ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಈ ವೀಕೆಂಡ್‌ನಲ್ಲಿ ನೀವು ಲಾಲ್‌ಬಾಗ್‌ನಿಂದ ಯಾವುದೇ ಮೂಲೆಗೆ ಸಂಚರಿಸಿದರೂ ಪ್ರಯಾಣ ದರ ಕೇವಲ 30 ರೂ.
ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಅಲ್ಲಿಗೆ ಭೇಟಿ ನೀಡುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ಆ.13ರಿಂದ 15ರವರೆಗೆ ಈ ರಿಯಾಯ್ತಿ ಪ್ರಯಾಣ ವ್ಯವಸ್ಥೆ ಯನ್ನು ಕಲ್ಪಿಸಿದ್ದು, ಲಾಲ್‌ಬಾಗ್ ನಿಂದ ಹಿಂತಿರುವ ಪ್ರಯಾಣಿಕರಿಗೆ ಇದು ಅನ್ವಯ ಆಗಲಿದೆ.
ಇದನ್ನೂ ಓದಿ:ಶಿಕ್ಷಕರ ನೇಮಕ ಕಾಯಿದೆ ತಿದ್ದುಪಡಿಗೆ ಅಸ್ತು: ವಯೋಮಿತಿ ಹೆಚ್ಚಳಕ್ಕೆ ಸಂಪುಟ ನಿರ್ಧಾರ
ನಿಗದಿತ 3 ದಿನಗಳಂದು ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರ 30 ರೂ. ಇರುತ್ತದೆ. ಇದಕ್ಕಾಗಿ ಪೇಪರ್ ಟಿಕೆಟ್ ಪರಿಚಯಿಸಿದ್ದು, ಆ ದಿನದ ಒಂದು ಬಾರಿಯ ಪ್ರಯಾಣಕ್ಕೆ ಲಾಲ್ ಬಾಗ್‌ನಿಂದ ಯಾವುದೇ ನಿಲ್ದಾ ಣಕ್ಕೆ ಪ್ರಯಾಣಿಸಬಹುದು.
ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಎಲ್ಲ ಮೆಟ್ರೋ ನಿಲ್ದಾಣಗಳಲ್ಲೂ ಪೇಪರ್ ಟಿಕೆಟ್‌ಗಳನ್ನು ಪ್ರಯಾಣಿಕರು ಖರೀದಿಸಬಹುದು. ಲಾಲ್ ಬಾಗ್ ನಿಲ್ದಾಣದಲ್ಲಿ ಈ ಪೇಪರ್ ಟಿಕೆಟ್ ರಾತ್ರಿ 8ರವರೆಗೆ ಲಭ್ಯ ಇರಲಿದೆ. ಇನ್ನು ಯಾವುದೇ ನಿಲ್ದಾಣದಿಂದ ಲಾಲ್‌ಬಾಗ್ ನಿಲ್ದಾಣಕ್ಕೆ ಪ್ರಯಾಣಿಸಲು ಚಾಲ್ತಿಯಲ್ಲಿ ರುವ ದರದಲ್ಲಿ ಟೋಕನ್, ಸ್ಮಾರ್ಟ್ ಕಾರ್ಡ್ ಬಳಸಬಹುದು. ಸ್ಮಾರ್ಟ್‌ಕಾರ್ಡ್ ಪ್ರಯಾಣಕ್ಕೆ ಚಾಲ್ತಿಯಲ್ಲಿರುವ ರಿಯಾಯ್ತಿ ದರ ಅನ್ವಯ ಆಗಲಿದೆ ಎಂದೂ ನಿಗಮ ಸ್ಪಷ್ಟಪಡಿಸಿದೆ.