Advertisement

300 ಹಲ್ಲುಗಳ ಮೀನು!

06:05 AM Nov 14, 2017 | Harsha Rao |

ಅಲ್ಗರ್ವ್‌: ತಿಮಿಂಗಿಲಕ್ಕೆ ಹೋಲುವ ಭಾರಿ ಗಾತ್ರದ ಮೀನೊಂದು ಇತ್ತೀಚೆಗೆ ಪೊರ್ಚುಗಲ್‌ ಕರಾವಳಿಯಲ್ಲಿ ಕಾಣಿಸಿಕೊಂಡಿದೆ. ಅಚ್ಚರಿಯ ಸಂಗತಿ ಏನೆಂದರೆ ಈ ತಿಮಿಂಗಿಲ ಗಾತ್ರದ ಮೀನಿನ ತಲೆ ಭಾಗ ಮಾತ್ರ ಹೆಚ್ಚಾಕಡಿಮೆ ಡೈನೋಸಾರ್‌ಗೆ ಹೋಲುವಂತಿದೆ!

Advertisement

ಅಚ್ಚರಿಯಾದರೂ ಇದು ಸತ್ಯ. ಪೊರ್ಚುಗೀಸ್‌ ಸಮುದ್ರ ಹಾಗೂ ವಾತಾವರಣ ಅಧ್ಯಯನ ಸಂಸ್ಥೆ ಇಂಥದ್ದೊಂದು ಜೀವಿ ಇನ್ನೂ ಸಮುದ್ರದಲ್ಲಿ ಬದುಕುಳಿದಿರುವುದಾಗಿ ಹೇಳಿದೆ. ಟೈರನೋಸಾರಸ್‌ ರೆಕ್ಸ್‌ ಗಣಕ್ಕೆ ಸೇರಿದ ದೈತ್ಯಾಕಾರದ ಮೀನು ಇದಾಗಿದೆ ಎಂದಿದೆ. ವಿಜ್ಞಾನಿಗಳ ಪ್ರಕಾರ ಈ ಜೀವಿ ಹೆಚ್ಚಾಕಡಿಮೆ 80 ಮಿಲಿಯನ್‌ ವರ್ಷಗಳಷ್ಟು ಹಳೆಯದಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ವಿರಳ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಿಮಿಂಗಿಲದ  ಸಾಮ್ಯತೆ ಹೊಂದಿರುವ ಈ ಸಮುದ್ರ ಜೀವಿ 300ಕ್ಕೂ ಹೆಚ್ಚು ದವಡೆ ಹಲ್ಲುಗಳನ್ನು ಹೊಂದಿದೆ. ಅದರ ದೇಹ ಹಾವಿಗೆ ಹೋಲುವಂತಿದೆ. ಪೊರ್ಚುಗಲ್‌ನ ಕರಾವಳಿ ಪ್ರದೇಶ ಅಲ್ಗರ್ವ್‌ ಎಂಬಲ್ಲಿ ಯುರೋಪಿಯನ್‌ ಯೂನಿಯನ್‌ ವಿಜ್ಞಾನಿಗಳು ಈ ಜೀವಿಯನ್ನು ಪತ್ತೆ ಮಾಡಿದ್ದಾರೆ. 701 ಮೀಟರ್‌ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಶಾರ್ಕ್‌ ಜಾತಿಯ ಇದು ಚಾಲಮಿಡಾಸ್‌ಲಾಚಸ್‌ ಆ್ಯಂಗ್ಯುನಿಯಸ್‌ (Chlamydoselachus anguineus) ಪ್ರಭೇದಕ್ಕೆ ಸೇರಿದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next