2019ರ ಕೊನೆಯ ಭಾಗದಲ್ಲಿನ ವಿಶ್ವಾದ್ಯಂತ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಕುಸಿತವಾಗಿದೆ. ಈ ವರ್ಷಾಂತ್ಯದಲ್ಲಿ ಶೇ.2.5ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. 2.2 ಶತಕೋಟಿ ಕಂಪ್ಯೂಟರ್, ಟ್ಯಾಬ್ಲೆಟ್ ಮತ್ತು ಮೊಬೈಲ್ ಫೋನ್ ಯುನಿಟ್‌ಗಳಿದ್ದು ಇವುಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇ.3.3ರಷ್ಟು ಇಳಿಕೆಯಾಗುತ್ತಿದೆ. ಇದೇ ವೇಳೆ ಮೊಬೈಲ್ ಮಾರುಕಟ್ಟೆಯು ಏರಿಳಿತ ಕಾಣುತ್ತಾ ಬಂದಿದೆ.
1.7 ಶತಕೋಟಿ
2015ರಲ್ಲಿ ಒಟ್ಟು 1.9 ಯುನಿಟ್ ಹೊಂದಿದ್ದ ಮೊಬೈಲ್ ಮಾರುಕಟ್ಟೆ, ಈ ವರ್ಷ 1.7 ಶತಕೋಟಿಗೆ ಇಳಿಕೆಯಾಗಿದೆ. ಈ ಟ್ರೆಂಡ್ ಹೀಗೇ ಮುಂದುವರಿದರೆ ಮೊಬೈಲ್ ಮಾರುಕಟ್ಟೆ ವಲಯ ಆತಂಕಕ್ಕೆ ಒಳಗಾಗಲಿದೆ.
ಏನು ಕಾರಣ?
ಈಗಿನ ಮೊಬೈಲ್ ತಯಾರಕ ಸಂಸ್ಥೆಗಳು ದುಬಾರಿ ಸ್ಮಾರ್ಟ್ ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಇದು ಸಹಜವಾಗಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದ್ದು, ದುಬಾರಿ ಮೊಬೈ ಲ್‌ಗಳನ್ನು ಗ್ರಾಹಕರು ಬೇಗನೆ ಬದಲಾ ಯಿಸಿಕೊಳ್ಳಲು ಮುಂದಾಗುತ್ತಿಲ್ಲ.
ರಿಪ್ಲೇಸ್‌ಮೆಂಟ್ ಅವಧಿ ಹೆಚ್ಚಳ
ಹಳೆಯ ಸ್ಮಾರ್ಟ್‌ಫೋನ್ ನೀಡಿ ಹೊಸ ಸ್ಮಾರ್ಟ್ ಫೋನ್ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಈ ತನಕ 3 ತಿಂಗಳಲ್ಲಿ ಫೋನ್ ವಿನಿಮಯ ಮಾಡುತ್ತಿದ್ದವರು ಈಗ 14ರಿಂದ 15 ತಿಂಗಳು ಬಳಸಿ ಬಳಿಕ ವಿನಿಮಯ ಮಾಡುತ್ತಿದ್ದಾರೆ. ಈ ಬೆಳವಣಿಗೆ 2021ರ ವೇಳೆಗೆ ಹೊಸ ಸ್ಮಾರ್ಟ್ ಫೋನ್ ಕೊಳ್ಳುವವರ ಸಂಖ್ಯೆ ಕಡಿತವಾಗಬಹುದು ಎಂದು ಹೇಳಿದೆ.
Related Articles
ಸರಾಸರಿ ದರ
ಸದ್ಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಹುತೇಕ ಮೊಬೈಲ್ ತಯಾರಕ ಕಂಪೆನಿಗಳು 15 ಸಾವಿರ ರೂ.ಗಳ ಆಸುಪಾಸಿನಲ್ಲಿ ಸ್ಮಾರ್ಟ್ ಫೋನ್‌ಗಳನ್ನು ಹೊರ ಬಿಡುತ್ತಿವೆ. ಇದು ಸಹಜವಾಗಿ ದೀರ್ಘ ಬಾಳಿಕೆಯನ್ನು ಹೊಂದಿದ್ದು, ಗ್ರಾಹಕ ಸಂತುಷ್ಟಗೊಂಡಿದ್ದಾನೆ.
5 ಜಿ ಸಾಧ್ಯತೆ!
ಸದ್ಯ ಮಾರುಕಟ್ಟೆಯಲ್ಲಿ 4ಜಿ ತಂತ್ರಜ್ಞಾನವನ್ನು ಬೆಂಬಲಿಸುವ ಮೊಬೈಲ್‌ಗಳೇ ಹೆಚ್ಚಿದ್ದು, 5ಜಿ ಫೋನ್‌ಗಳು ಸಂಪೂರ್ಣವಾಗಿ ಮಾರುಕಟ್ಟೆ ಪ್ರವೇಶಿಸಿಲ್ಲ. 2020ರಲ್ಲಿ 5ಜಿ ಬರುವ ನಿರೀಕ್ಷೆ ಕಾರಣ ಗ್ರಾಹಕ 5ಜಿ ಫೋನ್ ಕೊಂಡುಕೊಳ್ಳಲು ಆಸಕ್ತಿ ವಹಿಸಿದ್ದಾನೆ. ಈ ನಡುವೆ ಬಳಕೆ ಮಾಡುತ್ತಿರುವ 4ಜಿ ಫೋನ್ ಬಿಟ್ಟು ಮತ್ತೆ ಹೊಸ 4ಜಿ ಫೋನ್ ಕೊಂಡುಕೊಳ್ಳಲು ಸಿದ್ಧನಿಲ್ಲದಿರುವುದೂ ಕುಸಿತಕ್ಕೆ ಒಂದು ಕಾರಣವಾಗಿದೆ. ಸೆಕೆಂಡಿಗೆ ಹತ್ತಾರು ಮೆಗಾಬೈಟ್ ವೇಗದಲ್ಲಿ 5ಜಿ ದೊರೆಯಲ್ಲಿದ್ದು, ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಸೆಕೆಂಡಿಗೆ 100 ಮೆಗಾಬೈಟ್ ವೇಗದಲ್ಲಿ ಲಭ್ಯವಾಗಲಿದೆ.