Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮತೀನ್ ಸಾಯಿ -ಪಿಎ’ ಎಂಬ ಅಕೌಂಟ್‌ನಿಂದ ಮತೀನ್ ತಾಹಾ ಕ್ರಿಪ್ಟೋ ವಹಿವಾಟು ಮಾಡಿದ್ದ. ಇದರಿಂದ ಸಂಶಯಗೊಂಡು ನಮ್ಮಿಬ್ಬರ ವಿಚಾರಣೆ ಮಾಡಿದ್ದಾರೆ. ನಾನು 2021ರಲ್ಲಿ ಎರಡು ಕ್ರಿಪ್ಟೋ ಆ್ಯಪ್‌ಗಳಲ್ಲಿ ಹೂಡಿಕೆ ಮಾಡಿದ್ದೆ. ಇವೆರಡೂ ಭಾರತದವು. ಎರಡಕ್ಕೂ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಕೆವೈಸಿ ಮಾಡಿಯೇ ಬಳಸಬೇಕು. ಕ್ರಿಪ್ಟೋ ಬೂಮ್ ಇದ್ದುದರಿಂದ ಎರಡರಲ್ಲೂ ಸ್ವಲ್ಪ ಪ್ರಮಾಣದ ಹಣ ಹೂಡಿಕೆ ಮಾಡಿದ್ದೆ. ಅದು ಬಿಟ್ಟು ಬೇರೆ ಯಾವುದೇ ವಹಿವಾಟು ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇನೆ. ಅವರು ಅದನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯ ಸಣ್ಣ ಕಾರ್ಯಕರ್ತ ನಾನು. ಪೈಂಟಿಂಗ್ ಕೆಲಸ ಮಾಡಿಕೊಂಡು ಬದುಕುತ್ತಿದ್ದೇನೆ. ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ. ಈ ಸಮಯದಲ್ಲಿ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಬೇಡಿ. ತಪ್ಪಿದ್ದರೆ ಗುಂಡು ಹೊಡೆಯಿರಿ ಎಂದು ಅಳಲು ತೋಡಿಕೊಂಡರು. ನಾವು ಯಾವುದೇ ಕಾರಣಕ್ಕೂ ದೇಶ ವಿರೋಧಿ ಕೆಲಸ ಮಾಡುವುದಿಲ್ಲ. ಎಲ್ಲರ ಜತೆ ಸ್ನೇಹದಿಂದ ಇದ್ದೇವೆ. ಮೊಬೈಲ್ ಅಂಗಡಿ ಯುವಕರಿಗೂ ನಮಗೂ ಉತ್ತಮ ವ್ಯಾವಹಾರಿಕ ಬಾಂಧವ್ಯ ಇದೆ. ಅದನ್ನು ಸ್ಪಷ್ಟಪಡಿಸಿದ್ದೇನೆ. ತನಿಖಾಧಿಕಾರಿಗಳು ಉಳಿದವರ ಬಳಿ ಏನು ಕೇಳಿದ್ದಾರೋ ಗೊತ್ತಿಲ್ಲ ಎಂದೂ ಸಾಯಿಪ್ರಸಾದ್ ತಿಳಿಸಿದರು.