮೂಡಿಸಿದರು. ಲಾಡ್ 36, ಅಕ್ಷರ್ ಪಟೇಲ್ 23, ದೀಪಕ್ ಚಹರ್ 21 ರನ್ ಮಾಡಿದರು. ಸಂಕ್ಷಿಪ್ತ ಸ್ಕೋರ್: ಭಾರತ “ಎ’-35 ಓವರ್‌ಗಳಲ್ಲಿ 121 (ಲಾಡ್ 36, ಅಕ್ಷರ್ ಪಟೇಲ್ 23, ದೀಪಕ್ ಚಹರ್ 21, ಓವರ್ಟನ್ 24ಕ್ಕೆ 3, ಬೇಲಿ 23ಕ್ಕೆ 2). ಇಂಗ್ಲೆಂಡ್ ಲಯನ್ಸ್-30.3 ಓವರ್‌ಗಳಲ್ಲಿ 9 ವಿಕೆಟಿಗೆ 125 (ಡಕೆಟ್ ಔಟಾಗದೆ 70, ಹೇನ್ 12, ದೀಪಕ್ ಚಹರ್ 25ಕ್ಕೆ 3, ರಾಹುಲ್ ಚಹರ್ 43ಕ್ಕೆ 3).
ಪಂದ್ಯಶ್ರೇಷ್ಠ: ಬೆನ್ ಡಕೆಟ್.