Advertisement
ಕಳೆದ ಸರಕಾರದ ಅವಧಿಯಲ್ಲಿ ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಪಾಣಾಜೆ ಆರೋಗ್ಯ ಕೇಂದ್ರವನ್ನು ಸಮುದಾಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಪ್ರಸ್ತುತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.
ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ 12.40 ಕೋ.ರೂ.ಅನ್ನು ಸರಕಾರ ಬಿಡುಗಡೆಗೊಳಿಸಿದ್ದು ಕಾರ್ಕಳದ ಸಂಸ್ಥೆಯೊಂದು ಕಾಮಗಾರಿ ನಿರ್ವಹಿಸುತ್ತಿದೆ. ಸುಮಾರು 5 ಎಕ್ರೆ ಜಾಗ ಹೊಂದಿದ್ದು ಈಗಿನ ಆರೋಗ್ಯ ಕೇಂದ್ರ ಕಟ್ಟ ಡದ ಪಕ್ಕದಲ್ಲಿ ಸುಸಜ್ಜಿತ ಕಟ್ಟಡ ಕಾಮಗಾರಿ ಸಾಗುತ್ತಿದೆ. ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು ಶೇ.60 ರಷ್ಟು ಕಾಮಗಾರಿ ಮುಗಿದಿದೆ. ಗಡಿಗ್ರಾಮದ ಆಸ್ಪತ್ರೆ 30 ಬೆಡ್‌ಗೆ ಏರಿಕೆ
ಕರ್ನಾಟಕ-ಕೇರಳವನ್ನು ಪುತ್ತೂರು ತಾಲೂಕಿನಲ್ಲಿ ಸಂಪರ್ಕಿಸುವ ಗಡಿ ಗ್ರಾಮದ ಪಾಣಾಜೆ ಎರಡೂ ರಾಜ್ಯದ ಜನರು ದಿನ ನಿತ್ಯದ ಕೆಲಸಗಳಿಗಾಗಿ ಬರುವ ಪ್ರದೇಶ. ಪಾಣಾಜೆ ಎಂಬ ಹೆಸರಿನ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸುವುದು ಆರ್ಲಪದವಿನಲ್ಲಿ. ಆರ್ಲಪದವು ಜಂಕ್ಷನ್‌ನಿಂದ ಕೂಗಳತೆ ದೂರದಲ್ಲಿ ಇರುವ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವೂ 28 ಸಾವಿರ ಜನಸಂಖ್ಯೆ ವ್ಯಾಪ್ತಿ ಹೊಂದಿದ್ದು ಪಾಣಾಜೆ, ನಿಡ³ಳ್ಳಿ, ಬೆಟ್ಟಂಪಾಡಿ, ಇರ್ದೆ, ಬಲಾ°ಡು, ಸಾಜ, ಕೊಡಿಪ್ಪಾಡಿ, ಕಬಕ ಉಪ ಕೇಂದ್ರಗಳು ಒಳಗೊಂಡಿದೆ. ಪ್ರಸ್ತುತ ರೋಗಿಗಳ ತಪಾಸಣೆ ಗೆಯಷ್ಟೇ ಸೀಮಿತವಾಗಿರುವ ಈ ಕೇಂದ್ರ ಇನ್ನೂ ಮುಂದೆ ಸಮುದಾಯ ಆರೋಗ್ಯ ಕೇಂದ್ರವಾಗಿ 30 ಬೆಡ್‌ಗಳನ್ನು ಒಳಗೊಂಡು ದಿನದ 24 ತಾಸು ಕಾಲ ಸೇವೆ ನೀಡಲಿದೆ.
Related Articles
ಕಳೆದ ವರ್ಷ ದ.ಕ.ಜಿಲ್ಲೆಯಲ್ಲಿ ಪುತ್ತೂರು ತಾಲೂಕಿನ ಪಾಣಾಜೆ ಆರೋಗ್ಯ ಕೇಂದ್ರ, ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರ, ಬೆಳ್ತಂಗಡಿ ತಾಲೂಕಿನ ವೇಣೂರು ಪ್ರಾ.ಆ.ಕೇಂದ್ರವನ್ನು 30 ಬೆಡ್‌ಗೆ ಏರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಪುತ್ತೂರಿನಲ್ಲಿ ಈಗಾಗಲೇ ಉಪ್ಪಿನಂಗಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದೆ.
Advertisement
ಗಡಿ ಗ್ರಾಮದವರಿಗೆ ಅನುಕೂಲಕೇರಳ-ಕರ್ನಾಟಕಕ್ಕೆ ಪಾಣಾಜೆ ಗಡಿ ಗ್ರಾಮ. ಈ ಎರಡು ಗ್ರಾಮದ ನಿವಾಸಿಗಳು ಎರಡೂ ರಾಜ್ಯದ ಸಂಪರ್ಕ ಹೊಂದಿದ್ದಾರೆ. ಈ ಭಾಗದಲ್ಲಿ ಸುಸಜ್ಜಿತ ಖಾಸಗಿ, ಸರಕಾರಿ ಆಸ್ಪತ್ರೆಗಳು ಇಲ್ಲದ ಕಾರಣ ತುರ್ತು ಸಂದರ್ಭದಲ್ಲಿ ಪುತ್ತೂರನ್ನೇ ಅವಲಂಬಿಸಬೇಕಿದೆ. ಹೀಗಾಗಿ ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರ ಗಡಿ ಗ್ರಾಮದ ನಿವಾಸಿಗಳಿಗೆ ಪ್ರಯೋಜನವಾಗಲಿದೆ. ಶೇ.60 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕೆಎಚ್‌ಎಸ್‌ಆರ್‌ಡಿ ಕಾಮಗಾರಿ ಅನುಷ್ಠಾನ ಮಾಡುತ್ತಿದ್ದು ಕಾರ್ಕಳದ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ.
-ರಾಜೇಶ್ ರೈ, ಸಹಾಯಕ ಎಂಜಿನಿಯರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರ್ ವಿಭಾಗ, ಮಂಗಳೂರು. 24 ತಾಸು ಸೇವೆ
ಸಮುದಾಯ ಆರೋಗ್ಯ ಕೇಂದ್ರ ಕಾರ್ಯಾರಂಭದ ಬಳಿಕ ದಿನದ 24 ತಾಸು ಕೂಡ ಸೇವೆ ಸಿಗಲಿದೆ. ಗಡಿಭಾಗದ ಜನರಿಗೆ ಇದರಿಂದ ಅನುಕೂಲವಾಗಲಿದೆ.
-ಡಾ|ದೀಪಕ್ ರೈ, ತಾ.ಆರೋಗ್ಯಾಧಿಕಾರಿ, ಪುತ್ತೂರು. ಆಸ್ಪತ್ರೆಯಲ್ಲಿ ಏನಿರಲಿದೆ..?
- ಸಮುದಾಯ ಕೇಂದ್ರದಲ್ಲಿ ಆಪರೇಷನ್ ಥಿಯೇಟರ್ (ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಥಮ)
- ಕೋಲ್ಡ್ ಸ್ಟೋರೇಜ್ ಮೋರ್ಚರಿ
- ವೈದ್ಯಕೀಯ ಸಲಕರಣೆಗಳು
- ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ
- ಮೆಡಿಕಲ್ ಆಕ್ಸಿಜನ್ ಲೈನ್
- ಪ್ರಸೂತಿ, ಮಕ್ಕಳ ತಜ್ಞರು, ಅರಿವಳಿಕೆ, ಆಡಳಿತ ವೈದ್ಯಾಧಿಕಾರಿ, ದಂತ ವೈದ್ಯರು ಹಾಗೂ ಆಯುಷ್ ಅಧಿಕಾರಿ 12 ಡಿ ಗ್ರೂಪ್ ನೌಕರರು, ಲ್ಯಾಬ್ ಟೆಕ್ನಿಶಿಯನ್, 6 ಸ್ಟಾಫ್ ನರ್ಸ್, 2 ಔಷಧ ವಿತರಕರು