Advertisement

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

01:38 PM Oct 24, 2024 | Team Udayavani |

ಮೊರಾದಾಬಾದ್:‌ ಸುಮಾರು ಒಂಬತ್ತು ವರ್ಷಗಳ ಹಿಂದೆ ಶೂವಿನ ಮಾಲೆ ಮಾಡಿ ಹಾರ ಹಾಕಿ ಅವಮಾನ ಪಡುವಂತೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಆತನನ್ನು ಹ*ತ್ಯೆಗೈದ ಘಟನೆ ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆರೋಪಿ ಮನ್ವೀರ್‌ ಹೇಳಿಕೆ ಪ್ರಕಾರ, ಘನಶ್ಯಾಮ್‌ ಸೈನಿ ಎಂಬಾತ ಸುಮಾರು 9 ವರ್ಷಗಳ ಹಿಂದೆ ತನ್ನ ಸೊಸೆಗೆ ಕಿರುಕುಳ ನೀಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಶೂಗಳ ಹಾರ ಕುತ್ತಿಗೆಯಲ್ಲಿ ಧರಿಸುವಂತೆ ಮಾಡಿದ್ದ ಎಂದು ತಿಳಿಸಿದ್ದಾನೆ.

ಪೊಲೀಸರ ತನಿಖೆಯಲ್ಲಿ, ಕಿರುಕುಳ ನೀಡಿದ್ದ ಎಂದು ಆರೋಪಿಸಿದ್ದ ಘನಶ್ಯಾಮ್‌ ತನ್ನ ಮನೆಯಲ್ಲಿ ಸಮುದಾಯದ ಸದಸ್ಯರ ಜೊತೆ ಪಂಚಾಯ್ತಿ ಕರೆದಿದ್ದ. ಅಲ್ಲಿಗೆ ನನ್ನ ಕರೆಯಿಸಿ ಸುಳ್ಳು ಆರೋಪ ಹೊರಿಸಿದ್ದ ಎಂದು ಮನ್ವೀರ್‌ ತಿಳಿಸಿದ್ದಾನೆ.

ನಂತರ ಶೂ ಮತ್ತು ಚಪ್ಪಲಿಯಿಂದ ಹೊಡೆದು, ಶೂಗಳ ಹಾರ ಹಾಕಿಸಿ ಅವಮಾನಿಸಿಬಿಟ್ಟಿದ್ದರು ಎಂದು ಮನ್ವೀರ್‌ ವಿವರಿಸಿದ್ದಾನೆ. ಈ ಘಟನೆ ನಂತರ ನನಗೆ ಅವಮಾನದಿಂದ ಊರಿನಲ್ಲಿ ವಾಸವಾಗಿರಲು ಸಾಧ್ಯವಾಗಿಲ್ಲವಾಗಿತ್ತು. ಪ್ರತಿಯೊಬ್ಬರು ನನಗೆ ತಮಾಷೆ ಮಾಡಿ ಅವಮಾನ ಮಾಡುತ್ತಿದ್ದರು.

ಅವಮಾನದಿಂದ ನೊಂದು ಪಕ್ವಾರಾ ಗ್ರಾಮದಿಂದ ರಾಜಸ್ಥಾನಕ್ಕೆ ತೆರಳಿ, ಅಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡಲು ಆರಂಭಿಸಿರುವುದಾಗಿ ಮನ್ವೀರ್‌ ತಿಳಿಸಿದ್ದಾನೆ. ಆದರೆ ನಾನು ಯಾವಾಗ ಊರಿಗೆ ಬರುತ್ತೇನೋ ಆ ಸಂದರ್ಭದಲ್ಲಿ ಸ್ಥಳೀಯರು ಶೂ ಹಾರ ಹಾಕಿದ್ದ ವಿಚಾರ ಪ್ರಸ್ತಾಪಿಸಿ ಅವಮಾನ ಮಾಡುತ್ತಿದ್ದರು.

Advertisement

ಘನಶ್ಯಾಮ್‌ ಕೂಡಾ ಸ್ಥಳೀಯರ ಎದುರು ಆ ಘಟನೆ ಪ್ರಸ್ತಾಪಿಸಿ ಅವಮಾನಿಸುತ್ತಿದ್ದ. ಈ ಆರೋಪದಿಂದ ಮದುವೆಯಾಗಲು ಅಡ್ಡಿಯಾಗುತ್ತಿತ್ತು ಎಂದು ಮನ್ವೀರ್‌ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ನನಗೆ ಘನಶ್ಯಾಮ್‌ ಮೇಲೆ ವಿಪರೀತ ದ್ವೇಷ ತುಂಬಿಕೊಂಡಿತ್ತು. ಅದಕ್ಕಾಗಿ ನಾನು ಪ್ರತೀಕಾರ ತೀರಿಸಲು ಆಲೋಚಿಸುತ್ತಿದ್ದೆ.

ಅಕ್ಟೋಬರ್‌ 16ರಂದು ಸೈನಿ ಗದ್ದೆಯಲ್ಲಿ ಒಬ್ಬಂಟಿಯಾಗಿರುವುದು ಕಂಡು, ಚೂರಿಯಿಂದ ಕುತ್ತಿಗೆಗೆ ಇರಿದು ಬಿಟ್ಟಿದ್ದೆ. ನಂತರ ಮುಖ, ಕೈಗಳು, ಭುಜದ ಮೇಲೆ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ. ಆದರೆ ನಾನು ತಪ್ಪಿಸಿಕೊಂಡು ಹೋಗುವ ಬಗ್ಗೆ ಚಿಂತಿಸಿಲ್ಲ, ಯಾಕೆಂದರೆ ಇಷ್ಟೊಂದು ಹಳೆಯ ಘಟನೆಯ ಪ್ರತೀಕಾರ ಎಂಬುದು ಯಾರೂ ಆಲೋಚಿಸುವುದಿಲ್ಲ ಎಂದು ಮನ್ವೀರ್‌ ತನಿಖೆಯಲ್ಲಿ ತಿಳಿಸಿದ್ದ.

ಸೈನಿಯನ್ನು ಕೊಲೆ ಮಾಡಿದ ನಂತರ ಸಮೀಪದ ಗ್ರಾಮದಲ್ಲಿದ್ದ ಗೆಳೆಯನ ಮನೆಯಲ್ಲಿ ವಾಸವಾಗಿದ್ದೆ. ಆದರೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮನ್ವೀರ್‌ ಕೊಲೆ ಮಾಡಿದ ಜಾಡು ಪತ್ತೆ ಹಚ್ಚಿದ್ದರು…ಇದನ್ನು ತಿಳಿದ ಆತ ರಾಜಸ್ಥಾನಕ್ಕೆ ಪರಾರಿಯಾಗಲು ಯತ್ನಿಸಿದ್ದು, ನಂತರ ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next