ಲಕ್ನೋ: ಈ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 403 ಕ್ಷೇತ್ರಗಳ ಪೈಕಿ ಒಟ್ಟು 34 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಈ ಸಂಖ್ಯೆ ಕಳೆದ ಚುನಾವಣೆಗಿಂತ 10 ಹೆಚ್ಚಾಗಿದೆ. ಗೆದ್ದಿರುವ ಮುಸ್ಲಿಂ ಅಭ್ಯರ್ಥಿಗಳಲ್ಲಿ ಬಹುಪಾಲು ಮಂದಿ ಸಮಾಜವಾದಿ ಪಕ್ಷದವರೇ ಆಗಿದ್ದಾರೆ.
ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದಿಂದಲೂ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರಾದರೂ ಅವರು ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ:ಗೋವಾ: ಸೋಮವಾರ ಸದನವನ್ನು ವಿಸರ್ಜಿಸಲು ನಿರ್ಧರಿಸಿದ ಸಾವಂತ್
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಅಪ್ನಾ ದಳವು ರಾಂಪುರದಲ್ಲಿ ಹೈದರ್ ಅಲಿ ಖಾನ್‌ರನ್ನು ಸ್ಪರ್ಧೆಗಿಳಿಸಿತ್ತಾದರೂ ಅವರು ಎಸ್‌ಪಿಯ ಅಬ್ದುಲ್ ಅಜಾಮ್ ಎದುರು ಸೋಲುಂಡಿದ್ದಾರೆ.