ಮುಂಬಯಿ: ʼಸಿಂಗಂ ಎಗೇನ್ʼ (Singham Again) ಬಾಕ್ಸಾಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ದೀಪಾವಳಿ ಹಬ್ಬಕ್ಕೆ ತೆರೆಕಂಡ ಈ ಸಿನಿಮಾ ರೋಹಿತ್ – ಅಜಯ್ ಜೋಡಿಗೆ ಹಿಟ್ ತಂದುಕೊಟ್ಟಿದೆ.
ಅಜಯ್ ದೇವಗನ್(Ajay Devgn), ರೋಹಿತ್ ಶೆಟ್ಟಿ (Rohit Shetty) ʼಸಿಂಗಂʼ ಫ್ರಾಂಚೈಸ್ ಮತ್ತೊಮ್ಮೆ ಮೋಡಿ ಮಾಡಿದೆ. ಪೊಲೀಸ್ ಸ್ಟೋರಿಯ ಕಥೆಯನ್ನು ಮಲ್ಟಿಸ್ಟಾರ್ಸ್ಗಳೊಂದಿಗೆ ಹೇಳಿ ರೋಹಿತ್ ಸೈ ಎನ್ನಿಸಿಕೊಂಡಿದ್ದಾರೆ.
ʼಸಿಂಗಂ ಎಗೇನ್ʼ ಬಳಿಕ ಅಜಯ್ ಜತೆ ಮತ್ತೊಂದು ಫ್ರಾಂಚೈಸ್ ಸಿನಿಮಾ ಮಾಡುವ ತಯಾರಿಯ ಬಗ್ಗೆ ರೋಹಿತ್ ಶೆಟ್ಟಿ ಮಾತನಾಡಿದ್ದಾರೆ.
ʼಪಿಂಕ್ ವಿಲ್ಲಾʼ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ರೋಹಿತ್ ಶೆಟ್ಟಿ ಹಾಗೂ ಅಜಯ್ ದೇವಗನ್ ಮುಂದಿನ ಪ್ರಾಜೆಕ್ಟ್ಗಳ ಹಂಚಿಕೊಂಡಿದ್ದಾರೆ.
ಮುಂದಿನ ಸಿನಿಮಾದ ಬಗ್ಗೆ ಯಾವುದಾದರೂ ಹೊಸ ಅಪ್ಡೇಟ್ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ರೋಹಿತ್ ಶೆಟ್ಟಿ “ಯಾವುದೇ ಪೊಲೀಸ್ ಚಿತ್ರ ಮಾಡುವ ಮೊದಲು ʼಗೋಲ್ ಮಾಲ್ʼ ಸಿನಿಮಾವನ್ನು ಮಾಡಬೇಕೆಂದಿದ್ದೇನೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ ನೀವಿಬ್ಬರು ಆ್ಯಕ್ಷನ್ – ಪ್ಯಾಕ್ಡ್ ಸಿನಿಮಾ ಮಾಡಿದ್ದೀರಿ. ಈಗ ಕೆಲಸವನ್ನು ಇದ್ದಕ್ಕಿದ್ದಂತೆ ಬದಲಾಯಿಸಲು ಕಷ್ಟವಾಗುತ್ತದೆಯೇ ಎಂದು ಅಜಯ್ ದೇವಗನ್ ಅವರ ಬಳಿ ಕೇಳಲಾಗಿದೆ.
“ನಾವು ಸೆಟ್ಗಳಲ್ಲಿ ಒಂದು ಪ್ರಪಂಚದಿಂದ ಇನ್ನೊಂದಕ್ಕೆ ಬದಲಾಗುವುದಿಲ್ಲ, ನಾವು ಆಕ್ಷನ್ ಮತ್ತು ಕಟ್ ನಡುವೆ ಒಂದು ಪ್ರಪಂಚದಿಂದ ಇನ್ನೊಂದಕ್ಕೆ ಬದಲಾಯಿಸುತ್ತಿದ್ದೇವೆ. ಒಂದು ಸೀನ್ ನೀವು ಸೆಟ್ನಲ್ಲಿ ನೋಡುತ್ತೀರಿ. ಆ ಶಾಟ್ ಕಟ್ ಮಾಡಿದ ನಂತರ ನಿಮಗೆ ಅದನ್ನು ಮೊದಲಿನಂತೆ ನೋಡಲು ಸಾಧ್ಯವಿಲ್ಲ. ನಾನು ಸಿಂಗಂನಂತೆ ವರ್ತಿಸಲು ಸಾಧ್ಯವಿಲ್ಲ. ಸಿಂಗಂನಂತೆ ತಿರುಗಾಡಲು ಸಾಧ್ಯವಿಲ್ಲ. ಹಾಗಾಗಿ ನಾನು ಸಾಮಾನ್ಯನಾಗಿರಬೇಕು ಇಲ್ಲದಿದ್ದರೆ ನೀವು ಹುಚ್ಚರಾಗುತ್ತೀರಿ” ಎಂದು ಅಜಯ್ ದೇವಗನ್ ಹೇಳಿದ್ದಾರೆ.
ʼಸಿಂಗಂʼನಂತಹ ಸಿನಿಮಾವನ್ನು ಮಾಡಿದ ಬಳಿಕ ʼಗೋಲ್ ಮಾಲ್ʼ ನಂತಹ ಸಿನಿಮಾದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದು ನನ್ನನ್ನು ಡಿಟಾಕ್ಸ್ ನಂತೆ ರಿಫ್ರೆಶ್ ಮಾಡುತ್ತದೆ ಎಂದು ಅಜಯ್ ಹೇಳಿದ್ದಾರೆ.
ʼಗೋಲ್ ಮಾಲ್ʼ ಸರಣಿ ಇದುವರೆಗೆ 4 ಪಾರ್ಟ್ಗಳಲ್ಲಿ ಬಂದಿದೆ. ʼಗೋಲ್ಮಾಲ್: ಫನ್ ಅನ್ಲಿಮಿಟೆಡ್ʼ, ʼಗೋಲ್ಮಾಲ್ ರಿಟರ್ನ್ಸ್ʼ, ʼಗೋಲ್ಮಾಲ್ 3ʼ ಮತ್ತು ʼಗೋಲ್ಮಾಲ್ ಎಗೇನ್ʼ. ಇದರಲ್ಲಿ ಅಜಯ್ ದೇವಗನ್, ಅರ್ಷದ್ ವಾರ್ಸಿ, ತುಷಾರ್ ಕಪೂರ್ ಮುಂತಾದವರು ಮಹತ್ವದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.