Advertisement

Gujarat ; ಸಿಡಿಲಿಗೆ 20 ಮಂದಿ ಮೃತ್ಯು: ಅಮಿತ್ ಶಾ ಸಂತಾಪ

05:53 PM Nov 27, 2023 | Team Udayavani |

ಅಹ್ಮದಾಬಾದ್‌ : ಗುಜರಾತ್ ನಲ್ಲಿ ಅಕಾಲಿಕವಾಗಿ ಸಿಡಿಲಿನ ಆರ್ಭಟದೊಂದಿಗೆ ಸುರಿದ ವ್ಯಾಪಕ ಮಳೆಯ ಸಂದರ್ಭದಲ್ಲಿ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

Advertisement

ಗುಜರಾತ್‌ನ ವಿವಿಧ ಭಾಗಗಳಲ್ಲಿ ಸಿಡಿಲು ಬಡಿದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ದಾಹೋದ್ ಜಿಲ್ಲೆಯಲ್ಲಿ ನಾಲ್ವರು, ಭರೂಚ್‌ನಲ್ಲಿ ಮೂವರು, ತಾಪಿಯಲ್ಲಿ ಇಬ್ಬರು ಮತ್ತು ಅಹಮದಾಬಾದ್, ಅಮ್ರೇಲಿ, ಬನಸ್ಕಾಂತ, ಬೊಟಾಡ್, ಖೇಡಾ, ಮೆಹ್ಸಾನಾ, ಪಂಚಮಹಲ್, ಸಬರ್ಕಾಂತ, ಸೂರತ್, ಸುರೇಂದ್ರನಗರ ಮತ್ತು ದೇವಭೂಮಿ ದ್ವಾರಕಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಎಸ್‌ಇಒಸಿ ಅಧಿಕಾರಿ ತಿಳಿಸಿದ್ದಾರೆ.

IMD ಅಹಮದಾಬಾದ್ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ಅವರು ಸೋಮವಾರ ಮಳೆ ಕಡಿಮೆಯಾಗಲಿದ್ದು, ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕೇಂದ್ರೀಕೃತವಾಗಿರಲಿದೆ. ಈಶಾನ್ಯ ಅರಬ್ಬಿ ಸಮುದ್ರ ಮತ್ತು ಪಕ್ಕದ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಮಳೆಯಾಗುತ್ತಿದೆ ಎಂದು ತಿಳಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದು, ಸ್ಥಳೀಯ ಆಡಳಿತವು ಪರಿಹಾರ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next