Advertisement

ಉಡುಪಿ ಶ್ರೀಕೃಷ್ಣಮಠ: ಐದನೇ ಶತಮಾನದ ಇತಿಹಾಸದಲ್ಲಿ ಮೊದಲ ಪರ್ಯಾಯ

06:25 PM Jan 14, 2022 | Team Udayavani |

ಉಡುಪಿ : ಶ್ರೀಕೃಷ್ಣಮಠದ ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ 5ನೇ ಶತಮಾನದ ಇತಿಹಾಸದತ್ತ ದಾಪುಗಾಲಿಡುತ್ತಿದೆ. ಮಧ್ವಾಚಾರ್ಯರು (1238 -1317) ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎರಡೆರಡು ತಿಂಗಳ ಅವಧಿ ಸರದಿ ಪೂಜೆಯ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಶ್ರೀವಾದಿರಾಜ ಗುರು ಸಾರ್ವಭೌಮರು (1481-1601) ದ್ವೈವಾರ್ಷಿಕ ಪೂಜಾ ವ್ಯವಸ್ಥೆಗೆ ಅವಧಿ ವಿಸ್ತರಿಸಿದರು.

Advertisement

ಎರಡು ತಿಂಗಳ ಪೂಜೆಯಿಂದ ಸುದೀರ್ಘ‌ ತೀರ್ಥಯಾತ್ರೆ, ತಣ್ತೀಪ್ರಸಾರ ಇದರಿಂದ ಸಾಧ್ಯವಾಗುತ್ತಿರಲಿಲ್ಲ. ಮಹತ್ವಪೂರ್ಣ ಕಾರ್ಯ ಯೋಜನೆಗಳಿಗೆ ಇದು ತೊಡಕಾಗುತ್ತಿತ್ತು. ಎರಡು ವರ್ಷಗಳ ಪೂಜಾ ಪದ್ಧತಿ ಜಾರಿಗೊಳಿಸಿದರೆ ಆಡಳಿತಾತ್ಮಕವಾಗಿ ಅನುಕೂಲ ಎಂದು ಶ್ರೀವಾದಿ ರಾಜರು ಈ ನಿರ್ಧಾರವನ್ನು ತೆಗೆದುಕೊಂಡರು. ಉತ್ತರ ಬದರಿಗೆ ಶ್ರೀವಾದಿರಾಜರು ತೆರಳಿ ಶ್ರೀಮಧ್ವಾಚಾರ್ಯರ ಅಣತಿ ಪಡೆದು ದ್ವೆ„ ವಾರ್ಷಿಕ ಪರ್ಯಾಯ ವ್ಯವಸ್ಥೆಯನ್ನು ಜಾರಿಗೆ ತಂದರು. ಹಿಂದಿನಂತೆ ದ್ವೆ„ಮಾಸಿಕ ವ್ಯವಸ್ಥೆ ಅನುಕ್ರಮಣಿಕೆಯಂತೆಯೇ ಮುಂದುವರಿಯಿತು. ಪಲಿಮಾರು ಮಠದಿಂದ ಆರಂಭಗೊಂಡು ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಅನಂತರ ಪೇಜಾವರ ಮಠದಲ್ಲಿ ಕೊನೆಗೊಳ್ಳುತ್ತದೆ. ಆಯಾ ಪರಂಪರೆಯ ಆದ್ಯ ಯತಿಗಳ ಆಶ್ರಮ ಜ್ಯೇಷ್ಠತ್ವವನ್ನು ಆಧರಿಸಿ ಇದು ಜಾರಿಗೆ ಬಂದಿದೆ.

ಅನುಕ್ರಮಣಿಕೆಯಲ್ಲಿ ಈಗ ಮೂರನೇ ಸರದಿ ಬರುತ್ತಿದೆ. 1522ರಲ್ಲಿ ದ್ವೈವಾರ್ಷಿಕ ಪೂಜಾ ವ್ಯವಸ್ಥೆಯನ್ನು ವಾದಿರಾಜರು ಆರಂಭಿಸಿದರು. ಅನುಕ್ರಮಣಿಕೆ ಯಂತೆ 10 ವರ್ಷಗಳ ಬಳಿಕ 1532ರಲ್ಲಿ ಸ್ವಯಂ ವಾದಿರಾಜರ ಪರ್ಯಾಯ ಬಂತು. ಅನಂತರ ಅವರು 1548-49, 1564-65, 1580-81ರಲ್ಲಿ ಪರ್ಯಾಯ ಪೂಜೆ ನಡೆಸಿದರು.

ಕಾರ್ಯಕ್ರಮ ವೈವಿಧ್ಯ

Advertisement

ಪರ್ಯಾಯ ಮಹೋತ್ಸವದ ಜ. 18ರ ಪ್ರಾತಃಕಾಲ 2.15ಕ್ಕೆ ಕಾಪು ಬಳಿ ದಂಡತೀರ್ಥದಲ್ಲಿ ಶ್ರೀಪಾದ ರಿಂದ ಪವಿತ್ರ ಸ್ನಾನ, 2.30ಕ್ಕೆ ಜೋಡುಕಟ್ಟೆಗೆ ಆಗಮನ, 2.45ಕ್ಕೆ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ, 3ಕ್ಕೆ ಪರ್ಯಾಯ ಮೆರವಣಿಗೆ ಆರಂಭ, 4.15ಕ್ಕೆ ರಥಬೀದಿಗೆ ಆಗಮನ, 4.30ಕ್ಕೆ ಕನಕನ ಕಿಂಡಿಯಲ್ಲಿ ಕೃಷ್ಣ ದೇವರ ದರ್ಶನ, 5ಕ್ಕೆ ಚಂದ್ರಮೌಳೀಶ್ವರ, ಅನಂತೇಶ್ವರ, ಮಧ್ವಾಚಾರ್ಯರ ಸನ್ನಿಧಿಯ ದರ್ಶನ, 5.25ಕ್ಕೆ ಕೃಷ್ಣಮಠ ಪ್ರವೇಶ, ದೇವರ ದರ್ಶನ, ಪ್ರಾರ್ಥನೆ, 5.45ಕ್ಕೆ ಶ್ರೀ ಮನ್ಮಧ್ವಾಚಾರ್ಯ ಕರಾರ್ಚಿತ ಅಕ್ಷಯಪಾತ್ರೆ, ಬೆಳ್ಳಿಯ ಸಟ್ಟುಗ ಸ್ವೀಕಾರ, 5.55ಕ್ಕೆ ಪವಿತ್ರ ಸರ್ವಜ್ಞ ಪೀಠಾರೋಹಣ, ಬೆಳಗ್ಗೆ ಪರ್ಯಾಯ ಶ್ರೀಗಳಿಂದ ಬಡಗುಮಾಳಿಗೆ ಅರಳು ಗದ್ದಗೆಯಲ್ಲಿ ಗಂಧ್ಯಾದ್ಯುಪಚಾರ, ಪಟ್ಟಕಾಣಿಕೆ ಸಮರ್ಪಣೆ, 6.45ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್‌ ಪ್ರಾರಂಭ, 8.30ಕ್ಕೆ ದರ್ಬಾರ್‌ ಸಮಾಪನೆ, 10ಕ್ಕೆ ಮಹಾಪೂಜೆ, 10.30ಕ್ಕೆ ಪಲ್ಲಪೂಜೆ, 11ಕ್ಕೆ ಅನ್ನ ಸಂತರ್ಪಣೆ, ಸಂಜೆ 5ಕ್ಕೆ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ, ರಾತ್ರಿ 7ಕ್ಕೆ ರಾತ್ರಿ ಪೂಜೆ ಪ್ರಾರಂಭ, 7.30ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದೆ.

ಸಮ್ಮಾನಗೊಳ್ಳಲಿರುವ ಸಾಧಕರು

ವೇದಾಂತ: ದಿ| ವ್ಯಾಸ ಆಚಾರ್ಯ ಪರವಾಗಿ ವೃಜನಾಥ ಆಚಾರ್ಯ.ವೈದ್ಯಕೀಯ: ಡಾ| ಶಶಿಕಿರಣ್‌ ಉಮಾಕಾಂತ್‌,ಶಿಕ್ಷಣ ಕ್ಷೇತ್ರ: ಡಾ| ಕೆ. ವಿನಯ ಹೆಗ್ಡೆ, ಸಮಾಜ ಸೇವೆ: ನೇರಂಬಳ್ಳಿ ರಾಘವೇಂದ್ರ ರಾವ್‌ ಅವರು ಪರ್ಯಾಯ ದರ್ಬಾರ್‌ನಲ್ಲಿ ಶ್ರೀಕೃಷ್ಣಾನುಗ್ರಹದ ಪ್ರಶಸ್ತಿಯಿಂದ ಸಮ್ಮಾನಗೊಳ್ಳಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ

ಜ. 18ರಂದು ಪ್ರಾತಃಕಾಲ 3ಕ್ಕೆ ಪವನ ಬಿ. ಆಚಾರ್‌ರಿಂದ ಪಂಚವೀಣಾವಾದನ, 4ಕ್ಕೆ ನಿತೀಶ್‌ ಅಮ್ಮಣ್ಣಾಯರಿಂದ ವೇಣುವಾದನ, ಸಂಜೆ 5ಕ್ಕೆ ಅಶ್ವತ್ಥಪುರ ಉಮಾನಾಥ ಬಳಗದಿಂದ ನಾದಸ್ವರ ಕಛೇರಿ, ರಾತ್ರಿ 7ಕ್ಕೆ ಬೆಂಗಳೂರಿನ ರವಿಚಂದ್ರ ಕೂಳೂರು ಬಳಗದಿಂದ ವೇಣುಗಾನ ವೈವಿಧ್ಯ, ಜ. 19ರ ರಾತ್ರಿ 7ಕ್ಕೆ ಚೆನ್ನೈಯ ವಿ|ಮಹತಿ ಬಳಗದಿಂದ ಕರ್ಣಾಟಕ ಶಾಸ್ತ್ರೀಯ ಸಂಗೀತ, ಜ.20ರ ರಾತ್ರಿ 7ಕ್ಕೆ ಪುಣೆ ಆಳಂದಿಯ ಅವಧೂತ ಗಾಂಧಿ ಬಳಗದಿಂದ ಮಹಾರಾಷ್ಟ್ರ ಸಂತ ಸಾಹಿತ್ಯ ಜಾನಪದ ಭಕ್ತಿ ಸಂಗೀತ, ಜ.21ರ ರಾತ್ರಿ 7ಕ್ಕೆ ಕೊಡವೂರು ನೃತ್ಯನಿಕೇತನದಿಂದ ನಾರಸಿಂಹ-ಒಳಿತಿನ ವಿಜಯದ ಕಥನ ನೃತ್ಯರೂಪಕ, ಜ.22ರ ರಾತ್ರಿ 7ಕ್ಕೆ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ.

Advertisement

Udayavani is now on Telegram. Click here to join our channel and stay updated with the latest news.

Next