Advertisement

ರಾಷ್ಟ್ರೋತ್ತರ ಚಿಂತನೆಯಡಿ ನೂತನ ಶಿಕ್ಷಣ ನೀತಿ: ನಾಗೇಶ್‌

01:49 AM Nov 03, 2021 | Team Udayavani |

ಬೆಳ್ತಂಗಡಿ: ಕಳೆದ 75 ವರ್ಷಗಳಲ್ಲಿ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳಾದರೂ ಶಿಕ್ಷಣ ವ್ಯವಸ್ಥೆ ಎಲ್ಲೋ ಹಳಿ ತಪ್ಪಿದೆ ಎಂಬುದನ್ನರಿತು ಕೇವಲ ಬದುಕಿಗಾಗಿ ಶಿಕ್ಷಣವಲ್ಲ, ರಾಷ್ಟ್ರ ನಿರ್ಮಾಣದ ಶಿಕ್ಷಣ ಅಗತ್ಯ ಎಂಬ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು, ಕರ್ನಾಟಕದಲ್ಲೇ ಮೊದಲು ಜಾರಿಯಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಎಂಆರ್‌ಪಿಎಲ್‌ನ ಸಿಎಸ್‌ಆರ್‌ ಅನುದಾನ ದಿಂದ ಬೆಳ್ತಂಗಡಿ ತಾಲೂಕಿನ 55 ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ತಲಾ 10 ಲಕ್ಷ ರೂ.ಗಳಂತೆ ಒಟ್ಟು 5.50 ಕೋ.ರೂ. ಅನು ದಾನ ದಲ್ಲಿ ನಿರ್ಮಾಣಗೊಂಡ 55 ಹೈಟೆಕ್‌ ಶೌಚಾಲಯಗಳನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಬಳಿಕ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತ ನಾಡಿ, ಪ್ರಧಾನಿ ಮೋದಿ ಸೂಚನೆಯಂತೆ ಸರಕಾರಿ ಸ್ವಾಮ್ಯದ ಕಂಪೆನಿಗಳ ಅನುದಾನ ಒದಗಿಸಿದ್ದರಿಂದ ಹಳ್ಳಿಯ ಶಾಲೆಗಳು ಉತ್ತಮ ಶೌಚಾಲಯ ಕಾಣುವಂತಾಗಿದೆ. ಎಂಆರ್‌ಪಿಎಲ್‌ ಸಂಸ್ಥೆ ಕೋವಿಡ್‌ನ‌ ಸಂದರ್ಭದಲ್ಲಿ 8 ಆಕ್ಸಿಜನ್‌ ಘಟಕ ನಿರ್ಮಾಣಕ್ಕೆ 8 ಕೋ.ರೂ. ಸೇರಿದಂತೆ ನಮ್ಮ ಜಿಲ್ಲೆಗೆ 100 ಕೋ.ರೂ. ಸಿಎಸ್‌ಆರ್‌ ಫಂಡ್‌ ಒದಗಿಸಿದೆ ಎಂದರು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಅಜೇಯ ಪಾಕಿಸ್ಥಾನ ಸೆಮಿಫೈನಲಿಗೆ

ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್‌ ಪೂಂಜ ಪ್ರಸ್ತಾವನೆಗೈದು, ಗ್ರಾಮೀಣ ಜನರಿಗೆ ಸರಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಕೊರತೆಯಾದಾಗ ನಳಿನ್‌ ಕುಮಾರ್‌ ಕಟೀಲು ಅವರ ಮೂಲಕ ಸಿಎಸ್‌ಆರ್‌ ಅನುದಾನದಡಿ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ 55 ಶೌಚಾಲಯ ನಿರ್ಮಾಣ ವಾಗಿದ್ದರೆ ಅದು ಬೆಳ್ತಂಗಡಿ ಕ್ಷೇತ್ರದಲ್ಲಿ ಮಾತ್ರ ಸಾಧ್ಯವಾಗಿದೆ ಎಂದರು.

Advertisement

ಸುಸಜ್ಜಿತ ಶಾಲೆ ಯೋಜನೆ
ಗ್ರಾಮೀಣ ಪ್ರದೇಶಗಳಾದ ರೆಖ್ಯ, ಅರಸಿನ ಮಕ್ಕಿ, ಕೊಕ್ಕಡದಲ್ಲಿ ವಿದ್ಯಾರ್ಥಿಗಳನ್ನು ಒಂದೇ ಕ್ಲಸ್ಟರ್‌ನಡಿ ತಂದು 20 ಕೋ.ರೂ. ವೆಚ್ಚದಲ್ಲಿ ಮಾದರಿ ಸುಸಜ್ಜಿತ ಶಾಲೆ ನಿರ್ಮಿಸುವ ಸಲು ವಾಗಿ ರೂಪರೇಖೆ ಸಿದ್ಧವಾಗಿದೆ ಎಂದ ಪೂಂಜ ಅವರು, 120 ಶಾಲೆಗಳ ಪಟ್ಟಿಯಲ್ಲಿ 70 ಶಾಲೆಗಳಿಗೆ ಶೌಚಾಲಯ ಕೊರತೆ ಇದ್ದು, ಮುಂದೆ ಶಾಲೆ ಹಾಗೂ ಶೌಚಾಲಯಕ್ಕೆ ಗರಿಷ್ಠ ಅನುದಾನ ಒದಗಿಸುವಂತೆ ಶಿಕ್ಷಣ ಸಚಿವರಲ್ಲಿ ಹಾಗೂ ಸಂಸದರಲ್ಲಿ ಸಹಕಾರ ಕೋರಿದರು.

ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಎಂಆರ್‌ಪಿಎಲ್‌ ಆಡಳಿತ ನಿರ್ದೇಶಕ ಎಂ. ವೆಂಕಟೇಶ್‌, ಗ್ರೂಪ್‌ ಜನರಲ್‌ ಮ್ಯಾನೇಜರ್‌ ಕೃಷ್ಣ ಹೆಗ್ಡೆ, ಸಿಎಸ್‌ಆರ್‌ ವಿಭಾಗದ ಡಿಜಿಎಂ ವೀಣಾ ಶೆಟ್ಟಿ, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸಚಿವರ ಆಪ್ತ ಕಾರ್ಯದರ್ಶಿ ರವಿ ಕುಮಾರ್‌, ದ.ಕ. ಡಿಡಿಪಿಐ ಮಲ್ಲೇಸ್ವಾಮಿ, ಕೊಕ್ಕಡ ಸಿಎ ಬ್ಯಾಂಕ್‌ ಅಧ್ಯಕ್ಷ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಸಚಿವರು ಉಜಿರೆ ಹಳೆ ಪೇಟೆ ಶಾಲೆಯಲ್ಲಿ ಶೌಚಾಲಯವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.

ಸಮ್ಮಾನ
ಶಿಕ್ಷಣ ಸಚಿವರು ಹಾಗೂ ಎಂ.ಆರ್‌.ಪಿ.ಎಲ್‌. ಆಡಳಿತ ನಿರ್ದೇಶಕ ಎಂ. ವೆಂಕಟೇಶ್‌, ವೀಣಾ ಶೆಟ್ಟಿ, ಸುಬ್ರಾಯ ಭಟ್‌, ಶ್ರೀಶ ಕುಮಾರ್‌ ಹಾಗೂ ಗುತ್ತಿಗೆದಾರ ಗಣೇಶ್‌ ಗೌಡ ಉಜಿರೆ ಅವರನ್ನು ಶಾಸಕರು ಸಮ್ಮಾನಿಸಿದರು. ಶಾಸಕ ಹರೀಶ್‌ ಪೂಂಜ ಅವರನ್ನು ಶಿಕ್ಷಣ ಇಲಾಖೆಯಿಂದ ಗೌರವಿಸಲಾಯಿತು. ಬಿಇಒ ಎಚ್‌.ಎಸ್‌. ವಿರೂಪಾಕ್ಷಪ್ಪ ಸ್ವಾಗ ತಿಸಿ ದರು. ಶಿಕ್ಷಕರಾದ ಅಜಿತ್‌ ಕೊಕ್ರಾಡಿ ಕಾರ್ಯ ಕ್ರಮ ನಿರೂಪಿಸಿದರು. ಧರಣೇಂದ್ರ ಕೆ. ಜೈನ್‌ ವಂದಿಸಿದರು.

ರಾಜ್ಯಕ್ಕೆ ಮೇಲ್ಪಂಕ್ತಿ ಎಂಬಂತೆ ಶಾಸಕ ಹರೀಶ್‌ ಪೂಂಜ ಅವರು ತಾಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಯೋಜನೆ ರೂಪಿಸಿದ್ದಾರೆ. ಸರಕಾರಿ ಶಾಲೆಗಳ ಅಭಿವೃದ್ಧಿ ಅವರ ಆದ್ಯತೆಯನ್ನು ಗೌರವಿಸುತ್ತ ಬೆಳ್ತಂಗಡಿ ಸೇರಿದಂತೆ ರಾಜ್ಯದ ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಅನುದಾನ ಒದಗಿಸುವೆ.
– ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next