Advertisement

26/11ರ ದಾಳಿಯ ಮಾಸ್ಟರ್‌ಮೈಂಡ್: ಪಾಕ್‌ನಲ್ಲಿ ಹಫೀಜ್‌ಗೆ 78 ವರ್ಷ ಜೈಲು

01:08 AM Jan 12, 2024 | Team Udayavani |

ಹೊಸದಿಲ್ಲಿ: 26/11ರ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಮತ್ತು ಲಷ್ಕರೆ ತಯ್ಯಬಾದ ಸಂಸ್ಥಾಪಕ ಹಫೀಜ್‌ ಸಯೀದ್‌ ಪಾಕಿಸ್ಥಾನ ಸರಕಾರದ ವಶದಲ್ಲಿದ್ದು, ಭಯೋತ್ಪಾದನೆಗೆ ಹಣಕಾಸು ಸಹಾಯ ಮಾಡಿದ ಪ್ರಕರ ಣಗಳಲ್ಲಿ 78 ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿ ಸುತ್ತಿದ್ದಾನೆ.

Advertisement

2020ರ ಫೆ.12ರಿಂದ ಆತ ಜೈಲಿನಲ್ಲಿದ್ದಾನೆ ಎಂದು ವಿಶ್ವ ಸಂಸ್ಥೆಯ ನಿರ್ಬಂಧಗಳ ಸಮಿತಿ ತಿಳಿಸಿದೆ. ಕೇಂದ್ರ ಸರ ಕಾರ ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಈಗಾಗಲೇ ದಾಖಲೆಗಳನ್ನು ಸಲ್ಲಿಸಿದೆ. ಭಾರತ ಸರಕಾರದ ಜತೆಗೆ ಹಸ್ತಾಂತರ ಒಪ್ಪಂದ ಇಲ್ಲ ಎಂಬ ಕಾರಣಕ್ಕೆ ಸಯೀದ್‌ನನ್ನು ಭಾರತಕ್ಕೆ ನೀಡಲು ಸಾಧ್ಯವಾಗದು ಎಂದು ಪಾಕ್‌ ಸರಕಾರ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next