Advertisement

5 ಕೋಟಿ ಕೊವ್ಯಾಕ್ಸಿನ್‌ ಡೋಸ್‌ ಶೀಘ್ರ ವ್ಯರ್ಥ

07:31 PM Nov 06, 2022 | Team Udayavani |

ಹೈದರಾಬಾದ್‌: ಭಾರತ್‌ ಬಯೋಟೆಕ್‌ ಕಂಪನಿ ತಯಾರಿಸಿರುವ ಕೊವ್ಯಾಕ್ಸಿನ್‌ ಲಸಿಕೆಯ 5 ಕೋಟಿ ಡೋಸ್‌ಗಳು 2023ರ ಆರಂಭದ ಹೊತ್ತಿಗೆ ನಿಷ್ಪ್ರಯೋಜಕವಾಗುವ ಸಾಧ್ಯತೆಗಳು ಇವೆ.

Advertisement

ಸದ್ಯ ಕೊರೊನಾದ ಅಬ್ಬರ ಕಡಿಮೆಯಾಗಿರುವುದರಿಂದ ಲಸಿಕೆ ಹಾಕಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಲಸಿಕೆ ವ್ಯರ್ಥವಾಗಲಿದ್ದು, ಕೋಟ್ಯಂತರ ರೂ. ನಷ್ಟವಾಗಲಿವೆ ಎಂದು ಕಂಪನಿಯ ಮೂಲಗಳು ಹೇಳಿಕೊಂಡಿವೆ.

ಒಟ್ಟಾರೆ ಬಯೋಟೆಕ್‌ ಬಳಿ 20 ಕೋಟಿ ಡೋಸ್‌ಗಳಿವೆ. ಈ ಪೈಕಿ 5 ಕೋಟಿ ಶೀಷೆಯಲ್ಲಿವೆ. ಅವೇ ಈ ಅವಧಿ ಮುಕ್ತಾಯವಾಗುವ ಹಂತ ತಲುಪಿರುವುದು.

ಶನಿವಾರ ಭಾರತದಲ್ಲಿ 1082 ಹೊಸ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಈಗಲೂ ಸಕ್ರಿಯವಾಗಿರುವ ಕೊರೊನಾ ಸೋಂಕಿತರ ಸಂಖ್ಯೆ ಕೇವಲ 15,200ಕ್ಕಿಳಿದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next