ಶಿಮ್ಲಾ : ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಎಲ್ಲ ನಾಲ್ವರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 37 ಅಭ್ಯರ್ಥಿಗಳು ಹಿಮಾಚಲ ಪ್ರದೇಶ ಲೋಕಸಭಾ ಚುನವಾಣೆಯಲ್ಲಿ ತಮ್ಮ ಭದ್ರತಾ ಠೇವಣಿಯನ್ನು ಕಳೆದುಕೊಂಡಿದ್ದಾರೆ ಎಂದು ರಾಜ್ಯದ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
25,000 ರೂ.ಗಳ ತಮ್ಮ ಭದ್ರತಾ ಠೇವಣಿಯನ್ನು ಉಳಿಸಿಕೊಳ್ಳಲು ಒಟ್ಟು ಪೋಲಾದ ಮತಗಳ ಶೇ. 16.67 ಅಥವಾ ಆರನೇ ಒಂದರಷ್ಟು ಮತಗಳನ್ನು ಪಡೆಯುವಲ್ಲಿ ರಾಜ್ಯದಲ್ಲಿನ ನಾಲ್ಕು ಲೋಕಸಭಾ ಕ್ಷೇತ್ರಗಳ ಒಟ್ಟು 45 ಅಭ್ಯಥಿಗಳ ಪೈಕಿ 37 ಮಂದಿಯಲ್ಲಿ ಯಾರೊಬ್ಬರು ಅಸಫಲರಾಗಿರುವುದು ಗಮನಾರ್ಹವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದಲೀಪ್ ಸಿಂಗ್ ಕೈತ್ (ಸಿಪಿಎಂ 14,838 ಮತಗಳು) ಮತ್ತು ಶೇಷ ರಾಮ (ಬಿಎಸ್‌ಪಿ 9,060 ಮತಗಳು) ಸೇರಿದಂತೆ ಒಟ್ಟು 15 ಮಂದಿ ಮಂಡಿ ಕ್ಷೇತ್ರದಲ್ಲಿ ಇಡುಗಂಟು ಕಳೆದುಕೊಂಡಿದ್ದಾರೆ. ಇದನ್ನು ಅನುಸರಿಸಿ ಹಮೀರ್‌ಪುರ ಮತ್ತು ಕಾಂಗ್ರಾ ಕ್ಷೇತ್ರಗಳ ಒಂಬತ್ತು ಮಂದಿ ಹಾಗೂ ಶಿಮ್ಲಾದ ನಾಲ್ಕು ಸಂಸದೀಯ ಕ್ಷೇತ್ರಗಳ ನಾಲ್ವರು ಇಡುಗಂಟು ಕಳೆದುಕೊಂಡಿದ್ದಾರೆ.
ವಿಶೇಷವೆಂದರೆ ಶಿಮ್ಲಾ, ಹಮೀರ್‌ಪುರ ಮತ್ತು ಕಾಂಗ್ರಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ ಅಭ್ಯರ್ಥಿಗಳು ನೋಟಾ ಓಟುಗಳಿಗಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ.
ಹಿಮಾಚಲ ಪ್ರದೇಶದ ಎಲ್ಲ ನಾಲ್ಕು ಸೀಟುಗಳನ್ನು ಬಿಜೆಪಿ ಗೆದ್ದು ಕ್ಲೀನ್ ಸ್ವೀಪ್ ಸಾಧಿಸಿದೆ.