Advertisement

ಹೊಸಪೇಟೆ: 41.61 ಕೋಟಿ ರೂ. ಮುಂಗಡ ಬಜೆಟ್‌ ಮಂಡನೆ

05:50 PM Mar 15, 2022 | Team Udayavani |

ಹೊಸಪೇಟೆ: ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಯ್ಯದ್‌ ಅಮಾನುಲ್ಲಾ ಸೋಮವಾರ 2022-23ನೇ ಸಾಲಿನ 41.61 ಕೋಟಿ ರೂ.ಗಳ ಮುಂಗಡ ಅಯವ್ಯಯ ಮಂಡಿಸಿದರು.

Advertisement

ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾವನೆ ಸೇರಿ, ಎಸ್‌ಎಫ್‌ಸಿ-ಮುಕ್ತನಿಧಿ ಯೋಜನೆಯಡಿಯಲ್ಲಿ ಅಂದಾಜು ಒಂದು ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ. ಪಟ್ಟಣದಲ್ಲಿ 416197087 ರೂ.ನಲ್ಲಿ 415050797 ರೂ.ಗಳ ಯೋಜನೆ ರೂಪಿಸಲಾಗಿದ್ದು, 1146290 ಲಕ್ಷ ರೂ. ಉಳಿಸಲಾಗಿದೆ. ಅದರಲ್ಲಿ ಪೌರಕಾರ್ಮಿಕರ ಮೂಲಸೌಕರ್ಯ ಸೇರಿ ಅಭಿವೃದ್ಧಿ ಕಾಮಗಾರಿ  ಹಮ್ಮಿಕೊಳ್ಳಲಾಗುತ್ತದೆ. 15ನೇ ಹಣಕಾಸು ಯೋಜನೆಯಡಿಯಲ್ಲಿ ಅಂದಾಜು 2.60 ಕೋಟಿ ರೂ. ಅನುದಾನವನ್ನು ನಿರೀಕ್ಷಿಸಲಾಗಿದ್ದು, ಪಟ್ಟಣದ ಸಾಮೂಹಿಕ ಶೌಚಾಲಯ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ಮುಖ್ಯ ರಸ್ತೆ ಮತ್ತು ಚರಂಡಿ ಕಾಮಗಾರಿ.

ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ನಗರೋತ್ಥಾನ ಮುನಿಸಿಪಾಲಿಟಿ-4 ಯೋಜನೆಯಡಿಯಲ್ಲಿ ಹಂಚಿಕೆಯಾದ 5 ಕೋಟಿ ರೂ. ಅನುದಾನದಲ್ಲಿ ಎಸ್ಸಿ-ಎಸ್ಟಿ, ಒಬಿಸಿ ಸೌಲಭ್ಯಗಳು, ಹಾಗೂ ಪಪಂ ಕಚೇರಿಯ ನಿರ್ಮಾಣ ಸೇರಿ ಇತರೆ ಕಾಮಗಾರಿಗೆ ಒತ್ತು ನೀಡುವುದು. ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಮತ್ತು ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಯೋಜನೆಯಡಿಗೆ ಹೆಚ್ಚಿನ ಒತ್ತು ನೀಡುವುದು. ಪಟ್ಟಣದಲ್ಲಿ ನಿರ್ಮಿಸಲಾಗಿರುವ ಉದ್ಯಾನವಗಳ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಲೆಕ್ಕಾ ಧಿಕಾರಿ ನಾಗಿಪೋಗು ಅರವಿಂದ್‌
ಕುಮಾರ್‌ ವಿವರ ನೀಡಿದರು. ಉಪಾಧ್ಯಕ್ಷೆ ಬೋರಮ್ಮ, ಸದಸ್ಯರಾದ ಗೋಪಾಲ್‌, ಮಾಳಗಿ ರಾಮಸ್ವಾಮಿ, ಪಾಲಯ್ಯ, ರವಿ, ಕಿಶೋರ್‌, ಜ್ಯೋತಿಬಾಯಿ, ಅಮಿನಾ ಮತ್ತಿತರರಿದ್ದರು.

ಸಮಸ್ಯೆಗಳ ಸರಮಾಲೆ: ತಮ್ಮ ವಾರ್ಡ್‌ಗಳ ಸಮಸ್ಯೆಗಳ ಸರಮಾಲೆಯಂತೆ ಆಶ್ರಯ ಮನೆ ನಿರ್ಮಾಣಕ್ಕೆ ಚಾಲನೆ ನೀಡಿ, ಇನ್ನೂ ವಿಳಂಬವಾಗಿರುವ ಮನೆಗಳನ್ನು ಪೂರ್ಣಗೊಳಿಸಿ. ಚರಂಡಿ, ಕುಡುವ ನೀರು, ವಿದ್ಯುತ್‌ ದೀಪಗಳು, ತೆರಿಗೆಗಳು ಸೇರಿದಂತೆ ನಾನಾ ಮುಲಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಸದಸ್ಯರು ಒತ್ತಾಯಿಸಿದರು.

ಯುಜಿಡಿಗೆ ಭೂಮಿ ಬೇಕಿದೆ: ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ನಡೆಸಲು ಜಮೀನು ಅವಶ್ಯಕತೆ ಇದೆ. ಸದಸ್ಯರು, ಜಮೀನು ಖರೀದಿಗಾಗಿ ರೈತರ ಮನೊಲಿಸುವ ಪ್ರಯತ್ನ ಮಾಡಬೇಕು ಅಧ್ಯಕ್ಷ ಸಯ್ಯದ್‌ ಅಮಾನುಲ್ಲ ಹೇಳಿದರು.

Advertisement

ಅಭಿವೃದ್ಧಿಗೆ ಅನುದಾನ ಮೀಸಲಿಡಿ ಬಜೆಟ್‌ನಲ್ಲಿ ಪಟ್ಟಣದ ಅಭಿವೃದ್ಧಿಗೆ ಅನುದಾನ ಮೀಸಲಿಡಿ. ಪಟ್ಟಣದಲ್ಲಿ ಸಮರ್ಪಕವಾಗಿ ಮುಲಸೌಕರ್ಯಗಳಿಲ್ಲ. ನಿರ್ವಹಣೆಯಿಲ್ಲದೇ ದುರಸ್ತೆಯಲ್ಲಿದೆ. ಚರಂಡಿಗಳು ಗಬ್ಬುನಾರುತ್ತಿದೆ. ಕುಡಿವ ನೀರಿನಲ್ಲಿ ಚರಂಡಿ ನೀರು ಬೆರೆತು ವಾಸನೆ ಬರುತ್ತಿದೆ. ಜನರು ರೋಗರುಜಿನಿಗಳಿಂದ ಬಳಲುತ್ತಿದ್ದಾರೆ. ಇದರಿಂದ ಬೇಸತ್ತ ಜನರು ಪಟ್ಟಣ ಪಂಚಾಯ್ತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ತಿಳಿಸಿದರು.

ನೀರಿನ ಸಮಸ್ಯೆ ಪರಿಹಾರ ಮಾಡಿ ಬೇಸಿಗೆ ಆರಂಭವಾಗಿದೆ. ಪಟ್ಟಣದಲ್ಲಿ ಈಗಾಗಲೇ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಕುಡಿಯುವ ನೀರಿನ ಸಮಸ್ಯೆ ಕೂಡಲೇ ಪರಿಹರಿಸಬೇಕು. ದೂರದ ವಾರ್ಡ್‌ ಗಳಿಗೆ ಮೊದಲ ಆದ್ಯತೆ ನೀಡಿ, ನಂತರ ಹತ್ತಿರ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಅಜಯ್‌ ಕುಮಾರ್‌ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next