Advertisement

ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ 25,000 ಕಿ.ಲೀ ಡೀಸೆಲ್‌ ಹೆಚ್ಚುವರಿ ವಿತರಣೆಗೆ ಆದೇಶ

12:53 AM Feb 23, 2023 | Team Udayavani |

ಉಡುಪಿ: ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಕರರಹಿತ 25 ಸಾವಿರ ಕಿಲೋ ಲೀ. ಡೀಸೆಲ್‌ ಹೆಚ್ಚುವರಿಯಾಗಿ ವಿತರಿಸಲು ಸರಕಾರ ಆದೇಶಿಸಿದೆ.

Advertisement

ಯಾಂತ್ರೀಕೃತ ದೋಣಿಗಳಿಗೆ ಕರರಹಿತ 25 ಸಾವಿರ ಕಿ.ಲೀ. ಡೀಸೆಲ್‌ 2022-23ನೇ ಸಾಲಿಗೆ ಹೆಚ್ಚುವರಿ ಯಾಗಿ ವಿತರಿಸಲು ಫೆ. 22ರಂದು ಸರಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಸರಕಾರವು ಕರರಹಿತ ಡೀಸೆಲನ್ನು ಡೆಲಿವರಿ ಪಾಯಿಂಟ್‌ ನಲ್ಲಿ ವಿತರಿಸಲು ಆದೇಶಿಸಿದ್ದು, 2022 – 23ನೇ ಸಾಲಿಗೆ ಆರ್ಥಿಕ ವರ್ಷ ಎಪ್ರಿಲ್‌ನಿಂದ ಅನ್ವಯ ವಾಗುವಂತೆ ದೋಣಿಗಳಿಗೆ ವಾರ್ಷಿಕ ಕರರಹಿತ ಡೀಸೆಲ್‌ ಮಿತಿಯನ್ನು 1.50 ಲಕ್ಷ ಕಿಲೋ ಲೀಟರ್‌ನಿಗದಿಪಡಿಸಿರುತ್ತದೆ. ಯಾಂತ್ರಿಕ ದೋಣಿಗಳಿಗೆ ನೀಡುತ್ತಿರುವ ಕರರಹಿತ ಡೀಸೆಲ್‌ ಕೋಟಾ
ಡಿಸೆಂಬರ್‌ಗೆ ಮುಗಿಯುತ್ತಿದ್ದು, ಸದ್ದರಿ ಕೋಟಾ ಸಾಕಾಗುತ್ತಿಲ್ಲವಾ ದ್ದರಿಂದ ಪ್ರಸ್ತುತ ನಿಗದಿಯಾಗಿರುವ ವಾರ್ಷಿಕ ಮಿತಿಯನ್ನು 1.50 ಲಕ್ಷ ಕಿ.ಲೀ.ದಿಂದ 2 ಲಕ್ಷ ಕಿಲೋ ಲೀ.ಗೆ ಹೆಚ್ಚಿಸಲು ಮನವಿ ಮಾಡಲಾಗಿತ್ತು. ಅಲ್ಲದೆ ಪ್ರತೀ ಮಾಹೆಗೆ ಸರಾಸರಿ 17,500 ಕಿಲೋ ಲೀಟರ್‌ಪ್ರಮಾಣ ಬೇಕಾಗಿದ್ದು, ಅದರಂತೆ ಫೆಬ್ರವರಿ ಯಿಂದ ಮಾರ್ಚ್‌ ವರೆಗೆ ಕನಿಷ್ಠ 35,000 ಕಿ.ಲೀ. ಬೇಕಿರುವುದರಿಂದ 25,000 ಕಿ.ಲೀ. ಹೆಚ್ಚುವರಿಯಾಗಿ ಕರರಹಿತ ಡೀಸೆಲ್‌ ವಿತರಿಸಲು ಮನವಿ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next