Advertisement
ನಗರದ ಕೇಂದ್ರ ಭಾಗವಾದ ಚಾಲುಕ್ಯ ವೃತ್ತ ಮಾರ್ಗವಾಗಿ ಪ್ರತಿದಿನ ಲಕ್ಷಾಂತರ ವಾಹನಗಳು ವಿಮಾನನಿಲ್ದಾಣಕ್ಕೆ ತೆರಳುತ್ತವೆ. ಹೀಗೆ ತೆರಳುವ ವಾಹನಗಳು ಚಾಲುಕ್ಯ ವೃತ್ತ, ಮಹಾಲಕ್ಷ್ಮೀ ಜಂಕ್ಷನ್ (ಕಾವೇರಿ ಜಂಕ್ಷನ್), ಮೇಖ್ರಿ ವೃತ್ತ, ಹೆಬ್ಬಾಳ ಮೇಲ್ಸೇತುವೆ ಬಳಿಯಲ್ಲಿ ಸಂಚಾರ ದಟ್ಟಣೆಗೆ ಸಿಲುಕುತ್ತಿವೆ.
Related Articles
Advertisement
ಮಹಾಲಕ್ಷ್ಮೀ ಜಂಕ್ಷನ್ ಬಳಿ ಮೇಲ್ಸೇತುವೆ: ಸುಗಮ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸಲು ಸಂಚಾರ ದಟ್ಟಣೆ ಹೆಚ್ಚಾಗಿ ಉಂಟಾಗುವ ಸದಾಶಿವನಗರ ಕಡೆ ತೆರಳುವ ಮಹಾಲಕ್ಷ್ಮೀ ಜಂಕ್ಷನ್ ಬಳಿ ಗ್ರೇಡ್ ಸಪರೇಟರ್ (ಮೇಲ್ಸೇ ತುವೆ) ನಿರ್ಮಿಸಲಾಗುತ್ತದೆ. ಸದ್ಯ ಮಹಾಲಕ್ಷ್ಮೀ ಜಂಕ್ಷನ್ ಬಳಿ ವಾಹನಗಳು ಮ್ಯಾಜಿಕ ಬಾಕ್ಸ್ ಕೆಳಸೇತುವೆಯ ಮೇಲ್ಭಾಗದ ಸಣ್ಣ ಮೇಲ್ಸೇತುವೆ ಸುತ್ತುವರಿದು ಸಂಚರಿಸಬೇಕು. ಇದರಿಂದಾಗಿ ಬಿಡಿಎ ಕಚೇರಿಯಿಂದ ಮಹಾಲಕ್ಷ್ಮೀ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಮೇಲ್ಸೇತುವೆ ನಿರ್ಮಾಣದಿಂದಾಗಿ ವಾಹನ ಸರಾಗವಾಗಿ ಸಾಗಲಿದೆ.
ಬಿಡಿಎ ಮೇಲ್ಸೇತುವೆ ಅಗಲೀಕರಣ: ಬಿಡಿಎ ಕಚೇರಿ ಎದುರು ನಿರ್ಮಿಸಿರುವ ಗ್ರೇಡ್ ಸಪರೇಟರ್ ಮೇಲ್ಸೇತುವೆಯು ಕಿರಿದಾಗಿದೆ. ಚಾಲುಕ್ಯ ವೃತ್ತದಿಂದ ಸರಾಗವಾಗಿ ಸಾಗಿ ಬರುವ ವಾಹನಗಳು ಬಿಡಿಎ ಕಚೇರಿ ಎದುರಿನ ಮೇಲ್ಸೇತುವೆ ಬಳಿ ನಿಧಾನವಾಗಿ ಸಾಗುವಂತಾಗುತ್ತಿದೆ. ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಅದನ್ನು ನಿವಾರಿಸಲು ಈಗಿರುವ ಎರಡೂ ಬದಿಯಲ್ಲಿನ ಎರಡು ಪಥದ ಮೇಲ್ಸೇತುವೆಯನ್ನು ಅಗಲೀಕರಿಸಿ ತಲಾ 3 ಪಥದ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಅದರ ಜತೆಗೆ ವಿಂಡ್ಸರ್ ಮ್ಯಾನರ್ ಬಳಿಯ ರೈಲ್ವೆ ಕೆಳಸೇತುವೆಗೆ ಹೊಸದಾಗಿ ಒಂದು ವೆಂಟ್ ಅಳವಡಿಸಿ ಅಲ್ಲಿ ರಸ್ತೆ ನಿರ್ಮಿಸಲೂ ಬಿಬಿಎಂಪಿ ಯೋಜಿಸಿದೆ.
15 ದಿನಗಳಲ್ಲಿ ಸಮಗ್ರ ಯೋಜನಾ ವರದಿಈ ಯೋಜನೆಗಳ ಕುರಿತಂತೆ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕುರಿತಂತೆ ಬಿಬಿಎಂಪಿ ಖಾಸಗಿ ಸಂಸ್ಥೆ ಮೂಲಕ ಸಮ ಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುತ್ತಿದೆ. ಇನ್ನೊಂದು 15 ದಿನಗಳಲ್ಲಿ ಡಿಪಿಆರ್ ಸಿದ್ಧವಾಗಲಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಜತೆಗೆ ಚಾಲುಕ್ಯ ವೃತ್ತದಿಂದ ಹೆಬ್ಟಾಳವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ತಗಲುವ ವೆಚ್ಚ ಮತ್ತು ಯೋಜನೆ ಅನುಷ್ಠಾನಕ್ಕೆ ಎದುರಾಗುವ ಸಮಸ್ಯೆ ಹಾಗೂ 3 ಹಂತದ ಯೋಜನೆಯ ವೆಚ್ಚ ಮತ್ತು ಸಮಸ್ಯೆಯನ್ನು ತುಲನೆ ಮಾಡಿ ನಂತರ ಯಾವ ಯೋಜನೆ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಸರ್ಕಾರ ನಿರ್ಧರಿಸಿ ಬಿಬಿಎಂಪಿಗೆ ಸೂಚಿಸಲಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಎದುರಾಗುವ ಸಂಚಾರ ದಟ್ಟಣೆ ನಿವಾರಣೆಗೆ 3 ಹಂತದ ಯೋಜನೆ ರೂಪಿಸಲಾಗುತ್ತಿದೆ. ಚಾಲುಕ್ಯ ವೃತ್ತದಿಂದ ಎಸ್ಟಿಂ ಮಾಲ್ ವರೆಗೆ ಯೂನಿಫಾರ್ಮ್ ಕ್ಯಾರೇಜ್ ವಿಡ್ತ್ ರಸ್ತೆ ನಿರ್ಮಾಣ, ಮಹಾಲಕ್ಷ್ಮೀ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಹಾಗೂ ಬಿಡಿಎ ಕಚೇರಿ ಎದುರಿನ ಮೇಲ್ಸೇತುವೆ ಅಗಲೀಕರಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ.
●ಪ್ರಹ್ಲಾದ್, ಬಿಬಿಎಂಪಿ ಪ್ರಧಾನ
ಎಂಜಿನಿಯರ್ ಗಿರೀಶ್ ಗರಗ