ನವದೆಹಲಿ: ಪಾರದರ್ಶಕತೆ ಮತ್ತು ಸುಲಭ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ಮುಖ ಗುರುತಿಸುವಿಕೆ ತಂತ್ರಜ್ಞಾನ ಸಹಾಯದಿಂದ ಪಿಂಚಣಿದಾರರು ಡಿಜಿಟಲ್ ಜೀವಿತ ಪ್ರಮಾಣಪತ್ರ ಪಡೆಯಲು ಕೇಂದ್ರ ಸರ್ಕಾರ ಉತ್ತೇಜಿಸುತ್ತದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರು.
Advertisement
ಪಿಂಚಣಿದಾರರು www.jeevanpramaan.gov.in ಮೂಲಕ ಅಥವಾ “ಜೀವನ್ ಪ್ರಮಾಣ’ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ದೇಶವ್ಯಾಪಿ ನಡೆದ 20 ದಿನಗಳ ಅಭಿಯಾನದಲ್ಲಿ ಕೇಂದ್ರ ಸರ್ಕಾರದ 25 ಲಕ್ಷ ಪಿಂಚಣಿದಾರರು ಡಿಜಿಟಲ್ ಜೀವಿತ ಪ್ರಮಾಣಪತ್ರ ಹೊಂದಿದ್ದಾರೆ.