ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಕೆಲವೊಮ್ಮೆ ತಿಂಗಳುಗಟ್ಟಲೆ ನಡೆದಿದ್ದೂ ಇದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ರಾಜರಾಜೇಶ್ವರಿ ನಗರದಲ್ಲಿ 105 ದಿನಗಳಲ್ಲಿ ಮೂರು ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ.
ಮೈಸೂರು ರಸ್ತೆಯಿಂದ ಉತ್ತರಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕೆಂಚೇನಹಳ್ಳಿ ಮುಖ್ಯರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ತಿಂಗಳಿಗೆ ಒಂದು ಕಿ.ಮೀ.ನಂತೆ 105 ದಿನಗಳಲ್ಲಿ ಮೂರು ಕಿ.ಮೀ. ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಜಲಾವೃತಗೊಳ್ಳುವುದು, ಗುಂಡಿ ಬೀಳುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿತ್ತು. ರಸ್ತೆ, ಕಿರಿದಾಗಿದ್ದರಿಂದ ವಾಹನ ಸವಾರರು ಸಂಕಷ್ಟಕ್ಕೆ ಈಡಾಗಿದ್ದರು. ಆದರೆ, ಬಿಬಿಎಂಪಿ ವೈಟ್‌ಟಾಪಿಂಗ್ ಯೋಜನೆಯಡಿ ಈ ರಸ್ತೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದೆ.
ಈ ಹಿಂದೆ ಒಂದು ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆಯನ್ನು ಪೂರ್ಣಗೊಳಿಸಲು ಮೊದಲು ಒಂಭತ್ತು ತಿಂಗಳಿಂದ ಒಂದು ವರ್ಷ ಕಾಲಾವಧಿಯನ್ನು ತೆಗೆದುಕೊಳ್ಳಲಾಗುತ್ತಿತ್ತು. ವಾಹನ ದಟ್ಟಣೆ, ಪರ್ಯಾಯ ರಸ್ತೆಗಳಿಲ್ಲದ ಕಾರಣ ಹಾಗೂ ಇತರೆ ಇಲಾಖೆಗಳ ಕಾಮಗಾರಿಗಳಿಂದ ವೈಟ್ ಟಾಪಿಂಗ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಆದರೆ, ಈ ರಸ್ತೆಯ ಕಾಮಗಾರಿಯನ್ನು ಇತರೆ ಇಲಾಖೆಗಳ ಸಹಕಾರದಿಂದ ಹಾಗೂ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸುವ ಮೂಲಕ ಕೇವಲ ಒಂದು ತಿಂಗಳಲ್ಲಿ ಒಂದು ಕಿ.ಮೀ.ನಂತೆ ಕಾಮಗಾರಿ ಸಂಪೂರ್ಣಗೊಳಿಸಲಾಗಿದೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ರಸ್ತೆಯಿಂದ ಉತ್ತರಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕೆಂಚೇನಹಳ್ಳಿ ಮುಖ್ಯರಸ್ತೆಯಲ್ಲಿ ಒಟ್ಟು 25.70 ಕೋಟಿ ರೂ. ವೆಚ್ಚದ 3.40 ಕಿ.ಮೀ. ಉದ್ದದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯನ್ನು 2021ರ ಆಗಸ್ಟ್ 8ರಂದು ಆರಂಭಿಸಲಾಗಿದ್ದು, ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮಳೆಯಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ತದನಂತರ ಆರಂಭಿಸಿದ ಕಾಮಗಾರಿಯೂ 2021ರ ಡಿಸೆಂಬರ್ 31ಕ್ಕೆ ಮೂರು ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆ ವ್ಯವಸ್ಥಿತವಾಗಿ ನಿರ್ಮಾಣ
ಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ ಭಾರತಿ ಸಜ್ಜನ್.