Advertisement
ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ, ಭಾರತೀಯ ಕೈಗಾರಿಕೆಗಳ ಒಕ್ಕೂಟ, ಸರ್ವಿಸ್ ಎಕ್ಸ್ ಪೋರ್ಟ್ ಪ್ರಮೋಷನಲ್ ಕೌನ್ಸಿಲ್ ಸಹಯೋಗದಲ್ಲಿ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 3 ದಿನಗಳ “ಗ್ಲೋಬಲ್ ಎಕ್ಸಿಬಿಷನ್ ಆನ್ ಸರ್ವೀಸಸ್’ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
Related Articles
Advertisement
2 ಕೋಟಿ ಯುವಕರಿಗೆ ಕೌಶಲ್ಯ ತರಬೇತಿಬೆಂಗಳೂರು: ರಾಜ್ಯದಲ್ಲಿ 2017 ರಿಂದ 2030ರ ಅವಧಿಯಲ್ಲಿ 2 ಕೋಟಿಗೂ ಅಧಿಕ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಗುರಿಯನ್ನು ರಾಜ್ಯ-ಕೇಂದ್ರ ಸರ್ಕಾರ ಹೊಂದಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ 3 ದಿನಗಳ “ಗ್ಲೋಬಲ್ ಎಕ್ಸಿಬಿಷನ್ ಆನ್ ಸರ್ವೀಸಸ್(ಜಿಐಎಸ್)’ಸಮಾವೇಶದಲ್ಲಿ ಮಾತನಾಡಿದರು. ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು), ಐಐಎಸ್‌ಸಿ, ಐಐಎಂ ಮತ್ತು ಐಐಟಿಯಂತಹ ಖ್ಯಾತನಾಮ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕರ್ನಾಟಕ, ಪ್ರತಿಭಾನ್ವಿತ ಮಾನವ ಶಕ್ತಿಯನ್ನು ಸೃಷ್ಟಿ ಮಾಡುತ್ತಿದೆ. 2017-2030 ರ ಅವಧಿಯಲ್ಲಿ ಕರ್ನಾಟಕ 2 ಕೋಟಿಗೂ ಅಧಿಕ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಿದ್ದು, ಇದಕ್ಕೆ ಪೂರಕ ಮೂಲಸೌಕರ್ಯ ಗಳನ್ನು ಸರ್ಕಾರ ಒದಗಿಸುತ್ತಿದೆ ಎಂದರು. ಈಗಾಗಲೇ ರಾಜ್ಯದ 1,700 ಕ್ಕೂ ಅಧಿಕ ಐಟಿಐ ಮತ್ತು 290 ಪಾಲಿಟೆಕ್ನಿಕ್‌ಗಳು ಯುವಕರಿಗೆ ಕೌಶಲ್ಯ ತರಬೇತಿ ನೀಡುತ್ತಿವೆ. ಬಾಹ್ಯಾಕಾಶ, ಕೃಷಿ ವ್ಯಾಪಾರ, ಬಯೋಟೆಕ್, ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ಕಂಪನಿಗಳ ಉನ್ನತಿಗೆ ಪೂರಕ ನೀತಿಗಳಿಂದ ರಾಜ್ಯ ಸೇವಾ ವಲಯ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು. ಹಲವಾರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಕರ್ನಾಟಕ ಹೊಂದಿದೆ. ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಯಶಸ್ವಿಯಾಗಿದ್ದು ಅಸಂಖ್ಯಾತ ಜನರಿಗೆ ಪ್ರಯೋಜನವಾಗುತ್ತದೆಂದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕರ್ನಾಟಕದಲ್ಲಿನ ಸೇವಾ ಕ್ಷೇತ್ರ ರಾಜ್ಯದ ಜಿಎಸ್‌ಡಿಪಿಗೆ ಶೇ.68 ಕ್ಕಿಂತಲೂ ಅಧಿಕ ಕೊಡುಗೆ ನೀಡುತ್ತಿದೆ. ಕರ್ನಾಟಕದ ಆರ್ಥಿಕ ಸಮೀಕ್ಷೆ ಪ್ರಕಾರ 2018-19 ನೇ ಹಣಕಾಸು ಸಾಲಿನಲ್ಲಿ ಸೇವಾ ಕ್ಷೇತ್ರ ಶೇ.12.3 ಪ್ರಗತಿ ಕಾಣಲಿದೆ ಎಂದರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ರಾಜ್ಯದ ಒಟ್ಟು ದೇಸೀಯ ಉತ್ಪನ್ನಕ್ಕೆ ಶೇ.68 ಕೊಡುಗೆಯನ್ನು ಸೇವಾ ವಲಯ ನೀಡುತ್ತಿದೆ ಎಂದು ತಿಳಿಸಿದರು. 55 ದೇಶದ ಪ್ರತಿನಿಧಿಗಳು ಭಾಗಿ: ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಪ್ರದರ್ಷನ ಇದಾಗಿದ್ದು, ಆಯುಷ್ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ವಸತಿ ಮತ್ತು ನಗರ ವ್ಯವಹಾರಗಳು, ದೂರಸಂಪರ್ಕ ಇಲಾಖೆಗಳು, ಎಲೆಕ್ಟ್ರಾನಿಕ್ಸ್, ಐಟಿ, ರೈಲ್ವೇಸ್, ಎಂಎಸ್‌ಎಂಇ, ಲಾಜಿಸ್ಟಿಕ್, ಅಂಚೆ ಸೇರಿದಂತೆ 211 ಪ್ರದರ್ಶಕರು ಭಾಗವಹಿಸಿದ್ದಾರೆ. ಪ್ರಮುಖವಾಗಿ ಕರ್ನಾಟಕ, ಉತ್ತರಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ, ತೆಲಂಗಾಣ, ಗುಜರಾತ್ ಸೇರಿದಂತೆ ಮತ್ತಿತರೆ ರಾಜ್ಯಗಳು ತಮ್ಮ ಸೇವಾ ವಲಯಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳನ್ನು ಇಲ್ಲಿ ನೀಡುತ್ತಿವೆ. ವಿದೇಶದ 300 ಕ್ಕೂ ಹೆಚ್ಚು ಖರೀದಿದಾರರು, 55 ದೇಶಗಳ ಪ್ರತಿನಿಧಿಗಳು, 80 ಉಪನ್ಯಾಸಕರು ಪಾಲ್ಗೊಂಡಿದ್ದಾರೆ.