Advertisement
ಇದನ್ನೂ ಓದಿ:- ಬೀದರ: ಶಿಕ್ಷಕನ ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ
Related Articles
Advertisement
ಇದನ್ನೂ ಓದಿ:- ಬೀದರ: ಶಿಕ್ಷಕನ ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ
ದೊಡ್ಡಬಳ್ಳಾಪುರದ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಹಿರಿಯ ವಿಜ್ಞಾನಿ ಡಾ. ವಿ.ಪಿ. ಮಲ್ಲಿಕಾರ್ಜುನಗೌಡ ಅವರಿಗೆ ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಹಾಗೂ ಬಾಗಲಕೋಟೆ ತೋಟಗಾರಿಕಾ ವಿವಿ ಸಂಶೋಧನಾ ನಿರ್ದೇಶಕರಾದ ಡಾ. ಎಚ್.ಸಿ. ಮಹೇಶ್ವರಪ್ಪ ಅವರಿಗೆ ಡಾ. ಎಂ.ಎಚ್. ಮರೀಗೌಡ ಅತ್ಯುತ್ತಮ ತೋಟಗಾರಿಕಾ ಸಂಶೋಧನಾ ರಾಷ್ಟ್ರೀ ಯ ದತ್ತಿ ಪ್ರಶಸ್ತಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಇದರ ಜೊತೆಗೆ ಕೃಷಿ ವಿವಿ ವ್ಯಾಪ್ತಿಯಲ್ಲಿರುವ 10 ಜಿಲ್ಲೆಗಳಲ್ಲಿ ಅರ್ಹ ರೈತರಿಗೆ ಪ್ರಗತಿಪರ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ, ಅದೇ ರೀತಿ ವಿವಿ ವ್ಯಾಪ್ತಿ ಯಲ್ಲಿರುವ 61 ತಾಲೂಕುಗಳಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
450 ಮಳಿಗೆಗಳಿಗೆ ಅವಕಾಶ: ಕೊರೊನಾ ಕಾರಣದಿಂದ ಕೇವಲ 450 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಮಳಿಗೆ ಹಾಕುವವರನ್ನು ಪ್ರೋತ್ಸಾಹಿಸಲು ಶೇ.50 ಶುಲ್ಕ ಕಡಿತ ಮಾಡಲಾಗಿದೆ. ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ: ರೈತರು ಕೇಳುವ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಭೌತಿಕವಾಗಿ ಮತ್ತು ವರ್ಚುಯಲ್ (ಜೂಮ್) ಮೂಲಕವೂ ನೇರ ಉತ್ತರ ಕೊಡಿಸಲಾಗುತ್ತಿದೆ. ರೈತರು ತಮ್ಮ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಬೆಳಗ್ಗೆ 9- 6 ರವರೆಗೆ ನೇರ ಪ್ರಸಾರ: ಮೇಳಕ್ಕೆ ಆಗಮಿ ಸಲು ಸಾಧ್ಯವಾಗದ ರೈತರಿಗೆ ಆನ್‌ಲೈನ್ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ. ಸಾಮಾ ಜಿಕ ತಾಣ ಮತ್ತು ಜೂಮ್ ಮೂಲಕ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು. ಸಂಶೋಧನಾ ನಿರ್ದೇ ಶಕ ಡಾ. ವೈ.ಜಿ. ಷಡಕ್ಷರಿ ಮತ್ತು ವಿಸ್ತರಣಾ ನಿರ್ದೇಶಕ ಡಾ. ಎನ್. ದೇವಕುಮಾರ್ ಉಪಸ್ಥಿತರಿದ್ದರು.
ಹೊಸ ತಳಿಗಳ ಪರಿಚಯ-
ವಿವಿಯು ಈ ಬಾರಿ ನೂತನವಾಗಿ ಹತ್ತು ಹೊಸ ತಳಿಗಳ ಬೆಳೆಗಳನ್ನು ಪರಿಚಯಿಸುತ್ತಿದೆ. ಜ್ಯೋತಿ ತಳಿಯನ್ನು ಹೋಲುವ ಕೆಎಂಪಿ-220 ತಳಿ ಭತ್ತ, ಎಂಎಸ್‌ಎನ್-99 ತಳಿ ಭತ್ತ, ಕೆಎಂಆರ್-316 ತಳಿ ರಾಗಿ, ಜಿಪಿಯುಪಿ-28 ತಳಿಯ ಬರಗು, ಜಿಪಿಯುಎಫ್-3 ತಳಿಯ ನವಣೆ, ಸಿಓವಿಸಿ-18061 ತಳಿಯ ಕಬ್ಬು, ಮೂರೂವರೆ ವರ್ಷಕ್ಕೆ ಫಸಲು ನೀಡುವ ಹಾಗೂ ವರ್ಷದಲ್ಲಿ ಎರಡು ಬಾರಿ ಫಲ ಬಿಡುವ ಬೈರಚಂದ್ರ ಹಲಸು, ಓಟ್ಸ್ ಹೋಲುವ ಮೇವಿನ ತೋಕೆ ಗೋಧಿ ಆರ್‌ಒ: 11-1 ತಳಿಗಳನ್ನು ಪರಿಚಯಿಸುತ್ತಿದೆ.
ಕೃಷಿ ಬೆಳೆ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ 5 ತಂತ್ರಜ್ಞಾನಗಳನ್ನು ಆವಿಷ್ಕರಿಸಿದೆ. ಅದೇ ರೀತಿ ಉತ್ಪಾದನೆಗೆ 8, ಬೆಳೆ ಸಂರಕ್ಷಣೆ ಕುರಿತ 10, ರೇಷ್ಮೆ ಕೃಷಿಗೆ ಸಂಬಂಧಿಸಿದ 3, ಜೇನು ಕೃಷಿ ಮತ್ತು ಕೃಷಿ ಎಂಜಿನಿಯರಿಂಗ್ ಕುರಿತ ತಲಾ ಒಂದು ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ.
ಮೇಳದ ಆಕರ್ಷಣೆಗಳು:
65 ಲಕ್ಷ ರೂ. ಮೌಲ್ಯದ ಎತ್ತುಗಳು ಮಂಡ್ಯ ಮಳ್ಳವಳ್ಳಿಯ ಹಳ್ಳಿಕಾರ್ ಎತ್ತುಗಳು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಎತ್ತುಗಳು ದಷ್ಟಪುಷ್ಟವಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿವೆ. ಅದೇ ರೀತಿ ರಾಮನಗರದ 50 ಲಕ್ಷ ರೂ. ಮೌಲ್ಯದ ಎತ್ತುಗಳನ್ನೂ ನೋಡಬಹುದು.
3 ಲಕ್ಷ ರೂ. ಗಳ ಓತ
ದೊಡ್ಡಬಳ್ಳಾಪುರದ ಜಮುನಾ ಪ್ಯಾರಿ ಹೆಸರಿನ ಓತವೂ ಮೇಳದ ಆಕರ್ಷಣೆಯಾಗಿದೆ. ಈ ತಳಿ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ.
ರೇಷ್ಮೆ ಗೂಡು ಬಿಡಿಸುವ ಯಂತ್ರ
ಇದೇ ಮೊದಲ ಬಾರಿಗೆ ವಿವಿ ವಿದ್ಯಾರ್ಥಿಗಳು ಸಂಶೋಧಿಸಿರುವ ರೇಷ್ಮೆ ಗೂಡು ಬಿಡಿಸುವ ಯಂತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ಯಂತ್ರವು ಚಂದ್ರಿಕೆಯಿಂದ ರೇಷ್ಮೆ ಗೂಡು ಬಿಡಿಸಲಿದೆ. ಸುಮಾರು 7ರಿಂದ 8 ಸಾವಿರ ರೂ. ವೆಚ್ಚ ತಗಲಬಹುದು. ವಿದ್ಯಾರ್ಥಿಗಳು ಮೇಳದಲ್ಲಿ ಪ್ರಾತ್ಯಕ್ಷಿಕೆ ಮಾಡಲಿದ್ದಾರೆ.