Advertisement

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

12:07 PM Nov 02, 2024 | Team Udayavani |

ಹಾಂಕಾಂಗ್:‌ ಸಿಕ್ಸರ್-ಬೌಂಡರಿಗಳ ಸುರಿಮಳೆಗರೆಯುವ ಹಾಂಕಾಂಗ್‌ ಸಿಕ್ಸಸ್‌ ಕೂಟ ಈಗಾಗಲೇ ಆರಂಭವಾಗಿದೆ. ಹಲವು ವರ್ಷಗಳ ಬಳಿಕ ಭಾರತ ತಂಡ ಇದರಲ್ಲಿ ಭಾಗವಹಿಸಿದೆ. ರಾಬಿನ್‌ ಉತ್ತಪ್ಪ ನಾಯಕತ್ವದ ಭಾರತ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ.

Advertisement

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ರವಿ ಬೋಪಾರಾ ಅವರು ರಾಬಿನ್ ಉತ್ತಪ್ಪ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಹೊಡೆದರು.

ಇಂಗ್ಲೆಂಡ್ ಇನಿಂಗ್ಸ್‌ನ ನಾಲ್ಕನೇ ಓವರ್‌ ನಲ್ಲಿ ಬೋಪಾರಾ ಈ ಸಾಧನೆ ಮಾಡಿದರು. 3 ಓವರ್‌ಗಳಲ್ಲಿ ಇಂಗ್ಲೆಂಡ್ ಕೇವಲ 36‌ ರನ್‌ ಮಾಡಿತ್ತು. ಆದರೆ ನಾಲ್ಕನೇ ಓವರ್‌ ನಲ್ಲಿ ಬೋಪಾರಾ ಉತ್ತಪ್ಪ ಓವರ್‌ ನಲ್ಲಿ ರನ್‌ ಮಳೆ ಹರಿಸಿದರು.  ಬಲಗೈ ಆಟಗಾರ ರವಿ ಆ ಓವರ್‌ನ ಮೊದಲ ಐದು ಎಸೆತಗಳಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದರು, ನಂತರ ಉತ್ತಪ್ಪ ವೈಡ್ ಎಸೆದರು. ಆದರೂ ಅವರು ಅಂತಿಮ ಎಸೆತದಲ್ಲಿ ಮತ್ತೊಂದು ಸಿಕ್ಸರ್‌ ಬಾರಿಸಿ ಓವರ್‌ ನಲ್ಲಿ 37 ರನ್‌ ಬರುವಂತೆ ಮಾಡಿದರು.

ಈ ಮೂಲಕ, ಬೋಪಾರಾ ಹಾಂಕಾಂಗ್ ಸಿಕ್ಸ್ 2024 ರಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಉತ್ತಪ್ಪ ಅವರ ಓವರ್ ಕೂಡ ನಡೆಯುತ್ತಿರುವ ಆವೃತ್ತಿಯ ಅತ್ಯಂತ ದುಬಾರಿ ಓವರ್ ಆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next