Advertisement
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಡಿ.14ರಂದು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ನಡೆಯಲಿದೆ. ಅಂದು ನಡೆಯುವ ಲೋಕ್ ಅದಾಲತ್‌ಗಾಗಿ ದಾಖಲಿಸಿಕೊಂಡ ಪಿಎಲ್‌ಸಿ ಪ್ರಕರಣಗಳ ಸಂಖ್ಯೆ 5,230. ರಾಜಿಯಾಗಲು ಗುರುತಿಸಿದ ಪ್ರಕರಣಗಳು 4,331.
Related Articles
Advertisement
2024ರ ಜು.13ರ ಲೋಕ್ ಅದಾಲತ್‌ನಲ್ಲಿ ಉಡುಪಿ 18,777, ಕಾರ್ಕಳ 3,969, ಕುಂದಾಪುರ 12,144 ಸೇರಿ 34,885 ಪ್ರಕರಣ ಇದ್ದು ಅದರಲ್ಲಿ 4,953 ಪ್ರಕರಣಗಳನ್ನು ರಾಜಿಯಾಗುವ ಪ್ರಕರಣಗಳೆಂದು ಗುರುತಿಸಿ, 4012 ಪ್ರಕರಣ ಇತ್ಯರ್ಥಪಡಿಸಲಾಗಿದೆ. ವ್ಯಾಜ್ಯ ಪೂರ್ವ 85,176 ಪ್ರಕರಣ ದಾಖಲು ಮಾಡಿಕೊಂಡಿದ್ದು ಅದರಲ್ಲಿ 84,913 ಪ್ರಕರಣ ಇತ್ಯರ್ಥ ಆಗಿದೆ.
ಸಾರ್ವಜನಿಕರಲ್ಲಿ ಜಾಗೃತಿ ಅರಿವುನ್ಯಾಯಾಧೀಕರಣದ ಜತೆಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ನಡೆದಿದೆ. ಎಲ್‌ಎಲ್‌ಪಿ ಕಾರ್ಯಕ್ರಮ, ಮಹಿಳೆಯರಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ, ಮಕ್ಕಳಿಗಾಗಿ ಕಾನೂನು ಸುರಕ್ಷತಾ ಕಾರ್ಯಕ್ರಮ, ಮಹಿಳೆಯರಿಗಾಗಿ ಕಾರ್ಯಾಗಾರ, ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಹಿತ ಹಲವು ಜಾಗೃತಿ, ಮಾಹಿತಿ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ನಡೆಸಲಾಗಿದೆ. 41,078 ಪ್ರಕರಣ ಇತ್ಯರ್ಥ
ಸೆ.14ರಂದು ನಡೆದ ಲೋಕ ಅದಾಲತ್‌ನಲ್ಲಿ ಉಡುಪಿ 18,521, ಕಾರ್ಕಳ 3,899, ಕುಂದಾಪುರ 11,706 ಸೇರಿ ಜಿಲ್ಲೆಯಲ್ಲಿ 34,126 ಪ್ರಕರಣ ದಾಖಲಾಗಿತ್ತು. ಅವುಗಳಲ್ಲಿ 3,705 ಪ್ರಕರಣ ರಾಜಿಯಾಗುವ ಪ್ರಕರಣವೆಂದು ಗುರುತಿಸಿದ್ದು ಅದರಲ್ಲಿ 3,015 ಪ್ರಕರಣ ಇತ್ಯರ್ಥವಾಗಿದೆ. ವ್ಯಾಜ್ಯಪೂರ್ವ 43,350 ಪ್ರಕರಣ ತೆಗೆದುಕೊಂಡಿದ್ದು ಅದರಲ್ಲಿ 41,078 ಪ್ರಕರಣ ಇತ್ಯರ್ಥವಾಗಿದೆ. ಪ್ರಯೋಜನ ಪಡೆದುಕೊಳ್ಳಿ
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಡಿ.14ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಅಂದು ಲೋಕ ಅದಾಲತ್ ನಡೆಯಲಿದೆ. ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ನಾಗರಿಕರು ಅದಾಲತ್‌ನಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
-ಕಿರಣ್ ಎಸ್. ಗಂಗಣ್ಣವರ್, ನ್ಯಾಯಾಧೀಶರು, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ರಾಜಿಗೆ ಮಾರ್ಗದರ್ಶನ
ಅದಾಲತ್‌ನ ಮೂಲಕ ನ್ಯಾಯಾಲಯಗಳಲ್ಲಿ ಎರಡೂ ಕಡೆಯವರಿಗೆ ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನ ಆಗುವುದರಿಂದ ವಿವಾದ ಅಂತ್ಯವಾಗಲಿದೆ.
-ಪಿ.ಆರ್. ಯೋಗೇಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ