Advertisement

ಸಕ್ಕರೆ ಜಿಲ್ಲೆಗೆ 4 ರಾಷ್ಟ್ರೀಯ ಪ್ರಶಸ್ತಿಗಳ ಗರಿ

05:17 AM Jun 18, 2020 | Lakshmi GovindaRaj |

ಮಂಡ್ಯ: ಜಿಪಂ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ ಮಂಡ್ಯ ಜಿಲ್ಲೆಗೆ ನಾಲ್ಕು ವಿಭಾಗಗಳಲ್ಲಿ ರಾಷ್ಟ್ರೀಯ ಪುರಸ್ಕಾರ ದೊರ ಕಿದೆ ಎಂದು ಜಿಪಂ ಸಿಇಒ ಕೆ.ಯಾಲಕ್ಕೀಗೌಡ ತಿಳಿಸಿದರು.

Advertisement

ಮಂಡ್ಯ ಜಿಪಂಗೆ ದೀನ್‌ ದಯಾಳ್‌ ಉಪಾಧ್ಯಾಯ ಪಂಚಾಯತ್‌ ಸಶಕ್ತೀಕರಣ ಪುರಸ್ಕಾರ (ಸಾಮಾನ್ಯ ವಿಭಾಗ)- 50 ಲಕ್ಷ ರೂ., ಮದ್ದೂರಿನ ಅಣ್ಣೂರು ಗ್ರಾಪಂಗೆ ದೀನ್‌ ದಯಾಳ್‌ ಉಪಾಧ್ಯಾಯ ಪಂಚಾಯತ್‌ ಸಶಕ್ತ ಪುರಸ್ಕಾರ (ವಿಷಯಾಧಾರಿತ ವಿಭಾ ಗ)- 10 ಲಕ್ಷ ರೂ.,  ಮದ್ದೂರಿನ ಹೆಮ್ಮನಹಳ್ಳಿ ಗ್ರಾಪಂಗೆ ಮಕ್ಕಳ ಸ್ನೇಹಿ ಗ್ರಾಪಂ ಪುರಸ್ಕಾರ- 5 ಲಕ್ಷ ರೂ. ಹಾಗೂ ಶ್ರೀರಂಗಪಟ್ಟಣದ ನಗುವ ನಹಳ್ಳಿ ಗ್ರಾಪಂಗೆ ನಮ್ಮಗ್ರಾಮ ನಮ್ಮ ಯೋಜ ನೆ- 5 ಲಕ್ಷ ರೂ. ನಗದು ಪುರಸ್ಕಾರ ದೊರಕಿರು ವುದಾಗಿ ಹೇಳಿದರು.

ಏ.24ರಂದು ರಾಷ್ಟ್ರೀಯ ಪಂಚಾಯತ್‌  ನದಂದು ಭಾರತ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಬೇಕಿತ್ತಾದರೂ, ಕೋವಿಡ್‌ ಹಿನ್ನೆಲೆ ಯಲ್ಲಿ ಪ್ರಶಸ್ತಿ ಪ್ರದಾನವನ್ನು ಮುಂದೂಡಲಾ ಗಿದೆ. ಪ್ರಶಸ್ತಿಯು ಫ‌ಲಕ, ನಗದು ಪುರಸ್ಕಾರ ಮತ್ತು ಪ್ರಶಸ್ತಿ  ಪತ್ರವನ್ನು ಒಳಗೊಂಡಿದೆ.

ಮಂಡ್ಯ ಜಿಪಂ ಸಾಧನೆಗಳೇನು?: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಎಲ್ಲಾ ಗ್ರಾಪಂಗಳಲ್ಲಿ ಪ್ಲಾಸ್ಟಿಕ್‌ ನಿರ್ಮೂಲನೆಗೆ ಆದ್ಯತೆ. ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಜಲಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ. ಗ್ರಾಪಂಗಳ  ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು. ವಿದ್ಯುತ್‌ ಬಿಲ್‌ ಮರು ಹೊಂದಾಣಿಕೆ ಮತ್ತು ಬಾಕಿ ಬಿಲ್‌ ಪಾವತಿಗೆ ಪ್ರಾಮುಖ್ಯತೆ. ಶೈಕ್ಷಣಿಕ ಚಟುವಟಿಕೆಗಳಿಗೆ ಗ್ರಾಪಂನಿಂದ 5 ಸಾವಿರ ರೂ.ಗಳ ಸಹಾಯಧನ ನೀಡಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶ  ಉತ್ತಮಗೊಳಿಸಲು ಕ್ರಮ. ಅಂಗನವಾಡಿಗಳಲ್ಲಿ ಹಾಲು ಮತ್ತು ಮೊಟ್ಟೆ ವಿತರಣೆಗೆ ಕ್ರಮ.

ಸರ್ಕಾರದ ವಿವಿಧ ವಸತಿ ಯೋಜನೆಗಳಡಿ 9121 ಮನೆಗಳನ್ನು ಪೂರ್ಣಗೊಳಿಸಿ ಶೇ.90ರಷ್ಟು ಸಾಧನೆ. ಗ್ರಾಪಂ ತ್ತೈಮಾಸಿಕ ಕೆಡಿಪಿ ಸಭೆಗಳ  ಪರಿಣಾಮಕಾರಿ ಅನುಷ್ಠಾನ, ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಗ್ರಾಪಂಗಳು ಸ್ವಂತ ಅಂತರ್ಜಾಲತಾಣ ಹೊಂದಿರುವುದು. ಮಕ್ಕಳ ಮತ್ತು ಮಹಿಳಾ ಗ್ರಾಮ ಸಭೆಗಳ ಯಶಸ್ವಿ ಯೋಜನೆ ಅಲ್ಲದೆ, ಮೈಸೂರಿನ ಅಬ್ದುಲ್‌ ನಜೀರ್‌ ಸಾಬ್‌ ತರಬೇತಿ  ಸಂಸ್ಥೆ ಸಹಭಾಗಿತ್ವದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದರಂತೆ ಒಟ್ಟು 7 ಮಹಿಳಾ ಗ್ರಾಮಸಭೆ ಗಳ ಯಶಸ್ವಿ ಆಯೋಜನೆ.

Advertisement

ಬಯಲು ಬಹಿರ್ದೆಸೆ ಮುಕ್ತ: ಹೆಮ್ಮನಹಳ್ಳಿ 2016-17 ಮತ್ತು 2017-18ನೇ ಸಾಲಿನಲ್ಲಿ ರಾಜ್ಯಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಲಭಿ ಸಿದೆ. ಅಲ್ಲದೆ, 2016-17ನೇ ಸಾಲಿಗೆ ನಮ್ಮ ಗ್ರಾಮ ನಮ್ಮ ಯೋಜನೆಗಾಗಿ ರಾಜ್ಯಮಟ್ಟದ ಪ್ರಶಸ್ತಿ  ದೊರಕಿದೆ. ಕರ್ನಾಟಕ ಸರ್ಕಾರ 2017-18ನೇ ಸಾಲಿನಲ್ಲಿ ಬಯಲು ಬಹಿ ರ್ದೆಸೆ ಮುಕ್ತ ಗ್ರಾಪಂ ಎಂದು ಘೋಷಿಸಿದೆ.

ನಮ್ಮ ಗ್ರಾಮ ನಮ್ಮ ಯೋಜನೆ ಜಾರಿ: ನಗುವನಹಳ್ಳಿ ಜಿಲ್ಲೆಯಲ್ಲಿ ಮೊದಲ ವೆಬ್‌ ಸೈಟ್‌ ರೂಪಿಸಿದ ಗ್ರಾಪಂ ಎನ್ನುವ ಹೆಗ್ಗಳಿಕೆ. ರಾಜ್ಯಸರ್ಕಾರ 2017-18ನೇ ಸಾಲಿನಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ ಎಂದು ಘೋಷಿಸಿದೆ.  ಎಲ್ಲಾ  ಸಮುದಾಯ ಅಭಿವೃದ್ಧಿ ಯೋಜ ನೆಗಳನ್ನು ಜನರ ಸಹಭಾಗಿತ್ವದಿಂದ ನಮ್ಮ ಗ್ರಾಮ ನಮ್ಮ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next