Advertisement

ಆಧಾರ್‌ ಇದ್ದ ಬಾಂಗ್ಲಾ ಉಗ್ರರ ವಿರುದ್ಧ ಕೇಸು

07:30 AM Mar 02, 2018 | Team Udayavani |

ನವದೆಹಲಿ: ಭಾರತದ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಹೊಂದಿದ್ದ ಬಾಂಗ್ಲಾ ದೇಶದ ಮೂವರು ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗುರುವಾರ ಪ್ರಕರಣ ದಾಖಲಿಸಿಕೊಂಡಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅನ್ವಯ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ.

Advertisement

ಅನ್ಸಾರುಲ್ಲಾ ಬಾಂಗ್ಲಾ ಟೀಮ್‌ ಎಂಬ ಉಗ್ರ ಸಂಘಟನೆಯ  ಸಮ್ಸಾದ್‌ ಮಿಯಾ ಅಲಿಯಾಸ್‌ ತನ್ವೀರ್‌, ರಿಜಾವುಲ್‌ ಇಸ್ಲಾಂ ಹಾಗೂ ಪಶ್ಚಿಮ ಬಂಗಾಳದ ಮೊನೊತೇಷ್‌ ದೇ ಅಲಿಯಾಸ್‌ ಮೋನಾ ಡೇಯನ್ನು ಕಳೆದ ನ.21ಪಂದು ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯ ಪಡೆ ಬಂಧಿಸಿತ್ತು. ಆರೋಪಿಗಳು ಭಾರತಕ್ಕೆ ಅಕ್ರಮವಾಗಿ ನುಸುಳಿದ್ದಲ್ಲದೆ, ನಕಲಿ ದಾಖಲೆಗಳನ್ನು ನೀಡಿ ಆಧಾರ್‌, ಪ್ಯಾನ್‌ ಹಾಗೂ ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next