Advertisement

Kushtagi: 200 ಮೀಟರ್ ಭೂಮಿ ಬಿರುಕು; ಯಾವುದೇ ಕ್ಷಣದಲ್ಲಿ ಒಡೆಯುವ ಸಾದ್ಯತೆ ಇದೆ

12:32 PM Nov 19, 2023 | Team Udayavani |

ಕುಷ್ಟಗಿ: ತಾಲೂಕಿನ ಮನ್ನೇರಾಳ ಕೆರೆಯ ಒಡ್ಡು ಪ್ರದೇಶದಲ್ಲಿ 200 ಮೀಟರ್ ಬಿರುಕು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಒಡೆಯುವ ಸಾದ್ಯತೆ ಇದೆ ಎಂದು ಜಿ.ಪಂ. ಮಾಜಿ ಸದಸ್ಯ ನೇಮಣ್ಣ ಮೇಲಸಕ್ರಿ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಕುಷ್ಟಗಿ ಹಳೆಯ ಪ್ರವಾಸಿ ಮಂದಿರದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 2007 ರಲ್ಲಿ 25 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಸಣ್ಣ ನೀರಾವರಿ ಇಲಾಖೆ ಅಂತರ್ಜಲ ವೃದ್ದಿಗೆ ಜಿನಗು ಕೆರೆ ನಿರ್ಮಿಸಿದೆ. ಕಳದ 2009 ರ ಮಹಾ ಮಳೆಗೆ ಮೊದಲ ಬಾರಿಗೆ ಕೆರೆ ಭರ್ತಿಯಾಗಿತ್ತು.

ಈ ಸಂದರ್ಭದಲ್ಲಿ ಕೆರೆ ಅಲ್ಲಲ್ಲಿ ಬಸಿ ಕಾಣಿಸಿಕೊಂಡಿದ್ದರೂ ಸಣ್ಣ ನೀರಾವರಿ ಇಲಾಖೆ ತಲೆ ಕೆಡಿಸಿಕೊಂಡಿಲ್ಲ. ಕೆಲ ತಿಂಗಳ‌ ಹಿಂದೆ ಕೆರೆ ತುಂಬುವ ಯೋಜನೆಯಲ್ಲಿ ಮನ್ನೇರಾಳ ಕೆರೆಗೆ ಕೃಷ್ಣಾ ನದಿ ನೀರು, ಪೈಪಲೈನ್ ಮೂಲಕ ಹರಿಸಲಾಗಿದೆ.

ಬರಗಾಲದ ಈ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸಿರುವುದು ಅಂತರ್ಜಲ ಸ್ಥಿರತೆಯಿಂದ ರೈತರಿಗೆ ಅನಕೂಲವೇ ಆಗಿದೆ. ಆದರೆ ಸದರಿ ಕೆರೆ ಒಡೆಯುವ ಅಪಾಯವಿದೆ. ಯಾವುದೇ ಕ್ಷಣಗಳಲ್ಲಿ ಒಡೆಯುವ ಸಾದ್ಯತೆಯ ವದಂತಿಗಳು ಉಭಯ ಗ್ರಾಮದ ಗ್ರಾಮಸ್ಥರನ್ನು ನಿದ್ದೆಗೆಡಿಸಿದೆ.

Advertisement

ಕೆಲವು ದಿನಗಳ ಹಿಂದೆ ಕೆರೆಯ ಒಡ್ಡು ಪ್ರದೇಶದಲ್ಲಿ 200 ಮೀಟರ್ ಬಿರುಕು ಕಾಣಿಸಿಕೊಂಡಿದ್ದು ಭಯ ಇನ್ನಷ್ಟು ಜಾಸ್ತಿಯಾಗಿದೆ. ಮನ್ನೇರಾಳ‌ ಹಾಗೂ ಸೇಬಿನಕಟ್ಟಿ ಗ್ರಾಮಗಳಲ್ಲಿ ಆತಂಕ‌ ಮನೆ ಮಾಡಿದ್ದು ಕೆರೆ ಒಡೆದರೆ ಇನ್ನೇನು ಕಾದಿದೆ ಎನ್ನುವ ಆತಂಕದ ಮದ್ಯೆ ಜನ ಬದುಕುವಂತಾಗಿದೆ.

ಮೊದಲೇ ಈ ಕೆರೆ ನಿರ್ಮಾಣ ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ ಕೆರೆ ಭಧ್ರವಾಗಿಲ್ಲ. ಇಂತಹ ಅಭದ್ರ ಕೆರೆಗೆ ಕೆರೆ ಸಾಮಾರ್ಥ್ಯ ಪರೀಕ್ಷಿಸಿಸದೇ ಕೃಷ್ಣಾ ನೀರು ಹರಿಸಿರುವುದು ನೀರಿನ ಒತ್ತಡಕ್ಕೆ ಕೆರೆ ಒಡೆಯುವ ಸಾದ್ಯತೆಗಳಿದ್ದು, ತುರ್ತಾಗಿ ಕೆರೆಯ ಒಡ್ಡು ಪ್ರದೇಶದಲ್ಲಿ ಒಡ್ಡಿನ ತಡೆಗೋಡೆ ನಿರ್ಮಿಸಿ, ಮನ್ನೇರಾಳ, ಸೇಬಿನಕಟ್ಟಿ ಜನ, ಜಾನುವಾರು, ಬೆಳೆ ಹಾನಿ, ಜೀವ ಹಾನಿ, ಭೂಮಿಯ ಫಲವತ್ತತೆ ಆತಂಕ ದೂರ ಮಾಡಬೇಕೆಂದು ನೇಮಣ್ಣ ಮೇಲಸಕ್ರಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next