Advertisement
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22ರಲ್ಲಿ 229 ಕಾಮಗಾರಿ ಕೈಗೊಂಡಿದ್ದು, ಈ ಪೈಕಿ 151 ಪೂರ್ಣವಾಗಿವೆ, 78 ಪ್ರಗತಿಯಲ್ಲಿವೆ. 2022-23ರಲ್ಲಿ 104 ರಸ್ತೆ ನಿರ್ಮಾಣ/ಅಭಿವೃದ್ಧಿ, 12 ಕಾಲುಸಂಕ/ಕಿರು ಸೇತುವೆ, 12 ಸಮುದಾಯ ಭವನ, 25 ಕಟ್ಟಡ ನಿರ್ಮಾಣ/ಅಭಿವೃದ್ಧಿ, 11 ಶಾಲಾ ಕಟ್ಟಡ ಅಭಿವೃದ್ಧಿ ಸಹಿತ 207 ಕಾಮಗಾರಿಯನ್ನು ಒಟ್ಟು 2,433.50 ಲಕ್ಷ ರೂ.ಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
Related Articles
Advertisement
ಪ್ರಾಧಿ ಕಾರದ ಕಾರ್ಯದರ್ಶಿ ಪ್ರದೀಪ್ ಡಿ’ಸೋಜಾ, ಸದಸ್ಯೆ ಕೇಸರಿ ಯುವರಾಜ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ವಿಶೇಷ ಕರ್ತವ್ಯಾಧಿಕಾರಿ ಪವನ್ ಶೆಟ್ಟಿ, ವಲಯಾಧಿಕಾರಿ ಹರಿಕಾಂತ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಸಸಿಹಿತ್ಲು ಮೀನುಗಾರಿಕೆ ಗ್ರಾಮಕ್ಕೆ ಸ್ಥಳದ ಸಮಸ್ಯೆಪ್ರಧಾನಮಂತ್ರಿಗಳ ಮತ್ಸ éಸಂಪದ ಯೋಜನೆಯಡಿ ಮಂಗಳೂರಿನ ಸಸಿಹಿತ್ಲು ಗ್ರಾಮದಲ್ಲಿ 7.50 ಕೋ.ರೂ ವೆಚ್ಚದಲ್ಲಿ ಮೀನುಗಾರಿಕೆ ಗ್ರಾಮವನ್ನು ನಿರ್ಮಿಸಲು ಅನುಮೋದನೆ ಪಡೆಯಲಾಗಿದೆ. ಇದರ ಡಿಪಿಆರ್‌ಗಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಅನುಷ್ಠಾನ ಸಂಸ್ಥೆಯಾಗಿ ನೇಮಿಸಲಾಗಿದೆ. ಆದರೆ ಅಲ್ಲಿ ಜಂಗಲ್ ಲಾಡ್ಜ್ನ ಸ್ಥಳದ ಸಮಸ್ಯೆ ಕಾರಣದಿಂದ ವರದಿ ತಯಾರಿಸಲು ವಿಳಂಬವಾಗಿದೆ. ಈ ವಿಚಾರ ಈಗಾಗಲೇ ಮಾತುಕತೆ ಹಂತದಲ್ಲಿದೆ. ಇದು ಇತ್ಯರ್ಥವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಇತ್ಯರ್ಥವಾಗದಿದ್ದರೆ ಪ್ರತ್ಯೇಕ ಸ್ಥಳ ಪರಿಶೀಲಿಸಲು ಸರಕಾರವನ್ನು ಕೋರಲಾಗುವುದು ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.