Advertisement

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

08:05 PM Nov 29, 2024 | Team Udayavani |

ಕೊಲ್ಲೂರು: ಕೊಲ್ಲೂರು- ಬೆ„ಂದೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣದ ಪೂರ್ವಭಾವಿಯಾಗಿ ಕೊಲ್ಲೂರಿನಲ್ಲಿ ರಸ್ತೆಯನ್ನು ಅತಿಕ್ರಮಿಸಿರುವ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯ ಆರಂಭಗೊಂಡಿದೆ.

Advertisement

ಕೊಲ್ಲೂರು ಸ್ವಾಗತ ಗೋಪುರದಿಂದ ದಳಿವರೆಗಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮುಂಗಟ್ಟು ಸಹಿತ ವಿವಿಧ ಕಟ್ಟಡಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಂಡಿದ್ದು, ಭೂಸ್ವಾಧೀನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಕೊಲ್ಲೂರಿನ ಮುಖ್ಯ ರಸ್ತೆ ಈಗ ತುಂಬ ಕಿರಿದಾಗಿದ್ದು, ವಿಶೇಷ ಉತ್ಸವದ ಸಂದರ್ಭದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

ಬೈಂದೂರಿನಿಂದ ಕೊಲ್ಲೂರು ಸಹಿತ ರಾಣೆ ಬೆನ್ನೂರು ಮುಖ್ಯ ರಸ್ತೆಯ ವಿಸ್ತರಣೆ ಕಾಮಗಾರಿಗಾಗಿ ಕೇಂದ್ರ ಸರಕಾರ 400 ಕೋಟಿ ರೂ. ಅನುದಾನ ಒದಗಿಸಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ವಿವಿದೆಢೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಅನೇಕ ಕಡೆ ಅರಣ್ಯ ಇಲಾಖೆಯ ಪ್ರದೇಶವಿರುವುದರಿಂದ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಂದ ಭೂಸ್ವಾ ಧೀನಕ್ಕೆ ಗ್ರೀನ್‌ ಸಿಗ್ನಲ್‌ ದೊರೆತ ಬಳಿಕ ಕಾಮಗಾರಿ ವೇಗ ಪಡೆಯಲು ಸಾಧ್ಯ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದ ಅಧಿ ಕಾರಿಗಳು ತಿಳಿಸಿದ್ದಾರೆ.

ಕೊಲ್ಲೂರು- ನಾಗೋಡಿ-ಬೈಂದೂರು ತನಕ ಸುಮಾರು 32 ಕಿ.ಮೀ. ಉದ್ದದ ಹೆದ್ದಾರಿ ಸನಿಹದಲ್ಲಿ 11 ಕಿ.ಮೀ. ಅಭಯಾರಣ್ಯ ವ್ಯಾಪ್ತಿಗೆ ಒಳಪಡುತ್ತದೆ. ಹಾಗಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಇಲಾಖೆ ಒಪ್ಪಿಗೆ ಪಡೆಯುವುದು ಅನಿವಾರ್ಯ.

ಕಿರುಸೇತುವೆ ಅಭಿವೃದ್ಧಿ ಅಗತ್ಯ
ಕೊಲ್ಲೂರಿನಿಂದ ದಳಿಗೆ ಸಾಗುವ ಹೆದ್ದಾರಿ ಮಾರ್ಗದಲ್ಲಿ ರಸ್ತೆಯನ್ನು ಅಗಲಗೊಳಿಸಲಾಗಿದ್ದರೂ ಕಿರುಸೇತುವೆಯ ಇಕ್ಕೆಲ ಅಗಲ ಕಿರಿದಾಗಿರುವುದರಿಂದ ಸಮಸ್ಯೆಯಾಗಿದೆ. ಕಿರುಸೇತುವೆಯ ನಡುವಿನ ಅಂತರವನ್ನು ಹೆಚ್ಚಿಸದಿದ್ದಲ್ಲಿ ರಸ್ತೆ ಅಗಲೀಕರಣದ ಲಾಭ ಸಿಗುವುದಿಲ್ಲ ಎನ್ನುವುದು ಜನರ ಅಭಿಪ್ರಾಯ.

Advertisement

15 ಕಿ.ಮೀ ಅಗಲಕ್ಕೆ ಭೂಸ್ವಾಧೀನ
ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮಧ್ಯ ಬಿಂದುವಿನಿಂದ 15 ಮೀ.ನಷ್ಟು ಅಗಲದವರೆಗೆ ಭೂಸ್ವಾಧೀನ ಮಾಡಲಾಗುತ್ತದೆ. ಈ ವ್ಯಾಪ್ತಿಯಲ್ಲಿರುವ ಕಟ್ಟಡಗಳು, ಮುಂಗಟ್ಟುಗಳನ್ನು ತೆರವು ಮಾಡಲಾಗುತ್ತದೆ. 10 ಮೀ. ಅಗಲವನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸಿ 2 ಮೀ. ವ್ಯಾಪ್ತಿಯಲ್ಲಿ ಪಾದಚಾರಿ ರಸ್ತೆ, 1 ಮೀ. ಪ್ರದೇಶದಲ್ಲಿ ಚರಂಡಿ ಹಾಗೂ ವಿದ್ಯುತ್‌ ಕಂಬ ಅಳವಡಿಸಲಾಗುತ್ತದೆ.

ಸಂತ್ರಸ್ತರಿಗೆ ಪರಿಹಾರ: ರಾಷ್ಟ್ರೀಯ ಹೆದ್ದಾರಿಯ ಸನಿಹದ ಕಟ್ಟಡ, ಭೂಮಿ, ತೋಟ,ಹಾಗೂ ಮನೆಗಳನ್ನು ಕಳೆದುಕೊಳ್ಳುವ ಸಂತ್ರಸ್ತರಿಗೆ ಸರಕಾರದ ನಿಯಮದಂತೆ ಪರಿಹಾರ ಒದಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೊಡಕು ಪರಿಹಾರ
ಕೊಲ್ಲೂರು-ಬೈಂದೂರು ರಾ.ಹೆದ್ದಾರಿ ದ್ವಿಪಥ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಅನುದಾನ ಒದಗಿಸಿದೆ. ನಿರ್ಮಾಣದ ವೇಳೆ ಎದುರಾಗುವ ತೊಡಕುಗಳನ್ನು ಪರಿಹರಿಸಲಾಗುವುದು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
-ಬಿ.ವೈ. ರಾಘವೇಂದ್ರ, ಸಂಸದ.

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next