Advertisement
ನ.9ರಿಂದ 12ರ ತನಕ ಮಂಗಳೂರಿನ ಜಪ ಮಾಲಾ ಮಾತೆಗೆ ಸಮರ್ಪಿಸಿದ ಮಹಾ ದೇವಾಲಯ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ದೇಶ- ವಿದೇಶಗಳಿಂದ 50,000ಕ್ಕೂ ಹೆಚ್ಚು ವಿವಿಧ ಜಪ ಮಾಲೆಗಳ ಪ್ರದರ್ಶನ ಇದರ ವೈಶಿಷ್ಯé. ದಿವಂಗತ ಪೋಪ್ ಸಂತ ಜಾನ್ ಪಾವ್ ದ್ವಿತೀಯ ಮತ್ತು ಸಂತ ಮದರ್ ತೆರೇಸಾ ಸಹಿತ ವಿವಿಧ ಸಂತರು ಆಶೀರ್ವಚನಗೈದ ಜಪಸರಗಳು, ಜಗತ್ತಿನ 80 ರಾಷ್ಟ್ರಗಳ ವಿವಿಧ ಮಾದರಿಯ ಜಪ ಮಾಲೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
1568ರಲ್ಲಿ ಪೋರ್ಚುಗೀಸರು ಮಂಗಳೂರಿಗೆ ಬಂದಾಗ ಈಗಿರುವ ರೊಜಾರಿಯೋ ಕೆಥೆಡ್ರಲ್ ಇರುವ ಸ್ಥಳದಲ್ಲಿ ಚರ್ಚ್ ಸ್ಥಾಪಿಸಿದ್ದರು. ಮೀನು ಗಾರರಿಗೆ ಮೀನುಗಾರಿಕೆಯ ಸಂದರ್ಭದಲ್ಲಿ ಲಭಿಸಿದ್ದ ರೋಜರಿ (ಜಪ ಮಾಲೆ) ಮಾತೆಯ ವಿಗ್ರಹವನ್ನು ಇದರಲ್ಲಿ ಪ್ರತಿಷ್ಠಾಪಿಸಿದ್ದರು. 1784ರಲ್ಲಿ ಟಿಪ್ಪು ಸೈನ್ಯ ಈ ಚರ್ಚ್ ಅನ್ನು ಕೆಡವಿತ್ತು. ಟಿಪ್ಪು ಬಂಧನದಿಂದ ಬಿಡುಗಡೆ ಹೊಂದಿ 1813ರಲ್ಲಿ ವಾಪಸಾದ ಕೆಥೋಲಿಕರು ಇಲ್ಲಿ ಚರ್ಚ್ ಪುನರ್ ನಿರ್ಮಾಣ ಮಾಡಿದ್ದರು. 1850ರಲ್ಲಿ ಇದು ಕೆಥೆಡ್ರಲ್ (ಮಹಾ ದೇವಾಲಯ) ಸ್ಥಾನ ಕ್ಕೇರಿತ್ತು. 2018ರ ಜನವರಿಯಲ್ಲಿ ರೊಜಾರಿಯೋ ಕೆಥೆಡ್ರಲ್‌ಗೆ 450 ವರ್ಷ ಗಳಾಗುತ್ತಿದ್ದು, ಜ. 7ರಂದು ಇದರ ಉದ್ಘಾಟನಾ ಸಮಾರಂಭ ನೆರವೇರಲಿದೆ.
Related Articles
ಬೈಬಲ್‌ನಲ್ಲಿ 150 ಕೀರ್ತನೆಗಳಿದ್ದು, ಹಿಂದಿನ ಕಾಲದಲ್ಲಿ ಅದನ್ನು ಪಠಿಸಲು ಕ್ರೈಸ್ತ ಸನ್ಯಾಸಿಗಳು 150 ಪುಟ್ಟ ಶಿಲೆ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಕ್ರಮೇಣ ಶಿಲೆ ಕಲ್ಲುಗಳ ಬದಲು ಕಬ್ಬಿಣದ ಗುಂಡುಗಳ ಬಳಕೆ ಬಂದಿತ್ತು. ಆ ಬಳಿಕ ಅದು 150 ಚಿಕ್ಕ ಮಣಿಗಳನ್ನು ಪೋಣಿಸಿದ ಜಪಮಾಲೆಯಾಗಿ ಪರಿವರ್ತನೆಗೊಂಡಿತು.
Advertisement
ಪ್ರಸ್ತುತ ಸಂದರ್ಭದಲ್ಲಿ ಧಾರ್ಮಿಕ ಗುರು ಗಳಿಗೆ ಬೈಬಲ್ ಗ್ರಂಥ ಪ್ರಾರ್ಥನೆಗೆ ಪ್ರಮುಖ ಆಕರವಾಗಿ ದ್ದರೆ, ಜನ ಸಾಮಾನ್ಯರಿಗೆ ಜಪ ಮಾಲೆ ಪ್ರಾರ್ಥನೆಯ ಪ್ರಧಾನ ಅಸ್ತವಾಗಿದೆ. ಮಂಗಳೂರಿಗೆ ಮೇರಿ ಮಾತೆಯ ಜಪಮಾಲೆಯ ಭಕ್ತಿಯ ಆಚರಣೆ ಗೋವಾದಿಂದ ಬಂತು ಎಂದು ಹೇಳಲಾಗುತ್ತಿದೆ.
ಜಪ ಮಾಲೆಯ ಪ್ರಾರ್ಥನೆಗೆ ಅದರದ್ದೇ ಆದ ವಿಶಿಷ್ಟ ಮಹತ್ವವಿದೆ ಎನ್ನುವುದು ಕೆಥೋಲಿಕ್ ಕ್ರೈಸ್ತರ ನಂಬಿಕೆ. ಕುಟುಂಬದಲ್ಲಿ, ಸಮಾಜದಲ್ಲಿ ಹಾಗೂ ದೇಶದಲ್ಲಿ ಶಾಂತಿ ನೆಲೆಸಲು ಜಪ ಮಾಲೆಯ ವಿಶೇಷ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗುವುದು. ಜತೆಗೆ ಆಧ್ಯಾತ್ಮಿಕ ನವೀಕರಣದ ಉದ್ದೇಶವೂ ಇದರಲ್ಲಡಗಿದೆ.ಫಾ| ಜೆ.ಬಿ. ಕ್ರಾಸ್ತಾ, ಧರ್ಮಗುರು, ರೊಜಾರಿಯೊ ಕೆಥೆಡ್ರಲ್ ಹಿಲರಿ ಕ್ರಾಸ್ತಾ