Advertisement

ಜಪಾನ್‌ ಪ್ರಜೆ ಹತ್ಯೆಗೈದ ಐವರು ಬಾಂಗ್ಲಾ ಉಗ್ರರಿಗೆ ಮರಣ ದಂಡನೆ

12:27 PM Feb 28, 2017 | Team Udayavani |

ಢಾಕಾ : 2015ರಲ್ಲಿ  66ರ ಹರೆಯದ ಜಪಾನಿನ ಪ್ರಜೆಯನ್ನು ಗುಂಡಿಕ್ಕಿ ಹತ್ಯೆಗೈದಿದ್ದ ನಿಷೇಧಿತ ಜೆಎಂಬಿ ಉಗ್ರ ಸಂಸ್ಥೆಯ ಐವರು ಭಯೋತ್ಪಾದಕರಿಗೆ ಬಾಂಗ್ಲಾದೇಶದಲ್ಲಿ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ.

Advertisement

ಜಮಾತ್‌ ಮುಜಾಹಿದೀನ್‌ ಬಾಂಗ್ಲಾದೇಶ್‌ ಉಗ್ರ ಸಂಘಟನೆಯ ಐವರು ಭಯೋತ್ಪಾದಕರನ್ನು ನೇಣಿಗೆ ಹಾಕುವ ಶಿಕ್ಷೆಯನ್ನು ರಂಗಾಪುರದ ನ್ಯಾಯಾಲಯವು ಇಂದು ಪ್ರಕಟಿಸಿರುವುದಾಗಿ ಡೇಲಿ ಸ್ಟಾರ್‌ ವರದಿ ಮಾಡಿದೆ.

ಈ ಪ್ರಕರಣದ ಇನ್ನಿಬ್ಬರು ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗದಿರುವುದರಿಂದ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.

ಜಪಾನಿನನ 66ರ ಹರೆಯದ ಕುನಿಯೋ ಹೋಶಿ ಎಂಬವರು 2015ರ ಮೇ ತಿಂಗಳಲ್ಲಿ ಬಾಂಗ್ಲಾದೇಶಕ್ಕೆ ಬಂದಿದ್ದರು. ಅದೇ ವರ್ಷ ಅಕ್ಟೋಬರ್‌ 3ರಂದು ಅವರನ್ನು ಉಗ್ರರು ರಂಗಾಪುರದಲ್ಲಿ ಗುಂಡಿಕ್ಕಿ ಸಾಯಿಸಿದ್ದರು. ಕುನಿಯೋ ಹೋಶಿ ಅವರು ರಂಗಾಪುರದ ಹೊರವಲಯದಲ್ಲಿ ಗ್ರಾಸ್‌ ಫಾರ್ಮ್ ರೂಪಿಸಿದ್ದರು. 

ಸ್ಥಳೀಯರ ಪ್ರಕಾರ ಹೋಶಿ ಅವರು ಇಸ್ಲಾಮ್‌ ಗೆ ಮತಾಂತರಗೊಂಡಿದ್ದರು. ಢಾಕಾದಲ್ಲಿನ ರಾಜತಾಂತ್ರಿಕ ಪ್ರದೇಶದಲ್ಲಿ 50ರ ಹರೆಯದ ಇಟಲಿಯ ಪ್ರಜೆಯೊಬ್ಬರನ್ನು ಬೈಕಿನಲ್ಲಿ ಬಂದ ಉಗ್ರರು ಗುಂಡಿಕ್ಕಿ ಕೊಂದ ಐದು ದಿನಗಳ ತರುವಾಯ ಹೋಶಿ ಅವರ ಹತ್ಯೆ ನಡೆದಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next