Advertisement

ರ‍್ಯಾಂಡಮ್ ಟೆಸ್ಟ್: ಪರಪ್ಪನ ಅಗ್ರಹಾರದ 30 ಕೈದಿಗಳಿಗೆ ಕೋವಿಡ್ ಸೋಂಕು ದೃಢ

05:33 PM Jul 12, 2020 | keerthan |

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಲ್ಲಿರುವ ವಿಚಾರಣಾಧಿನ ಕೈದಿಗಳಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇಲ್ಲಿನ ವಿಶೇಷ ಸೆಲ್ ನಲ್ಲಿರುವ 30 ಜನ ಕೈದಿಗಳಿಗೆ ಕೋವಿಡ್-19 ಸೋಂಕು ದೃಢವಾಗಿದೆ ಎನ್ನಲಾಗಿದೆ.

Advertisement

ಇತ್ತೀಚೆಗೆ ಪರಪ್ಪನ ಅಗ್ರಹಾರ ಸೇರಿದ್ದ ಸುಮಾರು 400 ಮಂದಿ ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕ ಸೆಲ್ ನಲ್ಲಿ ಇಡಲಾಗಿತ್ತು. ಅವರಲ್ಲಿ ಸುಮಾರು 150 ಆರೋಪಿಗಳಿಗೆ ರ‍್ಯಾಂಡಮ್ ಟೆಸ್ಟ್ ಮಾಡಿಸಿದ ಸಂದರ್ಭ 30 ಜನರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ ಎಂದು ವರದಿಯಾಗಿದೆ.

ಆರೋಪಿಗಳಿಗೆ ಕೋವಿಡ್ ಸೋಂಕು ತಾಗಿರುವ ಹಿನ್ನಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಜೈಲು ಸಿಬ್ಬಂದಿಗೂ ಕೋವಿಡ್ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ.

ಕಳೆದ ವಾರವೂ ಕೈದಿಗಳಿಗೆ ಕೋವಿಡ್ 19 ಸೋಂಕು ಕಂಡುಬಂದಿತ್ತು. ಈಗ ಮತ್ತೆ 30 ಜನರಿಗೆ ಸೋಂಕು ದೃಢಪಟ್ಟಿರುವುದು ಜೈಲು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next